ವಾಷಿಂಗ್ಟನ್: ಇತ್ತೀಚೆಗಷ್ಟೇ ತನ್ನ ಕಾರ್ಯಾಚರಣೆ ಆರಂಭಿಸಿರುವ ಜಗತ್ತಿನ ಅತ್ಯಂತ ದೊಡ್ಡ ಮತ್ತು ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕ `ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್’ ಮತ್ತೊಂದು ಮೋಡಿಮಾಡುವಂತಹ ಚಿತ್ರವನ್ನು ಸೆರೆಹಿಡಿದಿದೆ.
1. Make way for the king of the solar system! ????
New Webb images of Jupiter highlight the planet's features, including its turbulent Great Red Spot (shown in white here), in amazing detail. These images were processed by citizen scientist Judy Schmidt: https://t.co/gwxZOitCE3 pic.twitter.com/saz0u61kJG
— NASA Webb Telescope (@NASAWebb) August 22, 2022
Advertisement
ಕೆಲ ದಿನಗಳ ಹಿಂದೆಯಷ್ಟೇ ಬ್ರಹ್ಮಾಂಡ ಹುಟ್ಟಿದಾಗಿನ ಮೊದಲ ನಕ್ಷತ್ರಪುಂಜದ ಚಿತ್ರವನ್ನು ಸೆರೆ ಹಿಡಿದು ತನ್ನ ಬ್ಲಾಗ್‌ನಲ್ಲಿ ಪ್ರಕಟಿಸಿತ್ತು. ಇದೀಗ ಗುರು ಗ್ರಹದ ಚಿತ್ರಗಳನ್ನು ಸೆರೆ ಹಿಡಿದು ಅಚ್ಚರಿ ಮೂಡಿಸಿದೆ. ಅಲ್ಲದೇ ವಿಜ್ಞಾನಿಗಳಿಗೆ ಗುರುಗ್ರಹದ ಒಳನೋಟಗಳ ಬಗ್ಗೆ ತನ್ನ ಬ್ಲಾಗ್‌ಪೋಸ್ಟ್ನಲ್ಲಿ ಮಾಹಿತಿ ನೀಡುವುದಾಗಿ ಹೇಳಿದೆ. ಇದನ್ನೂ ಓದಿ: ಧರ್ಮ ನಿಂದನೆ ಆರೋಪ – ಹಿಂದೂ ವ್ಯಕ್ತಿ ಅಪಾರ್ಟ್ಮೆಂಟ್ ಸುತ್ತ ಜನವೋ ಜನ
Advertisement
Advertisement
ಈಗ ಸೆರೆಹಿಡಿದಿರುವ ಗುರುಗ್ರಹದ ಚಿತ್ರದಲ್ಲಿ ಅಲಂಕಾರಿಕಾ ವಿನ್ಯಾಸಗಳನ್ನೂ ತೋರಿಸಿದೆ. ಜೊತೆಗೆ ಉತ್ತರ ಮತ್ತು ದಕ್ಷಿಣ ಧ್ರುವಗಳ ಮೇಲೆ ನೈಸರ್ಗಿಕ ಬೆಳಕಿನ ಪ್ರದರ್ಶನ(ಆರೋರಾ) ನೋಟವನ್ನೂ ಕಾಣುವಂತೆ ಗುರುತಿಸಿದೆ.
Advertisement
ಇದರಿಂದ ಗುರು ಗ್ರಹ ಇಷ್ಟು ಉತ್ತಮ ಸ್ಥಿತಿಯಲ್ಲಿದೆ ಎಂದು ಊಹಿಸಿರಲಿಲ್ಲ ಎಂಬುದಾಗಿ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಎಮೆರಿಟಾ ಹಾಗೂ ಗ್ರಹಗಳ ಖಗೋಳಶಾಸ್ತ್ರಜ್ಞ ಇಮ್ಕೆ ಡಿ ಪಾಟರ್ ಪ್ರಶಂಸೆ ವ್ಯಕ್ತಪಡಿಸಿರುವುದಾಗಿ ನಾಸಾ ಉಲ್ಲೇಖಿಸಿದೆ. ಇದನ್ನೂ ಓದಿ: ಭಾರತದಲ್ಲಿ ಆತ್ಮಾಹುತಿ ದಾಳಿಗೆ ಸ್ಕೆಚ್ ಹಾಕಿದ್ದ ISIS ಭಯೋತ್ಪಾದಕ ರಷ್ಯಾದಲ್ಲಿ ಅರೆಸ್ಟ್
ಗುರುಗ್ರಹದ ಸುತ್ತಲೂ ಇರುವ ಉಂಗುರಗಳು, ಸಣ್ಣ-ಸಣ್ಣ ಉಪಗ್ರಹಗಳು ಹಾಗೂ ಗೆಲಾಕ್ಸಿಗಳನ್ನು ಒಂದೇ ಚಿತ್ರದಲ್ಲಿ ಬರುವಂತೆ ಸೆರೆ ಹಿಡಿಯಲಾಗಿದೆ. ಜೇಮ್ಸ್ ವೆಬ್ ವೀಕ್ಷಣಾಲಯದ ನಿಯರ್-ಇನ್‌ಫ್ರಾರೆಡ್ ಕ್ಯಾಮೆರಾ ಗ್ರಹದ ವಿವರಗಳನ್ನು ಪ್ರದರ್ಶಿಸುವ ವಿಶೇಷ ಫಿಲ್ಟರ್‌ಗಳನ್ನೂ ಹೊಂದಿದೆ.
ಗ್ರಹದ ಸುತ್ತಲೂ ಹೊಳೆಯುವ ಅರೋರಾ (ನೈಸರ್ಗಿಕ ಬೆಳಕಿನ ಪ್ರದರ್ಶನ) ಇದು ಮೋಡಗಳ ಮೇಲಿನ ಮಬ್ಬುಗಳನ್ನು ಸರಿಸಿ ಪ್ರತಿಫಲಿಸುವ ಬೆಳಕನ್ನು ತೋರಿಸುತ್ತದೆ. ಉತ್ತರ ಹಾಗೂ ದಕ್ಷಿಣ ದ್ರುವಗಳಲ್ಲಿ ಹೊಳೆಯುವ ಬೆಳಕನ್ನೂ ಗುರುತಿಸಿದೆ.
ಜೇಮ್ಸ್ ವೆಬ್ ಟೆಲಿಸ್ಕೋಪ್ ಅನ್ನು 2021 ರಲ್ಲಿ ಫ್ರೆಂಚ್ ಗಯಾನಾದಿಂದ ಏರಿಯನ್ 5 ರಾಕೆಟ್ ಮೇಲೆ ಉಡಾವಣೆ ಮಾಡಲಾಯಿತು.