ನವದೆಹಲಿ/ಬೆಂಗಳೂರು: ಆದಾಯ ತೆರಿಗೆ ರಿಟರ್ನ್ (IT Returns) ಸಲ್ಲಿಕೆಯಲ್ಲಿ ತಪ್ಪು ಮಾಹಿತಿ ನೀಡುವ ಅಥವಾ ಆದಾಯವನ್ನು ಮರೆಮಾಚುವ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ (Income Tax Department) ಕಠಿಣ ಎಚ್ಚರಿಕೆ ನೀಡಿದೆ.
ಹೌದು. ಹೊಸ ಆದಾಯ ತೆರಿಗೆ ನಿಯಮಗಳು ಜಾರಿಯಾಗಿದ್ದು, ತೆರಿಗೆದಾರರು ಸುಳ್ಳು ಕಡತಗಳನ್ನು ತೋರಿಸಿದರೆ ಅಥವಾ ಆದಾಯ ಮರೆಮಾಚಿದರೆ ಶೇ. 200ರವರೆಗೆ ದಂಡ, ವಾರ್ಷಿಕ ಶೇ. 24ವರೆಗೆ ಬಡ್ಡಿ ವಿಧಿಸಲಾಗುತ್ತದೆ. ಅಲ್ಲದೇ ಸೆಕ್ಷನ್ 276 ಸಿ ಅಡಿಯಲ್ಲಿ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯೂ ಇದೆ. ಹಾಗಾಗಿ, ಇನ್ಮುಂದೆ ಸಣ್ಣ ತಪ್ಪುಗಳಿಗೂ ತೆರಿಗೆ ಪಾವತಿದಾರರು ದೊಡ್ಡ ಬೆಲೆ ತೆರಬೇಕಾಗುತ್ತದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ ನೌಕಾದಳದಿಂದ ಮಿಸೈಲ್ ದಾಳಿಗೆ ಟಾರ್ಗೆಟ್ ಫಿಕ್ಸ್ ಆಗಿತ್ತು – ಆದ್ರೆ ಅಂತಿಮ ಆದೇಶ ಬರಲಿಲ್ಲ
ಒಂದು ವೇಳೆ ನಿಮ್ಮ ಲೆಕ್ಕ ಪರಿಶೋಧಕರು ಅಥವಾ ತೆರಿಗೆ ಸಲಹೆಗಾರರು ತಪ್ಪು ಮಾಡಿದರೂ, ಕಾನೂನಿನ ಪ್ರಕಾರ ತೆರಿಗೆದಾರರಾದ ನೀವೇ ಸಂಪೂರ್ಣ ಜವಾಬ್ದಾರರಾಗಿರುತ್ತೀರಿ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಬೆಂಬಲಿಸಿದ ನಿವೃತ್ತ ಸಿಜೆಐ ಚಂದ್ರಚೂಡ್
ಈ ಹೊಸ ಕಠಿಣ ನಿಯಮಗಳು ಯಾವುದೇ ವಿನಾಯಿತಿ ಇಲ್ಲದೇ ಎಲ್ಲರಿಗೂ ಅನ್ವಯಿಸುತ್ತವೆ. ಅಂದರೆ, ಸಂಬಳ ಪಡೆಯುವ ನೌಕರರು, ಫ್ರೀಲ್ಯಾನ್ಸರ್ಗಳು ಹಾಗೂ ಡಾಕ್ಟರ್, ವಕೀಲರು ಸೇರಿದಂತೆ ಇತರ ವೃತ್ತಿಪರರು ಮತ್ತು ಉದ್ಯಮಿಗಳಿಗೂ ಅನ್ವಯಿಸುತ್ತದೆ. ಇದನ್ನೂ ಓದಿ: ರಾಜ್ಯಾಧ್ಯಕ್ಷರ ಬದಲಿಸುವ ಪ್ರಸ್ತಾಪ ದೆಹಲಿಯಲ್ಲಿ ಕೇಳಿ ಬಂದಿಲ್ಲ: ಆರ್.ಅಶೋಕ್