ಚಿಕ್ಕಬಳ್ಳಾಪುರ: ನಿರ್ಮಾಣ ಹಂತದಲ್ಲಿದ್ದ ನೂತನ ಮನೆಗೆ ತಡರಾತ್ರಿ ರಾತ್ರಿ ನುಗ್ಗಿರುವ ಕಳ್ಳರು, ಎಲೆಕ್ಟ್ರಿಕ್ ಸ್ವಿಚ್ ಬೋರ್ಡ್ ನಿಂದ ಎಳೆದು 1.5 ಲಕ್ಷ ಮೌಲ್ಯದ ವೈರಿಂಗ್ ಕೇಬಲ್ ಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿಯಲ್ಲಿ ನಡೆದಿದೆ.
Advertisement
ಗ್ರಾಮದ ಹೊರವಲಯದ ತೋಟದ ಬಳಿ ನಟರಾಜ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ವಡ್ಡರಹಳ್ಳಿಯ ನಿವಾಸಿಯಾದ ನಟರಾಜ್ ತಿರುಮಗೊಂಡನಹಳ್ಳಿಯ ತೋಟದ ಬಳಿ ಹೊಸ ಮನೆಯನ್ನು ಕಟ್ಟಿಸುತ್ತಿದ್ದರು. ಮನೆ ನಿರ್ಮಾಣ ಹಂತದಲ್ಲಿದ್ದು, ಕಟ್ಟಡಕ್ಕೆ ಎಲೆಕ್ಟ್ರಿಕ್ ವೈರಿಂಗ್ ಹಾಕಲಾಗುತ್ತಿತ್ತು. ನಿನ್ನೆ ಸಂಬಂಧಿಕರ ಮದುವೆಗೆಂದು ಕುಟುಂಬ ಸಮೇತರಾಗಿ ಹೋಗಿದ್ದ ವೇಳೆ ಕಳ್ಳತನ ನಡೆದಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ನಾಲ್ವರು ಬೈಕ್ ಕಳ್ಳರ ಬಂಧನ- 10 ಲಕ್ಷ ಮೌಲ್ಯದ 22 ಬೈಕ್ ವಶ
Advertisement
Advertisement
ಮದುವೆ ಕಾರ್ಯಕ್ರಮದಿಂದ ರಾತ್ರಿ 11 ಗಂಟೆಗೆ ಹಿಂದುರುಗಿ, ಹೊಸ ಮನೆ ಬಳಿ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಬಾಗಿಲು ಒಡೆದಿರುವ ಕಳ್ಳರು, ಸ್ವಿಚ್ ಬೋರ್ಡ್ ನಿಂದ ವೈರಿಂಗ್ ಕೇಬಲ್ ಎಳೆದು ಸುಮಾರು 1.5 ಲಕ್ಷ ರೂ. ಮೌಲ್ಯದ ಕೇಬಲ್ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.