ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕ ಎಂಬಲ್ಲಿ ಗೃಹಪ್ರವೇಶಕ್ಕೆ ರೆಡಿ ಇದ್ದ ಮನೆ ಮಳೆಯಿಂದ ನೆಲಸಮ ಆಗಿರುವ ಘಟನೆ ನಡೆದಿದೆ.
Advertisement
3 ದಿನದ ಹಿಂದೆ ಮರ ಬಿದ್ದು ಮನೆ ಗೋಡೆಗಳಲ್ಲಿ ಬಿರುಕು ಬಿಟ್ಟಿತ್ತು. ಬಿರುಕು ಬಿಟ್ಟಿರುವ ಗೋಡೆ ರಿಪೇರಿ ಕೆಲಸ ಮಾಡಲಾಗಿತ್ತು. ಜುಲೈ.18ರಂದು ಗೃಹಪ್ರವೇಶ ನೆರವೇರಿಸಲು ಎಲ್ಲ ತಯಾರಿ ನಡೆದಿತ್ತು. ಆದರೆ ಅಷ್ಟರಲ್ಲೇ ಗುಡ್ಡ ಕುಸಿದು ಮನೆ ಸಂಪೂರ್ಣ ನೆಲಸಮವಾಗಿದೆ. ಇದನ್ನೂ ಓದಿ: ಕೆನಡಾದಲ್ಲಿ ದೋಣಿ ಅಪಘಾತ- ಇಬ್ಬರು ಕೇರಳಿಗರು ಸಾವು
Advertisement
Advertisement
ತೇಜ್ ಕುಮಾರ್ ಮತ್ತು ತಾರಾಮತಿ ದಂಪತಿಯ ಮನೆ ಇದಾಗಿದ್ದು ಪ್ರಜ್ವಲ್ ಮತ್ತು ಉಜ್ವಲ್ ಎಂಬ ಸಹೋದರರು ಮನೆಯಲ್ಲಿದ್ದರು. ಹಾಲ್ನಲ್ಲಿ ಮಲಗಿ 6.30 ಕ್ಕೆ ಮನೆಯಿಂದ ಹೊರಬಂದಿದ್ದರು. ಈ ವೇಳೆ ಗುಡ್ಡ ಕುಸಿದು 3 ಬೆಡ್ ರೂಂ ತುಂಬ ಮಣ್ಣು ಆವರಿಸಿಕೊಂಡಿದೆ.
Advertisement
ಗುಡ್ಡ ಕುಸಿದ ಹಿನ್ನೆಲೆ ಮನೆ ಬಳಿಯಿದ್ದ 3 ಬೈಕ್ಗಳು ಮಣ್ಣಲ್ಲಿ ಸಿಲುಕಿ ಹಾನಿಯಾಗಿವೆ. ಮನೆಯಲ್ಲಿದ್ದವರ ಹೊರ ಬಂದಿರೋದ್ರಿಂದ ದುರಂತವೊಂದು ತಪ್ಪಿದೆ.