Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dharwad

ರಸ್ತೆಗಳು ಆರ್ಥಿಕ, ಸಾಂಸ್ಕೃತಿಕ ಹಾಗೂ ಕೃಷಿಯ ಬೆಳವಣಿಗೆಗೆ ಪೂರಕ: ಬೊಮ್ಮಾಯಿ

Public TV
Last updated: February 28, 2022 8:52 pm
Public TV
Share
3 Min Read
BASAVARJ BOMMAI HUBALLI PROGRAM
SHARE

ಹುಬ್ಬಳ್ಳಿ: ರಸ್ತೆಗಳು ಸಾರಿಗೆ ಸಂಪರ್ಕಕ್ಕೆ ಮಾತ್ರವಲ್ಲದೆ, ಆರ್ಥಿಕ, ಸಾಂಸ್ಕೃತಿಕ ಹಾಗೂ ಕೃಷಿಯ ಬೆಳವಣಿಗೆಗೆ ಪೂರಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

BASVARJ BOMMAI PROGRAM HUBALLI

ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಇಂದು ಹುಬ್ಬಳ್ಳಿಯಲ್ಲಿ 12,795 ಕೋಟಿ ರೂ.ಗಳ ವೆಚ್ಚದಲ್ಲಿ 925 ಕಿ.ಮೀ 26 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದರು. ಈ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ ಸಿಎಂ, ಕರ್ನಾಟಕ ಪ್ರಗತಿಪರ ರಾಜ್ಯ. ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳಿಗೆ ರಾಜ್ಯದ ಸಹಕಾರವಿದ್ದು, ಶೇ.100 ರಷ್ಟು ಅಭಿವೃದ್ಧಿಯನ್ನು, ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಕಾಣಬಯಸುತ್ತೇವೆ ಎಂದರು. ಇದನ್ನೂ ಓದಿ: ಅಮೆರಿಕ ಮಾದರಿ ರಸ್ತೆ ಸಂಪರ್ಕ ಜಾಲ ಅಭಿವೃದ್ಧಿ: ನಿತಿನ್ ಗಡ್ಕರಿ ಭರವಸೆ

ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಕೆಲಸ ಮಾಡಬೇಕು. ಕೇಂದ್ರ ಸಚಿವರು ಭೂ ಸ್ವಾಧೀನಕ್ಕೆ ಶೇ.25 ರಷ್ಟು ಮೊತ್ತವನ್ನು ನೀಡಿದರೆ ಯೋಜನೆಯಲ್ಲಿನ ಮುಖ್ಯ ಸಾಮಾಗ್ರಿಗಳಾದ ಸ್ಟೀಲ್, ಸಿಮೆಂಟ್‍ಗಳಿಗೆ ಕೇಂದ್ರ ಸರ್ಕಾರದ ಜಿ.ಎಸ್.ಟಿ ಯಲ್ಲಿ ವಿನಾಯ್ತಿ ನೀಡುವುದು ಹಾಗೂ ಜೆಲ್ಲಿ, ಮರಳು ಇತ್ಯಾದಿಗಳಿಗೆ ರಾಯಲ್ಟಿಯಲ್ಲಿ ವಿನಾಯ್ತಿ ನೀಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಒಪ್ಪಂದವನ್ನು ಸಹ ಸಹಿ ಮಾಡಲಾಗುತ್ತಿದೆ. ಇದೆ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಎಸ್.ಟಿ. ಆರ್.ಆರ್, ಗುಲ್ಬರ್ಗಾ, ಬೆಳಗಾವಿಯ ಇತರೆ ರಸ್ತೆಗಳಿಗೆ ರಾಜ್ಯ ಸರ್ಕಾರ ಸಹಕಾರ ನೀಡಲು ಸಿದ್ದವಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಕೈಗೆತ್ತಿಕೊಳ್ಳಲು ಮನವಿ ಮಾಡಿದರು. ರಾ-ಹೆ ಪಕ್ಕದ ಜಲಶಕ್ತಿ ಯೋಜನೆಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

BASAVARJ BOMMAI PROGRAM HUBALLI

13,000 ಕೋಟಿ ರೂ.ಗಳ ವೆಚ್ಚದಲ್ಲಿ 925 ಕಿಮೀ ರಸ್ತೆ ಕಾಮಗಾರಿಯನ್ನು ಶಂಕುಸ್ಥಾಪನೆ ಮಾಡಿದ್ದಕ್ಕಾಗಿ ಅಭಿನಂದಿಸಿದರು. ನವ ಕರ್ನಾಟಕ ದಿಂದ ನವ ಭಾರತ ನಿರ್ಮಾಣಕ್ಕೆ ಸಿದ್ಧರಿರುವುದಾಗಿ ನುಡಿದರು.

ಕ್ರಿಯಾಶೀಲ ಸಚಿವರು
ನಿತಿನ್ ಗಡ್ಕರಿ ಅವರು ಕೇಂದ್ರ ಸಚಿವರಾದ ಸಂದರ್ಭದಲ್ಲಿ ಇಡೀ ಭಾರತದಲ್ಲಿ ಮಹಾರಾಷ್ಟ್ರದಲ್ಲಿ ಅವರು ಮಾಡಿರುವ ಕೆಲಸಗಳ ರೀತಿಯಲ್ಲಿ ಬಡಲಾವಣೆಗಳು ಆಗಲಿವೆ ಎಂದು ನಮಗೆ ಅವರಿಂದ ಬಹಳಷ್ಟು ನಿರೀಕ್ಷೆ ಇತ್ತು. ದೇಶದ ಜನರ ನಿರೀಕ್ಷೆಯನ್ನು ಈಡೇರಿಸಿ, ದೇಶದ ಅಭಿವೃದ್ಧಿಗೆ ಬಹಳ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದರು. ಇದನ್ನೂ ಓದಿ: ನಿಪ್ಪಾಣಿಯಿಂದ ಕಿತ್ತೂರುವರೆಗಿನ ರಾಷ್ಟ್ರೀಯ ಪಕ್ಕದಲ್ಲಿ ಜಲಶಕ್ತಿ ನಿರ್ಮಾಣ: ಬೊಮ್ಮಾಯಿ

ದೇಶದಲ್ಲಿ ಅಭಿವೃದ್ಧಿಯ ಚಿಂತನೆಯಲ್ಲಿ ಬದಲಾವಣೆಗಳಾಗಿವೆ. ಅಸಾಧ್ಯ ಎನ್ನುತ್ತಿದ್ದ ಎಲ್ಲವನ್ನೂ ಸಾಧ್ಯ ಮಾಡಿ ತೋರಿಸುವ ಕಾಲ ಬಂದಿದೆ. ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಯ ಫಲದಿಂದ ಎಲ್ಲ ಪ್ರಮುಖ ವಿಚಾರಗಳಿಗೆ ಹೊಸತನ, ಶಕ್ತಿ, ವೇಗ ಬಂದಿದೆ. ಜನಸಂಖ್ಯೆಯನ್ನು ಬಳಸಿಕೊಂಡು ರಾಷ್ಟ್ರ ಮತ್ತು ರಾಜ್ಯ ಗಳನ್ನು ಕಟ್ಟಲು ಸಾಧ್ಯ ಎಂದು ಪ್ರಧಾನಿಗಳು ತೋರಿಸಿಕೊಟ್ಟಿದ್ದಾರೆ. ಅವರ ಚಿಂತನೆಯನ್ನು ನಿತಿನ್ ಗಡ್ಕರಿ ಅವರು ಅಕ್ಷರಶಃ ಕಾರ್ಯಗತ ಮಾಡಿದ್ದಾರೆ. ಯಾವುದೇ ವಿಚಾರದ ಬಗ್ಗೆ ಅತಿ ಶೀಘ್ರವಾಗಿ ನಿರ್ಣಯ ಮಾಡುವ ಶಕ್ತಿ ಅವರಿಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವೆಲ್ಲರೂ ಆಶ್ಚರ್ಯ ಪಡುವಂಥ ಸಂಗತಿ ಇದು. ಪ್ರತಿಯೊಂದು ಕ್ಷೇತ್ರದ ರಸ್ತೆಗಳ ಹೆಸರುಗಳು ಸಹ ಅವರಿಗೆ ನೆನಪಿರುತ್ತದೆ. ಒಬ್ಬ ಕ್ರಿಯಾಶೀಲ ನಾಯಕ ಏನೆಲ್ಲಾ ಬದಲಾವಣೆಗಳನ್ನು ತರಲು ಸಾಧ್ಯ ಎಂದು ಅವರು ನಿರೂಪಿಸಿದ್ದಾರೆ ಎಂದರು.

Inauguration and Foundation stone laying of 26 NH projects worth Rs 12,795 Cr in Hubballi, Karnataka#PragatiKaHighway #GatiShakti https://t.co/HEa4pqFwWj

— CM of Karnataka (@CMofKarnataka) February 28, 2022

ರಸ್ತೆ ಅಭಿವೃದ್ಧಿಯಿಂದ ಜನರನ್ನು ಸಂಕಷ್ಟಗಳಿಗೆ ಮುಕ್ತಿ
ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ನಿತಿನ್ ಗಡ್ಕರಿ ಅವರ ಕೊಡುಗೆ ಬಹಳ ದೊಡ್ಡದಿದೆ. ಹೊಸಪೇಟೆ-ಹುಬ್ಬಳ್ಳಿ, ಚಿತ್ರದುರ್ಗ-ಹುಬ್ಬಳ್ಳಿ ಯವರೆಗೆ ಷಟ್ಪಥ, ಬೈಪಾಸ್ ರಸ್ತೆ ನೆನೆಗುದಿಗೆ ಬಿದ್ದಿತ್ತು. ಹಲವಾರು ಸಭೆಗಳನ್ನು ಮಾಡಿ ಗಡ್ಕರಿ ಅವರ ಇಚ್ಛಾಶಕ್ತಿಯಿಂದ ಇಂದು ಷಟ್ಪಥ ಹಾಗೂ ಚತುಷ್ಪಥ ರಸ್ತೆಗಳು ಸೇವೆಗೆ ಲಭಿಸಿರುವುದು ಈ ಭಾಗದ ಜನರನ್ನು ಸಂಕಷ್ಟಗಳಿಂದ, ಅಪಘಾತಗಳಿಂದ, ಸಾವು ನೋವುಗಳಿಂದ ಪಾರು ಮಾಡಿದ್ದಾರೆ ಎಂದು ನುಡಿದರು.

ನರಗುಂದ, ಬೀಳಗಿ, ಗಜೇಂದ್ರಗಡ, ಕುಷ್ಟಗಿ , ಸಿಂಧನೂರು ರಾ-ಹೆ 115 ರಸ್ತೆಯ ಕೈಗಾ ನಿಂದ ಇಳಕಲ್ ರಸ್ತೆ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದು, ಇದನ್ನು ಕೂಡಲೇ ಕೈಗೊಳ್ಳಯುವಂತೆ ಹಾಗೂ ಇತರೆ ರಾ-ಹೆಗಳ ಅಭಿವೃದ್ಧಿಗೆ ಮನವಿ ಮಾಡಿದರು. ಇದನ್ನೂ ಓದಿ: ಪಠ್ಯ ಪುಸ್ತಕದಲ್ಲಿ ಕೆಳದಿ ರಾಣಿ ಚೆನ್ನಮ್ಮನ ಹೋರಾಟದ ಕತೆ ಅಳವಡಿಸಲು ಚಿಂತನೆ: ಬೊಮ್ಮಾಯಿ

ಅಭಿನಂದನೆಗಳನ್ನು ಸಲ್ಲಿಕೆ:
ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್, ಸಾರಿಗೆ ಸಚಿವ ಶ್ರೀರಾಮುಲು, ಸಂಸದರಾದ ಶಿವಕುಮಾರ್ ಉದಾಸಿ ಹಾಗೂ ಮಲ್ಲಿಕಾರ್ಜುನ ಖರ್ಗೆ, ಶಾಸಕ ಅರವಿಂದ ಬೆಲ್ಲದ್, ಸೇರಿದಂತೆ ಇತರೆ ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು.

TAGGED:basavarj bommaihighway projectsnitin gadkariನಿತಿನ್ ಗಡ್ಕರಿಬಸವರಾಜ ಬೊಮ್ಮಾಯಿ
Share This Article
Facebook Whatsapp Whatsapp Telegram

You Might Also Like

Shubman Gil
Cricket

ಗಿಲ್‌ ದ್ವಿಶತಕಕ್ಕೆ ದಾಖಲೆಗಳು ಛಿದ್ರ – 510 ರನ್‌ ಹಿನ್ನಡೆಯಲ್ಲಿ ಇಂಗ್ಲೆಂಡ್‌

Public TV
By Public TV
5 hours ago
weather
Chikkamagaluru

ಉತ್ತರ ಕನ್ನಡದ 4, ಚಿಕ್ಕಮಗಳೂರು 6 ತಾಲೂಕಿನ ಶಾಲೆಗಳಿಗೆ ಶುಕ್ರವಾರ ರಜೆ

Public TV
By Public TV
5 hours ago
TB Dam
Bellary

ಟಿಬಿ ಡ್ಯಾಂ 12 ಗೇಟ್ ಓಪನ್ – ನದಿಗೆ 35,100 ಕ್ಯೂಸೆಕ್ ನೀರು ಬಿಡುಗಡೆ

Public TV
By Public TV
6 hours ago
Hubballi bus Driver
Dharwad

ಅಪಘಾತ ಮಾಡಿದ ಬಸ್ ಚಾಲಕರಿಗೆ ಸನ್ಮಾನ – ಡಿಪೋ ಮ್ಯಾನೇಜರ್‌ನಿಂದ ಅಪಹಾಸ್ಯ

Public TV
By Public TV
6 hours ago
Gill
Cricket

ಟೆಸ್ಟ್‌ ಕ್ರಿಕೆಟ್‌ನಲ್ಲಿ ಕ್ಯಾಪ್ಟನ್‌ ಗಿಲ್‌ ಚೊಚ್ಚಲ ದ್ವಿಶತಕ – ಗವಾಸ್ಕರ್‌, ಕೊಹ್ಲಿ ಸೇರಿ ಹಲವು ದಿಗ್ಗಜರ ದಾಖಲೆ ಪುಡಿ ಪುಡಿ

Public TV
By Public TV
9 hours ago
Nayanthara And Vignesh Shivan Slammed For Working With Jani Master Accused Of Sexual Assault
Cinema

ಜಾನಿ ಮಾಸ್ಟರ್ ಜೊತೆಗಿನ ಫೋಟೋ: ಟೀಕೆಗೆ ಒಳಗಾದ ನಯನತಾರಾ-ವಿಘ್ನೇಶ್

Public TV
By Public TV
7 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?