ದೋಹ: ಕತಾರ್‌ನಲ್ಲಿ (Qatar) ಕಾಲ್ಚೆಂಡು ಹಬ್ಬ ಫಿಫಾ ವಿಶ್ವಕಪ್ (FIFA World Cup 2022) ನಾಳೆಯಿಂದ ಆರಂಭಗೊಳ್ಳಲಿದೆ. ಈ ನಡುವೆ ದುಬಾರಿ ಕ್ರೀಡೆಯ ಟಿಕೆಟ್ ದರ (Ticket Costs) ಕೂಡ ದುಬಾರಿಯಾಗಿ ಗೋಚರಿಸಿದೆ.
Advertisement
ಈಗಾಗಲೇ ಫಿಫಾ ವಿಶ್ವಕಪ್-2022 ಅರಬ್ ರಾಷ್ಟ್ರ ಕತಾರ್ ಆತಿಥ್ಯದಲ್ಲಿ ನವೆಂಬರ್ 20 ರಿಂದ ಡಿಸೆಂಬರ್ 18 ರವರೆಗೆ ನಡೆಯಲಿದೆ. ಅರಬ್ಬರ ನಾಡಿನಲ್ಲಿ ಇದೇ ಮೊದಲ ಬಾರಿ ಪುಟ್‍ಬಾಲ್ ವಿಶ್ವಕಪ್ ಟೂರ್ನಿ ಆಯೋಜನೆ ಆಗುತ್ತಿರುವುದು ಗಮನಾರ್ಹ. ಈ ಮೂಲಕ ಕತಾರ್ ಪ್ರತಿಷ್ಠಿತ ಟೂರ್ನಿಯನ್ನು ಆಯೋಜನೆ ಮಾಡುತ್ತಿರುವ ಏಷ್ಯದ 3ನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ಫಿಫಾ ವಿಶ್ವಕಪ್ ಆತಿಥ್ಯ ವಹಿಸುತ್ತಿರುವ ಅತ್ಯಂತ ಪುಟ್ಟ ರಾಷ್ಟ್ರವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ನಡುವೆ ಈ ಬಾರಿ ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‍ನ ಗ್ಲಾಮರ್ ಕಳೆಗಟ್ಟಿದೆ. ಇದಕ್ಕೆ ಕಾರಣ ಮದ್ಯ ಸೇರಿದಂತೆ ಚಿಯರ್ ಗರ್ಲ್ಸ್, ಅರೆಬರೆ ಬಟ್ಟೆ ಧರಿಸಿ ಬರಲು ನಿಷೇಧ ಹೇರಲಾಗಿದೆ. ಇದನ್ನೂ ಓದಿ: ಯೋಧರ ವಿರುದ್ಧ ಮೀಡಿಯಾ ಪಾಟ್ನರ್ಸ್‌ಗೆ ಜಯ – ಮಾಧ್ಯಮ ತಂಡಕ್ಕೆ ಸೌಹಾರ್ದ ಕ್ರಿಕೆಟ್ ಕಪ್
Advertisement
Advertisement
ಈ ಎಲ್ಲದರ ನಡುವೆ ಫಿಫಾ ಪಂದ್ಯ ವೀಕ್ಷಿಸಲು ಪ್ರೇಕ್ಷಕರ ಟಿಕೆಟ್ ದರ ಕೂಡ ದುಬಾರಿಯಾಗಿದೆ. ಕತಾರ್‌ನ ಪೌಂಡ್ ಹಣದ ಮೂಲಕ ಟಿಕೆಟ್ ಖರೀದಿಸಬೇಕಾಗಿದೆ. ಭಾರತ ರೂಪಾಯಿ ಮೌಲ್ಯದ ಪ್ರಕಾರ ಉದ್ಘಾಟನಾ ಪಂದ್ಯದ ಟಿಕೆಟ್ ಬೆಲೆ 5,600 ರೂ. ನಿಂದ ಆರಂಭಗೊಂಡು 17,900 ರೂ. ವರೆಗೆ ಇದೆ. ಅಂತಿಮ 16ರ ಘಟ್ಟದ ಟಿಕೆಟ್ 7,800 ರೂ. ನಿಂದ ಆರಂಭಗೊಂಡು 20,400 ರೂ. ವರೆಗೆ ನಿಗದಿಯಾಗಿದೆ. ಕ್ವಾರ್ಟರ್‌ಫೈನಲ್‌ನ ಟಿಕೆಟ್ 16,700 ರೂ. ನಿಂದ 34,700 ರೂ. ವರೆಗೆ ಇದೆ. ಸೆಮಿಫೈನಲ್ ಪಂದ್ಯಗಳ ಟಿಕೆಟ್ 29,204 ರಿಂದ ಆರಂಭಗೊಂಡು 81,395 ರೂ. ವರೆಗೆ ಇದೆ. ಫೈನಲ್ ಪಂದ್ಯದ ಟಿಕೆಟ್ ಕನಿಷ್ಠ 49,400 ರೂ. ನಿಂದ ಆರಂಭಗೊಂಡು ಗರಿಷ್ಠ 81,988 ರೂ. ವರೆಗೆ ಫಿಕ್ಸ್ ಮಾಡಲಾಗಿದೆ. ಇದನ್ನೂ ಓದಿ: ಅರಬ್ಬರ ನಾಡಲ್ಲಿ ಫಿಫಾ ಜ್ವರ – ಕಾಲ್ಚಳಕದ ಆಟಕ್ಕಿಲ್ಲ ಮದ್ಯದ ಅಮಲು
Advertisement
ಬಿಯರ್ ಕುಡಿಯಲು ಬೇಕು ವಯಸ್ಸಿನ ಆಧಾರ:
ಇನ್ನೂ ಫಿಫಾ ವಿಶ್ವಕಪ್ ಟೂರ್ನಿ ವೇಳೆ ಪ್ರೇಕ್ಷಕರು ಬಿಯರ್ ಸೇರಿದಂತೆ ಮದ್ಯವನ್ನು ಹೊರ ದೇಶಗಳಿಂದ ತರುವಂತಿಲ್ಲ. ಜೊತೆಗೆ 8 ಸ್ಟೇಡಿಯಂಗಳಲ್ಲೂ ಪಂದ್ಯಾವಳಿ ವೇಳೆ ಮದ್ಯ ನಿಷೇಧಿಸಲಾಗಿದೆ. ಉಳಿದಂತೆ ಮದ್ಯ ಕುಡಿಯುವವರು ಲೈಸನ್ಸ್ ಹೊಂದಿರುವ ರೆಸ್ಟೋರೆಂಟ್‍ಗಳಲ್ಲಿ ಬಡ್‍ವೈಸರ್ ಬಿಯರ್‌ಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಬಿಯರ್ ಖರೀದಿಸಲು 21 ವರ್ಷ ಮೇಲ್ಟಟ್ಟವರಿಗೆ ಮಾತ್ರ ಅವಕಾಶ. ತಮ್ಮ ಐಡಿ ಆಧಾರವನ್ನು ನೀಡಿ ಮದ್ಯ ಖರೀದಿಸಲು ಕತಾರ್ ಸರ್ಕಾರ ಅವಕಾಶ ನೀಡಿದೆ.