ನವದೆಹಲಿ: ಸೆಲೆಬ್ರಿಟಿಗಳು, ಸಿನಿಮಾ ನಟ-ನಟಿಯರು, ಪ್ರಭಾವಿ ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಜಾಹೀರಾತು (Advertising) ನೀಡುವುದು ಸಾಮಾನ್ಯ. ಆದರೆ ಇನ್ನು ಮುಂದೆ ಯಾವುದೇ ವಸ್ತು ಅಥವಾ ಸೇವೆಗಳನ್ನು ಪ್ರಚಾರ ಮಾಡುವಾಗ ಸೆಲೆಬ್ರಿಟಿ (Celebrity) ಅಥವಾ ಪ್ರಭಾವಿ ವ್ಯಕ್ತಿಗಳು (Influencers) ಕೆಲ ಗೈಡ್‌ಲೈನ್ಸ್ ಅನ್ನು ಪಾಲಿಸಬೇಕೆಂದು ಕೇಂದ್ರ ತಿಳಿಸಿದೆ.
ಸೆಲೆಬ್ರಿಟಿಗಳು ಹಾಗೂ ಪ್ರಭಾವಿ ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಉತ್ಪನ್ನ ಹಾಗೂ ಸೇವೆಗಳನ್ನು ಅನುಮೋದಿಸುವಾಗ ಕಡ್ಡಾಯವಾಗಿ ಎಂಡೋರ್ಸ್ಮೆಂಟ್ಸ್ ನೋ-ಹೌ (Endorsements Know-How) ಎಂಬ ಹೊಸ ಮಾರ್ಗಸೂಚಿಯನ್ನು (Guideline) ಅನುಸರಿಸಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ತಿಳಿಸಿದೆ. ಇದರ ಪ್ರಕಾರ ಉತ್ಪನ್ನಗಳನ್ನು ಪ್ರಚಾರ ಮಾಡುವಾಗ ಜಾಹೀರಾತು (Advertisement), ಪ್ರಾಯೋಜಿತ (Sponsored), ಸಹಯೋಗ (Collaboration) ಅಥವಾ ಪಾವತಿಸಿದ ಪ್ರಚಾರದಂತಹ (Paid Promotion) ಪದಗಳನ್ನು ಬಳಸಬೇಕು ಎಂದು ಹೇಳಿದೆ.
- Advertisement 2-
- Advertisement 3-
ಗ್ರಾಹಕ ವ್ಯವಹಾರಗಳ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅತಿ ಹೆಚ್ಚು ಫಾಲೋರ್ಸ್‌ಗಳನ್ನು ಹೊಂದಿರುವ ವ್ಯಕ್ತಿಗಳು ಯಾವುದೇ ವಸ್ತು ಅಥವಾ ಸೇವೆಗಳನ್ನು ಪ್ರಚಾರ ಮಾಡುವಾಗ ತಾವು ಯಾವ ಉದ್ದೇಶಕ್ಕಾಗಿ ನಿರ್ದಿಷ್ಟ ಉತ್ಪನ್ನವನ್ನು ಪ್ರಚಾರ ಮಾಡುತ್ತಿರುವುದು ಎಂಬುದನ್ನು ಕಡ್ಡಾಯವಾಗಿ ತಿಳಿಸಬೇಕಿದೆ. ಹಣದ ಲಾಭಕ್ಕೋ, ಕೊಡುಗೆಯೋ ಎಂಬುದನ್ನು ಉಲ್ಲೇಖಿಸಬೇಕು ಎಂದಿದೆ. ಇದನ್ನೂ ಓದಿ: ಮತ್ತೆ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಮೆಟಾ
- Advertisement 4-
ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಉತ್ಪನ್ನದ ಪ್ರಚಾರದ ಸಂದರ್ಭ ಅದರಲ್ಲಿ ಜಾಹೀರಾತು, ಪ್ರಾಯೋಜಿತ, ಸಹಯೋಗ ಅಥವಾ ಪಾಲುದಾರಿಕೆ ಎಂದು ತಿಳಿಸಬೇಕು. ಅಥವಾ ಆ ಪದಗಳನ್ನು ಹ್ಯಾಶ್‌ಟ್ಯಾಗ್ ಅಥವಾ ಶೀರ್ಷಿಕೆಗಳಲ್ಲಿ ಪಠ್ಯವಾಗಿ ಸೂಚಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಮಾತ್ರವಲ್ಲದೇ ಪ್ರಚಾರ ಮಾಡುತ್ತಿರುವ ವ್ಯಕ್ತಿಗಳು ಯಾವುದೇ ಉತ್ಪನ್ನಗಳನ್ನು ತಾವು ಬಳಸದೇ ಇದ್ದಲ್ಲಿ ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡುವಂತಿಲ್ಲ. ಸರಳ ಸ್ಪಷ್ಟ ಭಾಷೆಯಲ್ಲಿ ಅನುಮೋದನೆಗಳನ್ನು ಮಾಡಬೇಕು ಎಂದು ಕಟ್ಟುನಿಟ್ಟಾಗಿ ತಿಳಿಸಿದೆ. ಇದನ್ನೂ ಓದಿ: ಫಾಸ್ಟ್ ಟ್ಯಾಗ್‌ನಲ್ಲಿ ಹಣವಿಲ್ಲದೇ ಟೋಲ್ ಬಳಿಯೇ ನಿಂತ ಇವಿ ಬಸ್‌ಗಳು