ಬೆಂಗಳೂರು: ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಆದ್ರೆ ಏಕಕಾಲಕ್ಕೆ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ದಾಂಗುಡಿ ಇಡುತ್ತಿರುವುದರಿಂದ KSRTC ಸಿಬ್ಬಂದಿ ಹೈರಾಣಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಮತ್ತು ಪ್ರವಾಸಿ ಸ್ಥಳಗಳಿಗೆ (Tourist Place) ತೆರಳುವವರಿಗೆ ಮಾರ್ಗಸೂಚಿ ನಿಗದಿಪಡಿಸಲು ಸಾರಿಗೆ ಇಲಾಖೆ ಮುಂದಾಗಿದೆ.
Advertisement
ಮಹಿಳೆಯರು ಏಕಕಾಲಕ್ಕೆ ಧಾವಿಸುತ್ತಿರುವುದರಿಂದ ಬಸ್ ಕಿಟಕಿ, ಬಾಗಿಲುಗಳು ಮುರಿಯೋದು, ಡ್ರೈವರ್ ಸೀಟಿನಲ್ಲೇ ಹತ್ತೋದು ಕಂಡುಬರುತ್ತಿದೆ. ಆದ್ದರಿಂದ ಮಾರ್ಗಸೂಚಿ ನಿಗದಿ ಮಾಡಲು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅಧಿಕಾರಿಗಳೊಂದಿಗೆ ಸಭೆಯಲ್ಲಿ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಜೊತೆ ಕೈ ಜೋಡಿಸಲು ಹಿಂದೇಟು – ಲೋಕಸಭೆ ಚುನಾವಣೆಗೆ ವಿಪಕ್ಷಗಳ ಮೈತ್ರಿ ಅನುಮಾನ
Advertisement
ಈ ಕುರಿತು `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿರುವ ಅವರು, ಜನರು ಪ್ರಯಾಣ ಮಾಡಲಿ, ಆದ್ರೆ ಎಲ್ಲರೂ ಒಂದೇ ಬಾರಿಗೆ ಹೋಗುವುದರಿಂದ ಜನದಟ್ಟಣೆ ಆಗ್ತಿದೆ. ಶಕ್ತಿ ಯೋಜನೆ 5 ವರ್ಷವೂ ಇರುತ್ತೆ, ಅದರಲ್ಲಿ ಯಾರಿಗೂ ಆತಂಕ ಬೇಡ. ಆದ್ರೆ ಎಲ್ಲರೂ ಒಂದೇ ದಿನ ಪ್ರಯಾಣ ಮಾಡೋದ್ರಿಂದ ಸಮಸ್ಯೆಯಾಗುತ್ತಿದೆ. ಚಾಲಕರು, ನಿರ್ವಾಹಕರಿಗೂ ಕಷ್ಟವಾಗ್ತಿದೆ. ಹಾಗಾಗಿ ಆನ್ಲೈನ್ ಬುಕ್ಕಿಂಗ್ ಕಡ್ಡಾಯಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಇನ್ನೆರಡೇ ದಿನದಲ್ಲಿ ಮಾರ್ಗಸೂಚಿ ಸಿದ್ಧವಾಗಲಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಕೆಲ ಬಿಜೆಪಿ ನಾಯಕರು ದೇವಸ್ಥಾನಕ್ಕೆ ಹೋಗಿ, ಪ್ರವಾಸಿ ತಾಣಗಳಿಗೆ ಹೋಗಿ ಅಂತಾ ಪ್ರಚೋದನೆ ಕೊಡ್ತಿದ್ದಾರೆ. ಒಮ್ಮೆಲೆ ಎಲ್ಲರೂ ಹೋಗೋದು ಬೇಡ ಅಂತಾ ಮಹಿಳಾ ಪ್ರಯಾಣಿಕರಿಗೆ ಮನವಿ ಮಾಡುತ್ತೇನೆ. ಪ್ರಾರಂಭದಲ್ಲಿ ಉತ್ಸಾಹದಿಂದ ಹೆಚ್ಚು ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಆಮೇಲೆ 6 ತಿಂಗಳ ನಂತರ ಪ್ರಯಾಣ ಮಾಡ್ತಾರೆ. 15 ದಿನಕ್ಕೆ ಕಾದು ನೋಡಿ ಅಂತಾ ಅಧಿಕಾರಿಗಳು ಹೇಳಿದ್ದಾರೆ.
ಮಿತಿ ಮೀರಿದ ಜನ ಏಕಕಾಲಕ್ಕೆ ಬರ್ತಿರೋದ್ರಿಂದ ನಿಭಾಯಿಸೋದು ಕಷ್ಟವಾಗ್ತಿದೆ. ಬುಕಿಂಗ್ ಮಾಡಿಕೊಂಡೇ ಹೋದರೆ ದಟ್ಟಣೆ ನಿಯಂತ್ರಿಸಬಹುದು. ಒಂದೇ ವಾರಕ್ಕೆ ಹೋಗುವ ಜನ, 4 ವಾರದಲ್ಲಿ ಹೋದರೆ ಯಾರಿಗೂ ಸಮಸ್ಯೆ ಆಗೋದಿಲ್ಲ. ಹಾಗಾಗಿ ಹೊಸ ಮಾರ್ಗಸೂಚಿ ಮಾಡಲೇಬೇಕು ಇಲ್ಲದಿದ್ದರೆ ನಿಭಾಯಿಸೋದು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಮುಂದೆ ಮಾತಾಡೋ ಧಮ್ ಇದ್ದಿದ್ದು ಬಿಎಸ್ವೈಗೆ ಮಾತ್ರ – ರಾಮಲಿಂಗಾ ರೆಡ್ಡಿ
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದು, ಪುರುಷರ ಜಾಗದಲ್ಲೂ ಅವರೇ ಕುಳಿಕೊಳ್ಳುತ್ತಿರುವುದರಿಂದ ಪುರುಷರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಪುರುಷರು, ಶಾಲಾ ಕಾಲೇಜು ಮಕ್ಕಳಿಗೆ ತೊಂದರೆಯಾಗಬಾರದು ಅನ್ನೋ ಕಾರಣಕ್ಕೆ ಮಾರ್ಗಸೂಚಿ ತರಲು ನಿರ್ಧರಿಸಿದ್ದೇವೆ. ಮಾರ್ಗಸೂಚಿ ಅಂದ್ರೆ ಟಿಕೆಟ್ ಶುಲ್ಕ ವಿಧಿಸೋದಲ್ಲ. ಉಚಿತ, ಉಚಿತವೇ ಶಿಸ್ತುಬದ್ಧವಾಗಿ ನಡೆದುಕೊಂಡು ಹೋಗಬೇಕು ಅಂತಾ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಮುಂದೆ ಮಾತಾಡೋ ಧಮ್ ಇದ್ದಿದ್ದು ಬಿಎಸ್ವೈಗೆ ಮಾತ್ರ – ರಾಮಲಿಂಗಾ ರೆಡ್ಡಿ