– ನೀರಿನಲ್ಲೇ ಮೊದಲ ಬಾರಿಗೆ ಕಾರ್ಯಾಚರಣೆ
ಬೆಂಗಳೂರು: ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್ ಗೇಟ್ ಕೊಚ್ಚಿಹೋಗಿ ಬರೋಬ್ಬರಿ 70 ಗಂಟೆ ಕಳೆದಿದೆ. ಇದೀಗ 19ನೇ ಗೇಟ್ ಜಾಗದಲ್ಲಿ ಸ್ಟಾಪ್‌ಲಾಗ್ ಗೇಟ್ ಅಳವಡಿಕೆ ಪ್ರಯತ್ನಗಳು ನಡೆದಿವೆ. ಜಲಾಶಯದ ನೀರನ್ನು ಕ್ರಸ್ಟ್ ಗೇಟ್ ಕೆಳಗಿನವರೆಗೂ ಖಾಲಿ ಮಾಡದೇ, ಅದಕ್ಕೂ ಮೊದಲೇ ಸ್ಟಾಪ್‌ಲಾಗ್ ಗೇಟ್ ಅಳವಡಿಕೆಗೆ ತುಂಗಾಭದ್ರಾ ಬೋರ್ಡ್, ಕರ್ನಾಟಕ (Karnataka) ಮತ್ತು ಆಂಧ್ರ (Andra Pradesh) ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಸ್ಟಾಪ್ ಲಾಗ್‌ನ 10 ಪುಟಗಳ ನೀಲಿನಕ್ಷೆ ಆಧರಿಸಿ ಸಮರೋಪಾದಿಯಲ್ಲಿ ಐದು ಎಂಜಿನಿಯರಿಂಗ್ ಕಂಪನಿಗಳು ಗೇಟ್‌ಗಳನ್ನು ನಿರ್ಮಿಸುತ್ತಿವೆ. 20 ಅಡಿ ಎತ್ತರ, 60 ಅಡಿ ಅಗಲ, 48 ಟನ್ ಭಾರದ ಸ್ಟಾಪ್ ಲಾಗ್‌ಗೇಟನ್ನು ಏಕಕಾಲದಲ್ಲಿ ಡ್ಯಾಂ ಮೇಲೆ ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ತುರ್ತು ಗೇಟನ್ನು ಐದು ಭಾಗಗಳಾಗಿ ತಯಾರಿಸಲಾಗ್ತಿದೆ. ನಂತರ ಇದನ್ನು ಡ್ಯಾಂ ಮೇಲೆ ಕೊಂಡೊಯ್ದು, 18 ಮತ್ತು 19ನೇ ಪಿಯರ್‌ಗಳ ನಡುವೆ ಹಂತ ಹಂತವಾಗಿ ಎಲಿಮೆಂಟ್‌ಗಳನ್ನು ಇಳಿಸಿ ತುರ್ತು ಗೇಟ್ ನಿರ್ಮಿಸಲಾಗುತ್ತದೆ.
Advertisement
Advertisement
ಬುಧವಾರ ಈ ಪ್ರಕ್ರಿಯೆ ಆರಂಭ ಆಗಲಿದ್ದು, ತುರ್ತು ಗೇಟ್ ಅಳವಡಿಕೆ ಕೆಲಸ ಮುಗಿಯಲು ಮೂರ್ನಾಲ್ಕು ದಿನ ಹಿಡಿಯಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಆಗಸ್ಟ್ 17ರಿಂದ ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಅಷ್ಟರೊಳಗೆ ಗೇಟ್ ಅಳವಡಿಸುವ ಗುರಿಯನ್ನು ಅಧಿಕಾರಿಗಳು ಹೊಂದಿದ್ದಾರೆ. ನೀರಿನಲ್ಲಿಯೇ ಗೇಟ್ ಅಳವಡಿಕೆ ಕಾರ್ಯಕ್ಕೆ ಮುಂದಾಗಿರುವುದು ದೇಶದ ಇತಿಹಾಸಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ. ಇದನ್ನೂ ಓದಿ: ಹೆಚ್ಚುವರಿ ನೀರು ಲೆಕ್ಕಕ್ಕೆ ಪರಿಗಣಿಸಿ – CWRC ಮುಂದೆ ಕರ್ನಾಟಕದ ಮನವಿ
Advertisement
ಈ ಕಾರ್ಯಾಚರಣೆ ನೇತೃತ್ವವನ್ನು ಡ್ಯಾಂ ಗೇಟ್‌ಗಳ ತಜ್ಞ ಕನ್ನಯ್ಯ ನಾಯ್ಡು ವಹಿಸಿದ್ದಾರೆ. ಮುಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಪಡೆಗಳು ಬೀಡುಬಿಟ್ಟಿವೆ. ಅಂದ ಹಾಗೇ, ಡ್ಯಾಂನಿಂದ ಈಗಾಗಲೇ 30ಕ್ಕೂ ಹೆಚ್ಚು ಟಿಎಂಸಿ ನೀರು ಹೊರಗೆ ಹರಿದಿದೆ. ಇಂದು ಹೊರಹರಿವಿನ ಪ್ರಮಾಣವನ್ನು 1.40 ಲಕ್ಷ ಕ್ಯುಸೆಕ್‌ಗೆ ಹೆಚ್ಚಿಸಲಾಗಿದೆ.
Advertisement
ಗೇಟ್ ಅಳವಡಿಕೆಗೆ ಏನೆಲ್ಲಾ ತಯಾರಿ?
19ನೇ ಗೇಟ್ ಜಾಗದಲ್ಲಿ ಸ್ಟಾಪ್‌ಲಾಗ್ ಅಳವಡಿಕೆ ಪ್ರಯತ್ನ ಮಾಡಲಾಗುತ್ತದೆ. 20 ಅಡಿ ಎತ್ತರ, 60 ಅಡಿ ಅಗಲ, 48 ಟನ್ ಭಾರದ ಸ್ಟಾಪ್‌ಲಾಗ್ ಗೇಟ್ ಅನ್ನು ಒಂದೇ ಬಾರಿಗೆ ಡ್ಯಾಂ ಮೇಲೆ ಕೊಂಡೊಯ್ಯುವುದು ಕಷ್ಟ ಸಾಧ್ಯ. ಹೀಗಾಗಿ ಗೇಟನ್ನು ಐದು ಭಾಗಗಳಾಗಿ ವಿಭಜಿಸಿ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ.
ಮೊದಲ ಎಲಿಮೆಂಟ್‌ನ ಎತ್ತರ 2 ಅಡಿ, 2ನೇ ಎಲಿಮೆಂಟ್‌ನ ಎತ್ತರ 4 ಅಡಿ, 3ನೇ ಎಲಿಮೆಂಟ್‌ನ ಎತ್ತರ 6 ಅಡಿ, 4 ಮತ್ತು 5ನೇ ಎಲಿಮೆಂಟ್‌ನ ಎತ್ತರ ತಲಾ 4 ಅಡಿ ಇರಲಿದೆ. ಗೇಟ್‌ಗಳ ಎಲ್ಲಾ ಎಲಿಮೆಂಟ್‌ಗಳ ಅಗಲ 60 ಅಡಿ ಇರಲಿದ್ದು 2 ಕಡೆ ರೋಲರ್ ಅಳವಡಿಸಲಾಗುತ್ತದೆ. ಇದನ್ನೂ ಓದಿ: ಈಗ ನೀರು ಹರಿಸಿದ್ರೂ ಅಕ್ಟೋಬರ್ ವೇಳೆಗೆ ಡ್ಯಾಂ ತುಂಬುವ ಸಾಧ್ಯತೆಯಿದೆ – ಸಿದ್ದರಾಮಯ್ಯ ವಿಶ್ವಾಸ
ಕ್ರೇನ್ ಸಹಾಯದಿಂದ ಗೇಟ್‌ನ ಐದು ಎಲಿಮೆಂಟ್‌ಗಳ ಅಳವಡಿಸಲಾಗುತ್ತದೆ. 18 ಮತ್ತು 19ನೇ ಪಿಯರ್‌ಗಳ ನಡುವೆ 5 ಹಂತಗಳಲ್ಲಿ ಎಲಿಮೆಂಟ್‌ಗಳ ಇಳಿಸಿ ಸ್ಟಾಪ್‌ಲಾಗ್ ಗೇಟ್ ಹಾಕಲಾಗುತ್ತದೆ.