ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ರು ಸರ್ಕಾರ ರಚನೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈಗ ಬಿಜೆಪಿ ಆಪರೇಷನ್ ಫ್ಲವರ್ ಹೆಸರಿನಡಿ ಬಿಜೆಪಿ ಹೈಕಮಾಂಡ್ ರಣತಂತ್ರಕ್ಕಿಳಿದಿತ್ತು. ಆದರೆ ಇದಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ನಿಂದಲೂ ರಣತಂತ್ರ ಆರಂಭವಾಗಿದೆ.
ಕಾಂಗ್ರೆಸ್ ಬಿಜೆಪಿಯಿಂದ ಆಯ್ಕೆಯಾಗಿರುವ ನಾಯಕರನ್ನು ಸೆಳೆಯಲು ಮುಂದಾಗಿದ್ದು, ಬಿಜೆಪಿ ನಾಯಕರ ಜೊತೆ ಕಾಂಗ್ರೆಸ್ ಸಮಾಲೋಚನೆ ನಡೆಸಿದೆ ಎಂದು ತಿಳಿದು ಬಂದಿದೆ. ಈಗ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ತನ್ನತ್ತ ಸೆಳೆದು ತಮ್ಮ ಸರ್ಕಾರವನ್ನೇ ರಚಿಸಲು ಪ್ಲಾನ್ ಮಾಡಿತ್ತು. ಇದಕ್ಕೆ ನಾವೇನು ಕಮ್ಮಿ ಇಲ್ಲ ಎಂಬಂತೆ ಕಾಂಗ್ರೆಸ್ ಬಿಜೆಪಿ ಶಾಸಕರನ್ನು ತನ್ನತ್ತ ಸೆಳೆಯಲು ಮುಂದಾಗಿದೆ ಅಂತಾ ಹೇಳಲಾಗ್ತಿದೆ.
Advertisement
ಕೆಪಿಸಿಸಿ ಕಚೇರಿಯ ಒಂದು ಪ್ರತ್ಯೇಕ ಕೊಠಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಜಿಯಾರ್, ಕೆಪಿಸಿಸಿ ಅಧ್ಯಕ್ಷ ಪರಮೆಶ್ವರ್ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ಸಚಿವ ಡಿ.ಕೆ ಶಿವಕುಮಾರ್ ನಾಲ್ಕು ಮಂದಿ ಒಟ್ಟಾಗಿ ಸೇರಿದ್ದು, ಈಗಾಗಲೇ ಏಂಟು 8 ಮಂದಿ ಬಿಜೆಯ ಶಾಸಕರಿಗೆ ಕರೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ನೀವು ಬನ್ನಿ ನಮ್ಮ ಪಕ್ಷಕ್ಕೆ, ನಾವು ಬೇರೆ ನಿಮಗೆ ಅವಕಾಶ ಮಾಡಿಕೊಡುತ್ತೇವೆ ಹೇಳಿದ್ದಾರೆ ಎಂದು ಪಬ್ಲಿಕ್ ಮೂಲಗಳು ತಿಳಿಸಿವೆ.
Advertisement
ಸದ್ಯಕ್ಕೆ ಕಾಂಗ್ರೆಸ್ ಬಿಜೆಪಿಯ ನಾಯಕರನ್ನು ಸೆಳೆಯುವಲ್ಲಿ ತೊಡಗಿದೆ. ಇತ್ತ ಬಿಜೆಪಿ ಬೇರೆ ಶಾಸಕರನ್ನು ಸೆಳೆಯುವ ಬದಲು ತಮ್ಮ ಪಕ್ಷದ ಶಾಸಕರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಬಿಜೆಪಿಯ ಫ್ಲವರ್ ಆಪರೇಶನ್ ಗೆ ಕಾಂಗ್ರೆಸ್ ಹೊಸ ರಣತಂತ್ರ ಮಾಡಿದೆ.
Advertisement
ಎಲ್ಲ ಕಾಂಗ್ರೆಸ್ ಹಾಗು ಜೆಡಿಎಸ್ ಶಾಸಕರ ಸಹಿ ಸಂಗ್ರಹಿಸಲಾಗುತ್ತದೆ. ನಂತರ ಎರಡು ಪಕ್ಷದ ನಾಯಕರ ಸಹಿಯನ್ನು ಸಂಗ್ರಹಿಸಿ ರಾಜ್ಯಪಾಲರ ಮುಂದೆ ಇಡಲಾಗುತ್ತದೆ. ಎರಡು ಪಕ್ಷದ ಶಾಸಕರನ್ನು ರಾಜ್ಯಪಾಲರ ಮುಂದೆ ಕರೆದುಕೊಂಡು ಹೋಗಿ ಪೆರೇಡ್ ಮಾಡಿಸುವ ತೀರ್ಮಾನಕ್ಕೆ ಕಾಂಗ್ರೆಸ್ ಬರಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
Advertisement