ಬಾಗಲಕೋಟೆ: ಜನಾಶೀರ್ವಾದ ಯಾತ್ರೆಗಾಗಿ ಬಾಗಲಕೋಟೆಗೆ ಆಗಮಿಸುತ್ತಿರೋ ಕಾಂಗ್ರೆಸ್ ಯುವರಾಜನಿಗೆ ಪ್ರವಾಸಿ ಮಂದಿರದಲ್ಲಿ ರಾಜಾಥಿತ್ಯ ನೀಡಲಾಗ್ತಿರೋ ವಿಡಿಯೋ ಸದ್ಯ ವೈರಲ್ ಆಗಿದೆ.
ಎರಡನೇ ಬಾರಿಗೆ ರಾಜ್ಯ ಪ್ರವಾಸ ಕೈಗೊಂಡಿರೋ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಈ ಬಾರಿ ಮುಂಬೈ ಕರ್ನಾಟಕ ಭಾಗದಲ್ಲಿ ಮೂರು ದಿನಗಳ ಕಾಲ ಪ್ರವಾಸ ಮಾಡಲಿದ್ದಾರೆ. ಭಾನುವಾರ ರಾಹುಲ್ ಗಾಂಧಿ ಬಾಗಲಕೋಟೆಯ ವಿದ್ಯಾಗಿರಿಯ ಹೊಸ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು, ರಾಹುಲ್ ರನ್ನು ಮೆಚ್ಚಿಸಲು ಸರ್ಕಾರಿ ಪ್ರವಾಸಿ ಮಂದಿರವನ್ನೇ ಅರಮನೆಯ ರೀತಿಯಲ್ಲಿ ಮಾರ್ಪಾಡು ಮಾಡಿದ್ದಾರೆ. ಇದನ್ನೂ ಓದಿ: ಹೊಸ ಎಸಿ, ಹೊಸ ಮಂಚ, ಹೊಸ ಟಾಯ್ಲೆಟ್- ರಾಹುಲ್ ಗಾಂಧಿ ಮೆಚ್ಚಿಸಲು ಸಚಿವರ ಸರ್ಕಸ್
ಸ್ನಾನದ ಕೋಣೆ, ಶೌಚಾಲಯ ಕೊಠಡಿಯನ್ನು ಬದಲಾಯಿಸಿದ್ದಾರೆ. ಹೊಸ ಸೋಫಾ ಸೆಟ್ ಅಳವಡಿಸಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ತಂಗಲಿರೋ ಬೆಡ್ ರೂಮ್‍ಗೆ ಮಿರಿಮಿರಿ ಹೊಳೆಯುವಂತಹ ಟೈಲ್ಸ್‍ಗಳನ್ನ ಅಳವಡಿಸಿದ್ದಾರೆ. ಇಷ್ಟು ದುಬಾರಿ ವೆಚ್ಚ ಯಾರ ದುಡ್ಡಿನಲ್ಲಿ ಮಾಡಿದ್ದು ಎಂದು ಬಿಜೆಪಿ ನಾಯಕರು ಇದೀಗ ಆಕ್ಷೇಪ ವ್ಯಕ್ತಪಡಿಸಿದ್ದಾರೆ.