ವಾಷಿಂಗ್ಟನ್: ವಿಶ್ವದಲ್ಲೇ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್ (Whatsapp) ಇದೀಗ ಅತ್ಯಂತ ನಿರೀಕ್ಷಿತ ಫೀಚರ್ (Feature) ಒಂದನ್ನು ಹೊರ ತಂದಿದೆ. ಇದೀಗ ಬಳಕೆದಾರರು ತಮ್ಮ ಸ್ನೇಹಿತರಿಗೆ ತಪ್ಪಾಗಿ ಕಳುಹಿಸಿದ ಸಂದೇಶವನ್ನು (Message) ಎಡಿಟ್ (Edit) ಮಾಡಲು ಹೊಸ ಆಯ್ಕೆಯನ್ನು ವಾಟ್ಸಪ್ ಪರಿಚಯಿಸಿದೆ.
ಈ ಹಿಂದೆ ವಾಟ್ಸಪ್‌ನಲ್ಲಿ ಬಳಕೆದಾರರು ತಪ್ಪಾಗಿ ಸಂದೇಶವನ್ನು ಕಳುಹಿಸಿದ್ದಲ್ಲಿ ಅದನ್ನು ನೇರವಾಗಿ ಡಿಲೀಟ್ ಮಾಡಲು ಆಯ್ಕೆ ನೀಡಲಾಗಿತ್ತು. ಇದೀಗ ಬಳಕೆದಾರರು ಆ ಸಂದೇಶವನ್ನು ಅಳಿಸುವ ಅಗತ್ಯವಿಲ್ಲ. ಸಂದೇಶವನ್ನು ಎಡಿಟ್ ಮಾಡುವ ಮೂಲಕ ತಪ್ಪನ್ನು ಸರಿಪಡಿಸಿಕೊಳ್ಳಬಹುದಾಗಿದೆ.
Advertisement
Advertisement
ವಾಟ್ಸಪ್ ಕಳುಹಿಸಿದ ಸಂದೇಶಗಳಲ್ಲಿ ಅಕ್ಷರ ತಪ್ಪುಗಳಿಂದ ಹಿಡಿದು ಹೆಚ್ಚಿನ ಪದಗಳನ್ನು ಸೇರಿಸುವವರೆಗೂ ಎಡಿಟ್ ಮಾಡಲು ಅವಕಾಶ ನೀಡುತ್ತಿದೆ. ಸಂದೇಶಗಳನ್ನು ಎಡಿಟ್ ಮಾಡಲು ಸರಳವಾಗಿ ಕಳುಹಿಸಿದ ಸಂದೇಶದ ಮೇಲೆ ದೀರ್ಘವಾಗಿ ಒತ್ತಿ. ನಂತರ ಮೆನುವಿನಲ್ಲಿ ಕಾಣಿಸುವ ಎಡಿಟ್ ಆಯ್ಕೆಯನ್ನು ಬಳಸಿದರೆ ಸುಲಭವಾಗಿ ಸಂದೇಶವನ್ನು ಸರಿಪಡಿಸಬಹುದು. ಇದನ್ನೂ ಓದಿ: ಕೆಲ Gmail ಖಾತೆಗಳನ್ನು ಡಿಲೀಟ್ ಮಾಡಲು ಮುಂದಾದ Google!
Advertisement
ಒಂದು ಸಂದೇಶವನ್ನು ಕಳುಹಿಸಿದ 15 ನಿಮಿಷಗಳ ವರೆಗೆ ಎಡಿಟ್ ಮಾಡಲು ಸಾಧ್ಯವಾಗುತ್ತದೆ. ಒಮ್ಮೆ ಸಂದೇಶವನ್ನು ಎಡಿಟ್ ಮಾಡಿದ್ದಲ್ಲಿ, ಅದರ ಪಕ್ಕದಲ್ಲಿ ‘Edited’ (ಎಡಿಟ್ ಮಾಡಲಾಗಿದೆ) ಎಂಬುದನ್ನು ಸೂಚಿಸುತ್ತದೆ. ಇದು ಸಂದೇಶವನ್ನು ಎಡಿಟ್ ಮಾಡಲಾಗಿದೆಯೇ ಎಂಬುದನ್ನು ಸುಲಭವಾಗಿ ತಿಳಿಸುತ್ತದೆ.
Advertisement
ಈಗಾಗಲೇ ವಾಟ್ಸಪ್ ಜಾಗತಿಕವಾಗಿ ಬಳಕೆದಾರರಿಗೆ ಈ ಫೀಚರ್ ಅನ್ನು ಹೊರ ತರಲು ಪ್ರಾರಂಭಿಸಿದೆ. ಮುಂದಿನ ವಾರಗಳಲ್ಲಿ ಜಾಗತಿಕವಾಗಿ ಎಲ್ಲಾ ಬಳಕೆದಾರರಿಗೂ ಲಭ್ಯವಾಗಲಿದೆ. ಇದನ್ನೂ ಓದಿ: Layoff: 11 ಸಾವಿರ ಜಾಬ್ ಕಟ್‌ಗೆ ವೊಡಾಫೋನ್ ಪ್ಲ್ಯಾನ್