ಬೆಂಗಳೂರು: ಕಾಂಗ್ರೆಸ್ಸಿನಲ್ಲಿ ಮಹಿಳೆಯರಿಗೆ ನೂತನ ಡ್ರೆಸ್ ಕೋಡ್ ಮಾಡಲಾಗಿದ್ದು, ಇದರಿಂದ ಕಾಂಗ್ರೆಸ್ ನಾಯಕರು ಮೀಟೂಗೆ ಹೆದರಿದ್ದಾರಾ ಎಂಬ ಮಾತುಗಳು ಕೇಳಿ ಬರುತ್ತಿದೆ.
ಇನ್ನು ಮುಂದೆ ಕಾಂಗ್ರೆಸ್ ನ ಮಹಿಳಾ ಕಾರ್ಯಕರ್ತರು ತುಟಿಗೆ ಲಿಪ್‍ಸ್ಟಿಕ್, ಮುಖಕ್ಕೆ ಮೇಕಪ್ ಹಚ್ಚಿಕೊಂಡು ಬರುವಂತಿಲ್ಲ. ಅಷ್ಟೇ ಅಲ್ಲದೇ ಉಡೋ ಸೀರೆ ಕೂಡ ಮೈ ಮುಚ್ಚಬೇಕು. ಹಾಕೋ ಬ್ಲೌಸ್ ಕುತ್ತಿಗೆ ಮುಚ್ಚಬೇಕು. ಸ್ಕರ್ಟ್, ಸ್ಲೀವ್ ಲೆಸ್ ಇಂತಹ ಉಡುಪನ್ನು ತೊಡುವಂತಿಲ್ಲ. ಇದು 133 ವರ್ಷದ ಹಳೆ ಪಕ್ಷದಲ್ಲಿ ಹೊಸ ನಿಯಮವಾಗಿದೆ.
Advertisement
Advertisement
ಕಾಂಗ್ರೆಸ್ ಪಕ್ಷದಲ್ಲಿರುವ ಹೆಣ್ಣು ಮಕ್ಕಳು ಕೂಡ ಇನ್ನು ಮುಂದೆ ಮೈ, ಕೈ ಕಾಣುವಂತೆ ಬಟ್ಟೆ ತೊಡುವ ಹಾಗಿಲ್ಲ. ಸ್ಲೀವ್ ಲೆಸ್, ಪೆನ್ಸಿಲ್ ಟೈಟ್, ಸ್ಕಿನ್ ಟೈಟ್, ಶಾರ್ಟ್ ಸ್ಕರ್ಟ್ ಹಾಕುವ ಹಾಗಿಲ್ಲ. ಮೈತುಂಬ ಲಕ್ಷಣವಾಗಿ ಸೀರೆ ಉಟ್ಟು, ಕುತ್ತಿಗೆವರೆಗೆ ಮೈ ಮುಚ್ಚುವ ಬ್ಲೌಸ್ ಹಾಕಬೇಕು ಎಂದು ಮಹಿಳಾ ಕಾಂಗ್ರೆಸ್ ನ ನೂತನ ಅಧ್ಯಕ್ಷೆ ಪುಷ್ಪ ಅಮರನಾಥ್ ಆದೇಶ ಹೊರಡಿಸಿದ್ದಾರೆ.
Advertisement
ನವಂಬರ್ 19 ರಂದು ನೂತನ ಅಧ್ಯಕ್ಷೆಯಾಗಿ ಅಧಿಕೃತವಾಗಿ ಪದಗ್ರಹಣ ಕಾರ್ಯಕ್ರಮವಿದ್ದು, ಈ ಪ್ರೋಗ್ರಾಂಗೆ ಬರೋ ಎಲ್ಲಾ ಮಹಿಳಾ ಪದಾಧಿಕಾರಿಗಳು ನೀಲಿ ಸೀರೆ ಉಟ್ಟು ಮೈ ಮುಚ್ಚುವಂತಹ ಬ್ಲೌಸ್ ತೊಟ್ಟು ಇದಕ್ಕೆ ಚಾಲನೆ ನೀಡೋಣ ಅಂತ ಪುಷ್ಪ ಹೇಳಿದ್ದಾರೆ.
Advertisement
ನೂತನ ಡ್ರೆಸ್‍ಕೋಡ್ ಮಾಡಿದ ತಕ್ಷಣ, ನಾವು ಹಾಕಬೇಕಾದ ಬಟ್ಟೆಯನ್ನು ಅಧ್ಯಕ್ಷೆ ತೀರ್ಮಾನ ಮಾಡಬೇಕಾ. ನಮ್ಮ ಇಷ್ಟ, ನಮ್ಮ ಬಟ್ಟೆ. ಅವರು ಹೇಳಿದಂಗೆ ನಾವು ಯಾಕೆ ಕೇಳಬೇಕು. ಒಂದು ಸಭೆಯಾದರೆ ಅವರು ಹೇಳಿದ ಬಟ್ಟೆಯನ್ನು ಹಾಕಿಕೊಂಡು ಬರಬಹುದು. ಆದರೆ ಇನ್ನು ಮುಂದೆಯೂ ಇದೇ ರೀತಿ ಡ್ರೆಸ್ ಹಾಕಿಕೊಂಡು ಬರಬೇಕು ಎಂದರೆ ಕಷ್ಟವಾಗುತ್ತದೆ ಎಂದು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತ ಅಧ್ಯಕ್ಷೆಯಾಗುವ ಮೊದಲೇ ಈ ರೀತಿ ಹೊಸ ನಿಯಮವನ್ನು ಮಾಡುವ ಮೂಲಕ ವಿವಾದಕ್ಕೀಡಾಗುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews