ನವದೆಹಲಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಪ್ರಯೋಗವೊಂದು ಯಶಸ್ವಿಯಾದರೆ ದೇಶದಲ್ಲಿರುವ ಟೋಲ್ ಬೂತ್‍ಗಳು ರದ್ದಾಗುವ ಸಾಧ್ಯತೆಯಿದೆ.
ಹೈವೇಗಳ ಟೋಲ್ ಬೂತ್‍ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಪ್ರಯಾಣಿಕರ ಸಮಯ ಹಾಳಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈಗ ಟೋಲ್ ಸಂಗ್ರಹಕ್ಕೆ ವಾಹನದಲ್ಲೇ ಸಾಧನವೊಂದನ್ನು ಅಳವಡಿಸಲು ಮುಂದಾಗಿದೆ.
ಹೇಗೆ ಕೆಲಸ ಮಾಡುತ್ತೆ?
ವಾಹನಗಳ ಮ್ಯೂಸಿಕ್ ಸಿಸ್ಟಂ ಬಳಿ ಈ ಸಾಧನ ಇರಲಿದೆ. ಈ ಸಾಧನ ವಾಹನ ಮಾಲೀಕರ ಬ್ಯಾಂಕ್ ಖಾತೆಗೆ ಜೋಡಣೆ ಆಗಿರುತ್ತದೆ. ವಾಹನ ಸವಾರ ಒಂದು ನಿರ್ದಿಷ್ಟ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದರೆ ಅದಕ್ಕೆ ತಗುಲುವ ಶುಲ್ಕ ನೇರವಾಗಿ ಆತ/ಆಕೆಯ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ.
ಈಗ ದೆಹಲಿ- ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಉಪಕರಣದ ಪ್ರಯೋಗ ನಡೆಯುತ್ತಿದ್ದು, ಈ ಪ್ರಯೋಗ ಯಶಸ್ವಿಯಾದರೆ ದೇಶಾದ್ಯಂತ ವಿಸ್ತರಿಸಲು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಸೂಚನೆ ಹೊರಡಿಸಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಈಗಾಗಲೇ ಟೋಲ್‍ಗಳಲ್ಲಿ ವಾಹನಗಳು ನಿಮಿಷಗಟ್ಟಲೇ ಕಾಯುವುದನ್ನು ತಡೆಯಲು ಫಾಸ್ಟ್ ಟ್ಯಾಗ್ ಅನ್ನು ಸರ್ಕಾರ ಪರಿಚಯಿಸಿದೆ. ಇದನ್ನೂ ಓದಿ: ಎಷ್ಟು ದೂರ ಹೋಗ್ತಿರೋ ಅಷ್ಟಕ್ಕೆ ಮಾತ್ರ ಟೋಲ್ ಕಟ್ಟಿ – ಮೋದಿ ಸರ್ಕಾರದಿಂದ ಮಹ್ವತದ ಪ್ರಯೋಗ ಜಾರಿ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv