ನವದೆಹಲಿ: ಸೈಬರ್ ವಂಚನೆ ಮಾಡಿದ್ದ ಆರೋಪದ ಮೇಲೆ ರಾಜಸ್ಥಾನದ ಇಬ್ಬರು ವ್ಯಕ್ತಿಗಳನ್ನು ನವದೆಹಲಿಯಲ್ಲಿ ಬಂಧಿಸಲಾಗಿದೆ.
ಮೆಹAದಿ ಹಸನ್ ಅಲಿಯಾಸ್ ಹರ್ಪಾಲ್ ಸಿಂಗ್ (43) ಮತ್ತು ಎಂಡಿ ಅರ್ಬಾಜ್ ಖಾನ್ (20) ಬಂಧಿತ ಆರೋಪಿಗಳು. ಇವರು ವಿವಿಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಅಂತರಾಜ್ಯ ಗುಂಪಿನ ಸದಸ್ಯರಾಗಿದ್ದರು. ಇತ್ತೀಚೆಗಷ್ಟೇ ಗುಂಪಿನ ಮಾಸ್ಟರ್ ಮೈಂಡ್ ಆಗಿದ್ದ ಆಫ್ರಿಕನ್ ಪ್ರಜೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.
Advertisement
Advertisement
ವಂಚಕರ ಗುಂಪು ಪ್ರತಿಷ್ಠಿತ ಕಂಪನಿಗಳನ್ನು ಗುರಿಯಾಗಿಸಿಕೊಂಡಿತ್ತು. ಕಂಪನಿಗಳ ಉನ್ನತ ಅಧಿಕಾರಿಗಳ ಇಮೇಲ್‌ನಂತೆ ಕಾಣುವ ರೀತಿ ನಕಲಿ ಮೇಲ್‌ಗಳನ್ನು ಕಳಿಸಿ ಜನರಿಗೆ ಮೊಸ ಮಾಡುತ್ತಿದ್ದರು. ಜೊತೆಗೆ ನಕಲಿ ಮೇಲ್ ಐಡಿಗಳನ್ನು ತಯಾರಿಸಿದ್ದರು. ಈ ರೀತಿ ಮಾಡಿ ಸುಮಾರು 80 ಲಕ್ಷ ರೂ. ವಂಚನೆಯನ್ನು ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಫೋಟೋಶೂಟ್‌ಗಾಗಿ ಬಂದಿದ್ದ ಮಹಿಳೆ ಮೇಲೆ ಲಾಡ್ಜ್‌ನಲ್ಲಿ ಗ್ಯಾಂಗ್‌ರೇಪ್
Advertisement
Advertisement
ಆರೋಪಿಗಳು ಬ್ಯಾಂಕ್‌ಗೆ ನಕಲಿ ಚಾಲ್ತಿ ಖಾತೆಗಳಿಗೆ ಹಣ ವರ್ಗಾಯಿಸಲು ಸುಳ್ಳು ಪತ್ರವನ್ನು ನೀಡಿದ್ದಾರೆ. ಹಣವನ್ನು ಹಲವಾರು ಖಾತೆಗಳಿಗೆ ವರ್ಗಾಯಿಸಿ ಎಟಿಎಂನಿಂದ ಮತ್ತೆ ಹಿಂಪಡೆಯುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ತುಮಕೂರಿನಲ್ಲಿ ಮತ್ತೆ ಕೊರೊನಾ ಭೀತಿ – 42 ಪುಟ್ಟ ಮಕ್ಕಳಿಗೆ ವಕ್ಕರಿಸಿದ ಕೋವಿಡ್