ನವದೆಹಲಿ: ಗಡಿ ಕಾಯುವ ಸೈನಿಕನ ಮನೆಯೂ ಬಿಡದೇ ದುಷ್ಕರ್ಮಿಗಳು ಬೆಂಕಿ ಹೊತ್ತಿಸಿದ್ದಾರೆ. ಮಂಗಳವಾರ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಬಿಎಸ್ಎಫ್ ಯೋಧ ಮಹಮ್ಮದ್ ಅನೀಸ್ ನಿವಾಸಕ್ಕೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದರು. ಕಜೋರಿ ಖಾಸ್ನಲ್ಲಿರುವ ಅನೀಸ್ ಮನೆಗೆ ಬೆಂಕಿ ಹಾಕಿದ್ದು ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ.
ಮಹಮ್ಮದ್ ಅನೀಸ್ ಒಡಿಶಾದಲ್ಲಿ ಸದ್ಯ ಕರ್ತವ್ಯ ನಿರ್ವಹಿಸಿದ್ದು, ಅನೀಸ್ ಪೋಷಕರು ಕಜೋರಿ ಖಾಸ್ನ ಗಲ್ಲಿ ನಂಬರ್ ಐದರಲ್ಲಿ ವಾಸವಾಗಿದ್ದರು. ಚಾಂದ್ ಬಾಗ್ನಲ್ಲಿ ಆರಂಭವಾಗಿದ್ದ ದುಷ್ಕಕೃತ್ಯಗಳು ಕಜೋರಿ ಖಾಸ್ಗೂ ತಲುಪಿತ್ತು. ಗಲ್ಲಿಯಲ್ಲಿದ್ದ ವಾಹನಗಳಿಗೆ ಮೊದಲು ಬೆಂಕಿ ಹೊತ್ತಿಸಿದ್ದ ದುಷ್ಕರ್ಮಿಗಳು ಬಳಿಕ ಮನೆಗಳಿಗೆ ಪೆಟ್ರೋಲ್ ಬಾಂಬ್ಗಳನ್ನು ಎಸೆದಿದ್ದರು. ಘಟನೆಯಲ್ಲಿ ಯೋಧ ಅನೀಸ್ ಅವರ ಮನೆಯೂ ಸುಟ್ಟು ಭಷ್ಮವಾಗಿದೆ.
Advertisement
Advertisement
ಘಟನೆ ವೇಳೆ ಮನೆಯಲ್ಲಿ ಅನೀಸ್ ತಂದೆ ತಾಯಿ ಮತ್ತು ಅತ್ತೆ ಇದ್ದರು. ಘೋಷಣೆಗಳನ್ನು ಕೂಗುತ್ತಾ ಬರುತ್ತಿದ್ದ ಗುಂಪುಗಳಿಗೆ ಮನೆಯ ಕಿಟಕಿಯಿಂದಲೆ ಅನೀಸ್ ಅತ್ತೆ ಕೈ ಮುಗಿದು ಬೇಡಿಕೊಂಡಿದ್ದರು. ಮನೆಗೆ ಬೆಂಕಿ ಇಡದಂತೆ ಮನವಿ ಮಾಡಿಕೊಂಡಿದ್ದು. ಆದರೆ ಉದ್ರಿಕ್ತ ಗುಂಪು ಇವರ ಮಾತುಗಳನ್ನು ಕೇಳಿಸಿಕೊಳ್ಳದೇ ಇಡೀ ಗಲ್ಲಿಯಲ್ಲಿರುವ ಮನೆ ಮತ್ತು ವಾಹನಗಳಿಗೆ ಬೆಂಕಿ ಇಟ್ಟಿತ್ತು.
Advertisement
Advertisement
ಗ್ರೌಂಡ್ ರಿಪೋರ್ಟ್ ನಡೆಸುತ್ತಿರುವ ಪಬ್ಲಿಕ್ ಟಿವಿ ಜೊತೆಗೆ ಮಾತಮಾಡಿದ ಅನೀಸ್ ಅತ್ತೆ ಮೆಹೆರೋಮ್, ನಾಗರಿಕತ ಕೊಡುತ್ತೇವೆ ಪಾಕ್ ನಾಕರಿಕತ ಎಂದು ಪೆಟ್ರೋಲ್ ಬಾಂಬ್ ಎಸೆದರು ಎಂದು ಹೇಳಿಕೊಂಡರು. ಈ ಪ್ರದೇಶದಲ್ಲಿ ಹಿಂದೂ ಮುಸ್ಲಿಂ ನಾವೆಲ್ಲ ಚೆನ್ನಾಗಿದ್ದೇವೆ ಅಂತ ಉದ್ರಿಕ್ತ ಗುಂಪುಗಳಿಗೆ ಬೇಡಿಕೊಂಡರು ಬಿಡದೆ ಬೆಂಕಿ ಇಟ್ಟರು ಎಂದು ತಮ್ಮ ಸಂಕಟ ಹಂಚಿಕೊಂಡರು. ಹೀಗೆ ಸುಡುವ ಬದಲು ದೊಡ್ಡ ಬಾಂಬ್ ಹಾಕಿ ಒಮ್ಮೆಲೆ ಸುಟ್ಟು ಬಿಡಿ. ಈ ರೀತಿ ಸುಟ್ಟ ಪರಿಸ್ಥಿತಿ ನೋಡುಲು ನಮ್ಮಗೆ ಆಗುತ್ತಿಲ್ಲ ಎಂದು ಕಣ್ಣೀರಿಟ್ಟರು. ಅಳಿಯ ದೇಶದ ಗಡಿ ಕಾಯುತ್ತಾನೆ ಅವರ ಮನೆಗೆ ರಕ್ಷಣೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅನೀಸ್ ತಂದೆ ಮುಸ್ತಾಫ್ ರೇಷನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಗೃಹಿಣಿ. ಅತ್ತೆ ಮೆಹರೋಮ್ ತರಕಾರಿ ವ್ಯಾಪಾರ ಮಾಡಿಕೊಂಡು ಅನೀಸ್ ನಿವಾಸಲ್ಲಿ ವಾಸವಾಗಿದ್ದಾರೆ. ಅನೀಸ್ ಬಿಎಸ್ಎಫ್ನಲ್ಲಿದ್ದು ಕಾಶ್ಮೀರ, ಪಂಜಾಬ್ನಲ್ಲಿ ಸೇವೆ ಸಲ್ಲಿಸಿ ಈಗ ಒಡಿಶಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.