ನವದೆಹಲಿ: ವಂಚಕರ ಜಾಲಕ್ಕೆ ಬಿದ್ದು ನಿವೃತ್ತ ಎಂಜಿನಿಯರ್‌ವೊಬ್ಬರು ಡಿಜಿಟಲ್ ಅರೆಸ್ಟ್ ಆಗಿ 10 ಕೋಟಿಗೂ ಹೆಚ್ಚು ಹಣ ಕಳೆದುಕೊಂಡಿರುವ ಘಟನೆ ನಡೆದಿದೆ.
72 ವರ್ಷದ ನಿವೃತ್ತ ಇಂಜಿನಿಯರ್ ಅವರನ್ನು ಇಲ್ಲಿನ ರೋಹಿಣಿಯಲ್ಲಿರುವ ಅವರ ಮನೆಯಲ್ಲಿ ಎಂಟು ಗಂಟೆಗಳ ಕಾಲ ‘ಡಿಜಿಟಲ್ ಬಂಧನ’ದಲ್ಲಿ ಇರಿಸಿಕೊಂಡು 10 ಕೋಟಿಗೂ ಹೆಚ್ಚು ಹಣವನ್ನು ವಂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ರೋಹಿಣಿಯ ಸೆಕ್ಟರ್ 10 ರಲ್ಲಿ ತನ್ನ ಹೆಂಡತಿಯೊಂದಿಗೆ ನಿವೃತ್ತ ಎಂಜಿನಿಯರ್ ವಾಸವಾಗಿದ್ದಾರೆ. ಅವರ ದೂರಿನ ಮೇರೆಗೆ, ಜಿಲ್ಲೆಯ ದೆಹಲಿ ಪೊಲೀಸ್‌ನ ಸೈಬರ್ ಸೆಲ್‌ನಿಂದ ಎಫ್‌ಐಆರ್ ದಾಖಲಿಸಲಾಗಿದೆ. ಗುಪ್ತಚರ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ (ಐಎಫ್‌ಎಸ್‌ಒ) ವಿಭಾಗವು ಪ್ರಕರಣದ ತನಿಖೆ ನಡೆಸುತ್ತಿದೆ.
Advertisement
ಹಲವು ಬ್ಯಾಂಕ್ ಖಾತೆಗಳಲ್ಲಿ ಹಣ ಹಂಚಿಕೆಯಾಗಿದ್ದು, 60 ಲಕ್ಷ ವರ್ಗಾವಣೆ ಆಗುವುದನ್ನು ತಡೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿದೇಶದಿಂದ ಕರೆ ಮಾಡಿದವರು ವಂಚನೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.
Advertisement
ತೈವಾನ್‌ನಿಂದ ಪಾರ್ಸೆಲ್‌ಗೆ ಸಂಬಂಧಿಸಿದಂತೆ ನಿವೃತ್ತ ಎಂಜಿನಿಯರ್‌ಗೆ ಕರೆ ಬಂದಿತ್ತು. ಮುಂಬೈ ವಿಮಾನ ನಿಲ್ದಾಣದಲ್ಲಿ ಅವರ ಹೆಸರಿನ ಪಾರ್ಸೆಲ್ ಅನ್ನು ತಡೆಹಿಡಿಯಲಾಗಿದೆ ಎಂದು ಕರೆ ಮಾಡಿದ ವ್ಯಕ್ತಿ ತಿಳಿಸಿದ್ದ. ಪಾರ್ಸೆಲ್‌ನಲ್ಲಿ ನಿಷೇಧಿತ ಡ್ರಗ್ಸ್ ಇದ್ದು, ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ಅಧಿಕಾರಿಗಳು ಆತನೊಂದಿಗೆ ಮಾತನಾಡಲಿದ್ದಾರೆ ಎಂದು ಕರೆ ಮಾಡಿದ ವ್ಯಕ್ತಿ ತಿಳಿಸಿದ.
Advertisement
ವೀಡಿಯೋ ಕರೆಗಾಗಿ ಸ್ಕೈಪ್ ಡೌನ್‌ಲೋಡ್ ಮಾಡಲು ಸಂತ್ರಸ್ತರಿಗೆ ತಿಳಿಸಲಾಗಿದೆ. ವೀಡಿಯೋ ಕರೆ ಸಮಯದಲ್ಲಿ, ಕನಿಷ್ಠ ಎಂಟು ಗಂಟೆಗಳ ಕಾಲ ಡಿಜಿಟಲ್ ಬಂಧನದಲ್ಲಿ ಇರಿಸಲಾಯಿತು. ಈ ವೇಳೆ ಆರೋಪಿಗಳು 10.3 ಕೋಟಿಯನ್ನು ಪ್ರತ್ಯೇಕ ಖಾತೆಗಳಿಗೆ ವರ್ಗಾಯಿಸುವಂತೆ ಒತ್ತಾಯಿಸಿ ವಂಚಿಸಿದ್ದಾರೆ. ಸಂತ್ರಸ್ತರು ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.