ನವದೆಹಲಿ: ದೇಶಾದ್ಯಂತ ಪ್ರಮುಖ ಹದಿನೈದು ನಗರಗಳಿಗೆ ಸೀಮಿತ ರೈಲು ಸಂಚಾರ ಪುನಾರಂಭವಾದ ಬೆನ್ನೆಲ್ಲೆ ಕೇಂದ್ರ ಗೃಹ ಇಲಾಖೆ ಪ್ರಯಾಣದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಇಂದು ಸಂಜೆ ನಾಲ್ಕು ಗಂಟೆಯಿಂದ ಬುಕ್ಕಿಂಗ್ ಆರಂಭವಾಗಲಿದ್ದು, ಅದಕ್ಕೂ ಮುನ್ನ ಪ್ರಯಾಣದ ನಿಯಮಗಳನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿಗಳ ಪ್ರಕಾರ ಟಿಕೇಟ್ ಕನ್ಫರ್ಮ್ ಆದವರಿಗೆ ಮಾತ್ರ ರೈಲ್ವೆ ಸ್ಟೇಷನ್ ಪ್ರವೇಶ ಮತ್ತು ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.
Advertisement
Advertisement
ಪ್ರಯಾಣಕ್ಕೂ ಮುನ್ನ ರೈಲ್ವೆ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಒಳಪಡಬೇಕು ಸೋಂಕಿನ ಗುಣಲಕ್ಷಣಗಳು ಖಚಿತಪಡಿಸಿಕೊಳ್ಳಬೇಕು. ರೋಗದ ಗುಣಲಕ್ಷಣಗಳು ಇಲ್ಲದ ವ್ಯಕ್ತಿಗಳಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲು ಸೂಚಿಸಲಾಗಿದೆ. ಪ್ರಯಾಣ ಆರಂಭಕ್ಕೂ ಮುನ್ನ ಮತ್ತು ಅಂತ್ಯದ ವೇಳೆ ಸ್ವಾನಿಟೈಜಿಂಗ್ ಕಡ್ಡಾಯವಾಗಿ ಮಾಡಿಕೊಳ್ಳಬೇಕು. ಸ್ಯಾನಿಟೈಸರ್ ಜೊತೆಗಿಟ್ಟುಕೊಳ್ಳುವುದು ಉತ್ತಮ ಎಂದು ಗೃಹ ಇಲಾಖೆ ಹೇಳಿದೆ. ಪ್ರಯಾಣದ ಅವಧಿಯಲ್ಲಿ ಫೇಸ್ ಮಾಸ್ಕ್ ಕಡ್ಡಾಯ ಎಂದು ಸಾರ್ವಜನಿಕರಿಗೆ ತಿಳಿಸಿದೆ.