ನವದೆಹಲಿ: ಮೇ 3ರ ವರೆಗೂ ದೇಶದ್ಯಾಂತ ಪ್ಯಾಸೆಂಜರ್ ರೈಲುಗಳ ಸಂಚಾರ ನಿಷೇಧ ವಿಸ್ತರಿಸಿ ಭಾರತೀಯ ರೈಲು ಸಚಿವಾಲಯ ಆದೇಶ ಹೊರಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಭಾಷಣದ ಬಳಿಕ ರೈಲು ಇಲಾಖೆ ಈ ನಿರ್ಧಾರ ಪ್ರಕಟಿಸಿದೆ.
ಲಾಕ್ ಡೌನ್ ವಿಸ್ತರಿಸಿ ಪ್ರಧಾನಿ ನರೇಂದ್ರ ಅಧಿಕೃತ ಘೋಷಣೆ ಮಾಡಿದ ಹಿನ್ನೆಲೆ ಏಪ್ರಿಲ್ 14ವರೆಗೂ ವಿಧಿಸಿದ್ದ ನಿರ್ಬಂಧವನ್ನು ಮೇ 3ರವರೆಗೂ ವಿಸ್ತರಿಸಿದೆ. ಹಿಂದಿನಂತೆ ದೇಶದ್ಯಾಂತ ಗೂಡ್ಸ್ ರೈಲುಗಳ ಸಂಚಾರ ಇರಲಿದ್ದು ಅಗತ್ಯ ವಸ್ತುಗಳ ಸಾಗಾಟ ಕೆಲಸ ಎಂದಿನಂತೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಬುಕ್ ಮಾಡಿರುವ ಟಿಕೆಟ್ ಗಳನ್ನು ಗ್ರಾಹಕರು ಕ್ಯಾನ್ಸಲ್ ಮಾಡುವ ಅವಶ್ಯಕತೆ ಇಲ್ಲ. ಟಿಕೆಟ್ ತನ್ನಿಂದಾತಾನೇ ರದ್ದಗಾಲಿದ್ದು ಐಆರ್‍ಸಿಟಿಸಿ ಖಾತೆಯಿಂದ ಹಣ ಜಮಾವಣೆಯಾಗಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಇದರ ಜೊತೆಗೆ ದೇಶಾಯಂತ ಎಲ್ಲ ಮಹಾ ನಗರಗಳಲ್ಲಿರುವ ಮೆಟ್ರೋ ಸಂಚಾರ ಕೂಡಾ ಮೇ 3ರವರೆಗೂ ರದ್ದಾಗಲಿದೆ ಎಂದು ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಡಿಎಸ್ ಮಿಶ್ರಾ ಹೇಳಿದ್ದಾರೆ.
Advertisement
Advertisement
ಇದರ ಜೊತೆಗೆ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನ ಹಾರಾಟ ಮೇ 3ರವರೆಗೂ ಸ್ಥಗಿತಗೊಳ್ಳಲಿದೆ. ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ವಿಮಾನ ಸೇವೆಯ ಬಗ್ಗೆ ನಿರ್ಧರಿಸಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ಸಚಿವ ಹರ್‍ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.