– ಏಮ್ಸ್ ವೈದ್ಯ 14 ದಿನ ಕ್ವಾರಂಟೈನ್
– ತಮ್ಮ ಜೀವವನ್ನ ಪಣಕ್ಕಿಟ್ಟು ರೋಗಿ ಪ್ರಾಣ ಉಳಿಸಿದ ಡಾಕ್ಟರ್
ನವದೆಹಲಿ: ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ರೋಗಿಗಳ ಜೀವ ಉಳಿಸಲು ವೈದ್ಯರು ಹಗಲಿರುಳು ಎನ್ನದೇ ಕರ್ತವ್ಯ ನಿಷ್ಠ ಮೆರೆಯುತ್ತಿದ್ದಾರೆ. ಇದೀಗ ಏಮ್ಸ್ ವೈದ್ಯರೊಬ್ಬರು ತಮ್ಮ ರಕ್ಷಣೆಗೆ ಹಾಕಿಕೊಂಡಿದ್ದ ಫೇಸ್ ಶೀಲ್ಡ್ ತೆಗೆದು ಕೋವಿಡ್-19 ರೋಗಿಯ ಜೀವ ಉಳಿಸುವ ಮೂಲಕ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ಘಟನೆ ನಡೆದಿದೆ.
ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವೈದ್ಯ ಝಹೀದ್ ಅಬ್ದುಲ್ ಮಜೀದ್ ತಮ್ಮ ಫೇಸ್ ಶೀಲ್ಡ್ ತೆಗೆದು ಕೊರೊನಾ ರೋಗಿಯ ಜೀವ ಉಳಿಸಿದ್ದಾರೆ. ಕೊರೊನಾ ಸೋಂಕು ದೃಢಪಟ್ಟಿದ್ದ ರೋಗಿಯನ್ನು ಏಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ರೋಗಿಯ ಸ್ಥಿತಿ ಗಂಭೀರವಾದ ಕಾರಣ ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಲು ನಿಗದಿಪಡಿಸಿದ್ದ ಸೆಂಟರ್‌ಗೆ ಸ್ಥಳಾಂತರಿಸಬೇಕಿತ್ತು. ಹೀಗಾಗಿ ರಾತ್ರಿ ಡಾ.ಮಜೀದ್ ಅವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಲಾಗಿದೆ.
Advertisement
Advertisement
ಮಾಹಿತಿ ತಿಳಿದು ತಕ್ಷಣ ಡಾ.ಮಜೀದ್ ತಮ್ಮ ರಂಜಾನ್ ಉಪವಾಸವನ್ನು ಬ್ರೇಕ್ ಮಾಡಿ ರೋಗಿಗೆ ಚಿಕಿತ್ಸೆ ನೀಡಲು ಮುಂದಾದರು. ಈ ವೇಳೆ ಡಾ. ಮಜೀದ್ ಅಂಬ್ಯುಲೆನ್ಸ್‌ನಲ್ಲಿ ರೋಗಿಯನ್ನು ಮಲಗಿಸಿ ಆಕ್ಸಿಜನ್ ಅವಳಡಿಸಬೇಕಿತ್ತು. ಆದರೆ ರಾತ್ರಿ ಕತ್ತಲಾಗಿದ್ದ ಕಾರಣ ಸರಿಯಾಗಿ ಕಾಣುತ್ತಿರಲಿಲ್ಲ. ಅಲ್ಲದೇ ಫೇಸ್ ಶೀಲ್ಡ್‌ನಿಂದ ಸರಿಯಾಗಿ ಕಾಣುತ್ತಿರಲಿಲ್ಲ. ತಡ ಮಾಡಿದರೆ ರೋಗಿಗೆ ಅಪಾಯವಾಗುವ ಸಾಧ್ಯತೆ ಇತ್ತು. ಹೀಗಾಗಿ ಡಾ.ಮಜೀದ್ ತಕ್ಷಣ ತಾವು ಧರಿಸಿದ್ದ ಫೇಸ್ ಶೀಲ್ಡ್ ಆಕ್ಸಿಜನ್ ಅಳವಡಿಸಿದ್ದಾರೆ.
Advertisement
ರೋಗಿಯನ್ನು ಸುರಕ್ಷಿತವಾಗಿ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾನು ಧರಿಸಿದ್ದ ಫೇಸ್ ಶೀಲ್ಡ್ ಚಿಕಿತ್ಸೆ ನೀಡಲು ಸರಿಯಾಗಿ ಕಾಣಿಸುತ್ತಿರಲಿಲ್ಲ. ಇತ್ತ ರೋಗಿಯ ಸ್ಥಿತಿ ಗಂಭೀರವಾಗಿತ್ತು. ಸ್ವಲ್ಪ ತಡ ಮಾಡಿದ್ದರೂ ರೋಗಿ ಸಾಯುವ ಸಾಧ್ಯತೆ ಇತ್ತು. ಹೀಗಾಗಿ ರೋಗಿಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಫೇಸ್ ಶೀಲ್ಡ್ ತೆಗೆದು ಚಿಕಿತ್ಸೆ ನೀಡಿದೆ ಎಂದು ಡಾ.ಮಜೀದ್ ಹೇಳಿದರು.
Advertisement
ಹೀಗಾಗಿ ಡಾ.ಮಜೀದ್ ಅವರಿಗೆ ಕೊರೊನಾ ಹಬ್ಬಿರುವ ಶಂಕೆ ಮೇರೆಗೆ ಅವರನ್ನು 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿದೆ ಎಂದು ಏಮ್ಸ್ ಆಸ್ಪತ್ರೆಯ ಕಾರ್ಯದರ್ಶಿ ತಿಳಿಸಿದ್ದಾರೆ. ರೋಗಿಯ ಜೀವವನ್ನು ಉಳಿಸಿದ್ದಕ್ಕೆ ಡಾ. ಮಜೀದ್ ಅವರ ಧೈರ್ಯವನ್ನು ಏಮ್ಸ್ ವೈದ್ಯರ ತಂಡವು ಶ್ಲಾಘಿಸಿದೆ.
ನನ್ನ ಕೊರೊನಾ ಪರೀಕ್ಷಾ ವರದಿಗಾಗಿ ನಾನು ಕಾಯುತ್ತಿದ್ದೇನೆ. ವರದಿಯಲ್ಲಿ ನೆಗೆಟಿವ್ ಬಂದರೆ ನಾನು ಮತ್ತೆ ಕೆಲಸಕ್ಕೆ ಸೇರುತ್ತೇನೆ. ಇಲ್ಲದಿದ್ದರೆ ನಾನು 14 ದಿನಗಳ ಕಾಲ ಕ್ವಾಂಟೈನ್‍ನಲ್ಲಿ ಇರುತ್ತೇನೆ ಎಂದು ವೈದ್ಯರು ಹೇಳಿದರು.