ನವದೆಹಲಿ: ದೊಡ್ಡ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯನ್ನು ಬಲವಂತವಾಗಿ ದೆಹಲಿಯ ರೆಡ್ ಲೈಟ್ ಏರಿಯಾ ಜಿಬಿ ರಸ್ತೆಯಲ್ಲಿರುವ ವೇಶ್ಯಾವಾಟಿಕೆಗೆ ಮಾರಾಟ ಮಾಡಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ರೆಡ್ ಲೈಟ್ ಏರಿಯಾಗೆ ಬಂದ ಗ್ರಾಹಕನೊಬ್ಬನ ಸಹಾಯದಿಂದ ಮಹಿಳೆಯನ್ನು ಅಲ್ಲಿಂದ ರಕ್ಷಣೆ ಮಾಡಲಾಗಿದೆ. ಪ್ರತಿ ದಿನ 15-20 ಮಂದಿ ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ನಡೆಸುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಮಹಿಳೆ ಮೂಲತಃ ಪಶ್ಚಿಮ ಬಂಗಾಳದವಳಾಗಿದ್ದು, ಆಕೆ ಕೋಲ್ಕತ್ತಾದಲ್ಲಿ ದೊಡ್ಡ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ವ್ಯಕ್ತಿಯೊಬ್ಬ ಒಳ್ಳೆಯ ಕೆಲಸ ಕೊಡಿಸುವುದಾಗಿ ಹೇಳಿ ಆಕೆಯನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಜಿಬಿ ರಸ್ತೆಯಲ್ಲಿ ಆಕೆಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿದ್ದಾನೆ. ನಂತರ ಮಹಿಳೆಯನ್ನು ವೇಶ್ಯಾವಾಟಿಕೆಯಲ್ಲಿದ್ದ ವ್ಯಕ್ತಿಯೊಬ್ಬ ಮಾರಾಟ ಮಾಡಿದ್ದಾನೆ ಎಂದು ವರದಿಯಾಗಿದೆ.
Advertisement
ಒಂದು ದಿನ ಬಂಗಾಲಿ ವ್ಯಕ್ತಿಯೊಬ್ಬ ಗ್ರಾಹಕನಾಗಿ ಮಹಿಳೆ ಬಳಿಗೆ ಬಂದಿದ್ದಾನೆ. ಆಗ ಮಹಿಳೆ ಆತನ ಬಳಿ ಸಹಾಯ ಕೇಳಿದ್ದು, ಗ್ರಾಹಕ ಮಹಿಳೆಗೆ ಸಹಾಯ ಮಾಡಲು ಒಪ್ಪಿಕೊಂಡಿದ್ದಾನೆ. ನಂತರ ಮಹಿಳೆ ತನ್ನ ಸಹೋದರನ ಫೋನ್ ನಂಬರ್ ಆತನಿಗೆ ಕೊಟ್ಟಿದ್ದಾಳೆ. ಗ್ರಾಹಕ ಸಹೋದರನಿಗೆ ಫೋನ್ ಮಾಡಿ ನಡೆದಿರುವ ಘಟನೆಯ ಬಗ್ಗೆ ವಿವರಿಸಿದ್ದಾನೆ. ತಕ್ಷಣ ಸಹೋದರ ಪಶ್ಚಿಮ ಬಂಗಾಳದಿಂದ ದೆಹಲಿಗೆ ಬಂದು ಆತನೂ ಗ್ರಾಹಕನಾಗಿ ವೇಶ್ಯಾಗೃಹಕ್ಕೆ ಹೋಗಿ ಸಹೋದರಿಯನ್ನು ಭೇಟಿ ಮಾಡಿದ್ದಾನೆ.
Advertisement
ಸಹೋದರಿಯ ಜೊತೆ ಮಾತನಾಡಿ ನಂತರ ಮಹಿಳಾ ಆಯೋಗದಲ್ಲಿ ದೂರು ನೀಡಿದ್ದಾರೆ. ದೆಹಲಿ ಮಹಿಳಾ ಆಯೋಗ ಸ್ಥಳೀಯ ಪೊಲೀಸರ ಸಹಾಯದಿಂದ ವೇಶ್ಯಾವಾಟಿಕೆ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ಮಹಿಳೆಯನ್ನು ರಕ್ಷಿಸಿದ್ದಾರೆ. ಸದ್ಯಕ್ಕೆ ದೆಹಲಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಯನ್ನು ರಕ್ಷಣೆ ಮಾಡಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮ್ಯಾನೇಜರ್‌ನನ್ನು ಬಂಧಿಸಿದ್ದಾರೆ.
ಮಹಿಳೆಯನ್ನು ದೆಹಲಿಯ ಜಬಿ ರಸ್ತೆಯಲ್ಲಿ ಮಾರಾಟ ಮಾಡಿದ್ದರು. ಹೀಗಾಗಿ ಆಕೆ ಕುಟುಂಬದವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಇತ್ತ ಆಕೆಯ ಸಹೋದರ ಕೂಡ ಕೋಲ್ಕತ್ತಾದಲ್ಲಿ ನಾಪತ್ತೆ ದೂರನ್ನು ದಾಖಲಿಸಿದ್ದರು. ಜೂನ್ 8ರಂದು ಮಹಿಳೆಯನ್ನು ದೆಹಲಿಗೆ ಕರೆತರಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.