ನವದೆಹಲಿ: ರಸ್ತೆ ಅಪಘಾತವನ್ನು ಕಡಿಮೆ ಮಾಡುವ ಉದ್ದೇಶದಿಂದ ಸಂಚಾರ ನಿಯಮ ಉಲ್ಲಂಘನೆಗಳಿಗೆ ಭಾರೀ ದಂಡ ವಿಧಿಸುವಂತಹ ಮೋಟಾರು ವಾಹನ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಸಮ್ಮತ್ತಿ ಸಿಕ್ಕಿದೆ.
2017ರಲ್ಲೇ ಪರಿಚಯವಾಗಿದ್ದ ಈ ಮಸೂದೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯಲ್ಲಿ ಮತ್ತೆ ಮಂಡಿಸಿದರು. ಈ ಮಸೂದೆ ಪರ 108 ಹಾಗೂ ವಿರುದ್ಧ 13 ಮತಗಳು ಬಂದಿತ್ತು.
Advertisement
Advertisement
ಇದೀಗ ಮೋಟಾರು ವಾಹನ ಅಪಘಾತಕ್ಕೆ ಸಂಬಂಧಿತ ಕೇಸ್‍ಗಳಲ್ಲಿ ಮೃತರಾದವರಿಗೆ 5 ಲಕ್ಷ ಹಾಗೂ ತೀವ್ರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂಪಾಯಿ ಪರಿಹಾರ ಸೇರಿದಂತೆ ಟ್ರಾಫಿಕ್ ಸಂಬಂಧಿತ ಅಪರಾಧಗಳಲ್ಲಿ ಹೆಚ್ಚಿನ ದಂಡ ಜೊತೆಗೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಇದರ ಜೊತೆಗೆ ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳಿಗೆ ಸೀಟ್ ಬೆಲ್ಟ್ ಕಡ್ಡಾಯ ಮಾಡಿದೆ.
Advertisement
ನೂತನ ನಿಯಮದನ್ವಯ ಎಷ್ಟು ರೂಪಾಯಿ ದಂಡ ವಿಧಿಸಲಾಗುತ್ತದೆ?
Advertisement
* ಸಂಚಾರ ನಿಯಮ ಉಲ್ಲಂಘನೆಗೆ- 500 ದಂಡ
* ತುರ್ತು ವಾಹನಗಳಿಗೆ ದಾರಿ ಬಿಡದಿದ್ದರೆ – 10,000 ದಂಡ, 6 ತಿಂಗಳು ಜೈಲು
* ಅತಿ ವೇಗದ ಚಾಲನೆ – 1,000 ದಿಂದ 2,000 ದಂಡ, 3 ತಿಂಗಳು ಜೈಲು
* ಕುಡಿದು ವಾಹನ ಚಾಲನೆ – 10,000 ದಂಡ, 6 ತಿಂಗಳು ಜೈಲು
* ಹೆಲ್ಮೆಟ್ ಧರಿಸದೆ ಡ್ರೈವಿಂಗ್ – 1,000 ದಂಡ
* ವಿಮೆ ರಹಿತ ವಾಹನ ಚಾಲನೆ – 2,000 ದಂಡ
* ಅಪ್ರಾಪ್ತರಿಂದ ವಾಹನ ಚಾಲನೆ – 25,000 ದಂಡ (ಪೋಷಕರ ವಿರುದ್ಧ ಕಾನೂನು ಕ್ರಮ)
* ಲೈಸೆನ್ಸ್ ಇಲ್ಲದೆ ಅನಧಿಕೃತ ವಾಹನ ಚಾಲನೆ – 5,000 ದಂಡ
* ಅತಿ ವೇಗದ ಚಾಲನೆಗೆ – 1,000 ವರೆಗೆ ದಂಡ
* ವಾಹನಗಳ ಅಪಘಾತವಾದರೆ ಚಾಲಕರಿಗೆ – 10 ಲಕ್ಷದ ವರೆಗೆ ದಂಡ
* ಓವರ್ ಲೋಡಿಂಗ್- 20,000 ರೂ.
* ವಾಹನ ಪರವಾನಿಗೆ ಉಲ್ಲಂಘಿಸುವ ಟ್ಯಾಕ್ಸಿ ಕಂಪನಿಗಳಿಗೆ- 1 ಲಕ್ಷ ದಂಡ
* ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆ – 5000 ದಂಡ, 6 ತಿಂಗಳು ಜೈಲು ಇತ್ಯಾದಿ