ನವದೆಹಲಿ: ಗಾಜು ಲೇಪಿತ ಗಾಳಿಪಟ ನಾಲ್ಕೂವರೆ ವರ್ಷದ ಮಗುವಿನ ಗಂಟಲು ಸೀಳಿರುವ ಘಟನೆ ದೆಹಲಿಯ ಖಜೂರಿ ಪ್ರದೇಶದಲ್ಲಿ ನಡೆದಿದೆ.
ಈ ಘಟನೆಯಲ್ಲಿ ನಾಲ್ಕೂವರೆ ವರ್ಷದ ಮಗು ಇಶಿಕಾ ಮೃತ ಪಟ್ಟಿದ್ದಾಳೆ. ಇಶಿಕಾ ತನ್ನ ತಂದೆ-ತಾಯಿ ಜೊತೆ ದೇವಸ್ಥಾನಕ್ಕೆ ಹೋಗುವಾಗ ಈ ಘಟನೆ ಸಂಭವಿಸಿದೆ. ದೆಹಲಿಯಲ್ಲಿ ಗಾಳಿಪಟಕ್ಕೆ ಇದು ಎರಡನೇ ಬಲಿಯಾಗಿದ್ದು, ಇತ್ತೀಚಿಗಷ್ಟೇ ಎಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದ ಯುವಕ ಇದೇ ರೀತಿ ಸಾವನ್ನಪ್ಪಿದ್ದನು.
Advertisement
Advertisement
ಸೋನಿಯಾ ವಿಹಾರ್ ನಿವಾಸಿ ಗಿರೀಶ್ ಕುಮಾರ್ ಎಂಬವರು ಪತ್ನಿ ಜೊತೆ ದ್ವಿಚಕ್ರ ವಾಹನದಲ್ಲಿ ಮಗಳು ಇಶಿಕಾಳನ್ನು ಕೂರಿಸಿಕೊಂಡು ಜಮುನಾ ಬಜಾರ್ ನಲ್ಲಿರುವ ಹನುಮಾನ್ ಮಂದಿರಕ್ಕೆ ತೆರೆಳಿದ್ದಾರೆ. ಈ ವೇಳೆ ಮಾರ್ಗ ಮಧ್ಯದಲ್ಲಿ ಹಾರಿಬಂದ ಗಾಜು ಲೇಪಿತ ಗಾಳಿಪಟ ಬೈಕ್‍ನಲ್ಲಿ ಮುಂದೆ ಕುಳಿತ್ತಿದ್ದ ಇಶಿಕಾಳ ಗಂಟಲು ಸೀಳಿದೆ. ತಕ್ಷಣ ಮಗುವನ್ನು ಜೆಪಿಸಿ ಆಸ್ಪತ್ರೆ ದಾಖಲಿಸಲಾಗಿದೆ. ಆದರೆ ಮಗು ಆಗಲೇ ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿದ್ದಾರೆ.
Advertisement
ಈ ವಿಚಾರದ ಬಗ್ಗೆ ಮಾತನಾಡಿರುವ ದೆಹಲಿ ಪೊಲೀಸರು ಐಪಿಸಿ ಸೆಕ್ಷನ್ 304 ಎ ಆಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
Advertisement
ಈ ವಾರದ ಹಿಂದೇ ಅಷ್ಟೇ ಇದೇ ರೀತಿಯಲ್ಲಿ ಬುದ್ ವಿಹಾರ್ ನಿವಾಸಿಯಾದ ಮನಮ್ ಶರ್ಮಾ ಎಂಬ ಸಿವಿಲ್ ಎಂಜಿನೀಯರ್ ಉದ್ಯೋಗಿ ಬೈಕ್‍ನಲ್ಲಿ ಹೋಗುತ್ತಿದ್ದಾಗ, ಗಾಜು ಲೇಪಿತ ಚೀನಾ ಗಾಳಿಪಟ ಗಂಟಲನ್ನು ಸೀಳಿತ್ತು.