ನವದೆಹಲಿ: ರಾಜಕೀಯ ಅಸ್ಥಿರತೆಗೆ ವಿಶ್ವಾಸ ಮತಯಾಚನೆಯೊಂದೇ ಮಾರ್ಗ ಈ ಹಿನ್ನಲೆ ನಾಳೆ ಸಂಜೆ ಐದು ಗಂಟೆಯೊಳಗೆ ಬಹುಮತ ಸಾಬೀತುಪಡಿಸುವಂತೆ ಮಧ್ಯಪ್ರದೇಶ ಸಿಎಂ ಕಮಲ್‍ನಾಥ್ ನೇತೃತ್ವದ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಬಿಜೆಪಿ ಮುಖಂಡ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಡಿ.ವೈ ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ಪೀಠ ಈ ಮಹತ್ವ ಆದೇಶ ನೀಡಿದೆ.
Advertisement
Advertisement
ಎರಡು ದಿನಗಳಿಂದ ವಿಚಾರ ನಡೆಸುತ್ತಿದ್ದ ಪೀಠ ಇಂದು ಬಹುಮತ ಸಾಬೀತಿಗೆ ಸೂಚನೆ ನೀಡಿತ್ತು. ಕೈ ಎತ್ತುವ ಮೂಲಕ ವಿಶ್ವಾಸಮತಯಾಚನೆ ಮಾಡಬೇಕು ಈ ಎಲ್ಲ ಪ್ರಕ್ರಿಯೆಗಳನ್ನು ವಿಡಿಯೋ ಚಿತ್ರೀಕರಣ ಮಾಡಬೇಕು. ಬಂಡಾಯ ಶಾಸಕರು ವಿಧಾನಸಭೆ ಆಗಮಿಸುವುದಾದರೆ ಕರ್ನಾಟಕ ಮತ್ತು ಮಧ್ಯಪ್ರದೇಶ ಪೊಲೀಸ್ ಇಲಾಖೆ ಭದ್ರತೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
Advertisement
Advertisement
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‍ನ ಹಿರಿಯ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರ 22 ಬೆಂಬಲಿಗ ಶಾಸಕರು ಮುಖ್ಯಮಂತ್ರಿ ಕಮಲ್‍ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಂಡೆದ್ದಿದ್ದಾರೆ. ಈಗಾಗಲೇ 6 ಮಂದಿ ಶಾಸಕರ ರಾಜೀನಾಮೆ ಅಂಗೀಕಾರವಾಗಿದೆ. ಬಾಕಿ ಶಾಸಕರು ಬೆಂಗಳೂರಿನ ಖಾಸಗಿ ರೆಸಾರ್ಟ್ ನಲ್ಲಿ ತಂಗಿದ್ದಾರೆ.
ಬಹುಮತ ಕಳೆದುಕೊಂಡಿರುವ ಕಾಂಗ್ರೆಸ್ ಸರ್ಕಾರ ಬಹುಮತ ಸಾಬೀತುಪಡಿಸಲು ಬಿಜೆಪಿ ನಾಯಕರು ಒತ್ತಾಯಿಸಿದ್ದರು. ಕಮಲ್‍ನಾಥ್ ಅವರು ಬಹುಮತ ಸಾಬೀತು ಮಾಡಬೇಕು ಎಂದು ರಾಜ್ಯಪಾಲರೂ ಸೂಚಿಸಿದ್ದರು. ವಿರೋಧ ಪಕ್ಷದ ಒತ್ತಾಯ ಮತ್ತು ರಾಜ್ಯಪಾಲರ ಆದೇಶಗಳ ಹೊರತಾಗಿಯೂ ಸ್ಪೀಕರ್ ವಿಧಾನಸಭೆಯನ್ನು ಮುಂದೂಡಿದ್ದರು. ಇದನ್ನು ಪ್ರಶ್ನಿಸಿ ಶಿವರಾಜ್ ಚೌಹಾನ್ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.