ನವದೆಹಲಿ: ಸಿಎಎ ವಿರೋಧಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದ ವೇಳೆ ಅಪರಚಿತ ವ್ಯಕ್ತಿಯೋರ್ವ ಗುಂಡಿನ ದಾಳಿ ಮಾಡಿದ್ದು, ಪ್ರತಿಭಟನಾ ನಿರತ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದಾನೆ.
ಇಂದು ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಪೌರತ್ವ ಕಾಯ್ದೆಯನ್ನು ವಿರೋಧಿಸಿ ಜಾಮಿಯಾ ಯುನಿವರ್ಸಿಟಿಯಿಂದ ರಾಜ್‍ಘಾಟ್‍ನಲ್ಲಿ ಇರುವ ಮಹಾತ್ಮ ಗಾಂಧಿ ಸ್ಮಾರಕದವರೆಗೂ ಮೆರವಣಿಗೆ ಹಮ್ಮಿಕೊಂಡಿದ್ದರು. ಈ ಸಮಯದಲ್ಲಿ ಅಲ್ಲಿ ಕಾಣಿಸಿಕೊಂಡ ಅಪರಿಚಿತ ವ್ಯಕ್ತಿಯೋರ್ವ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ಮಾಡಿದ್ದಾನೆ.
Advertisement
#UPDATE Delhi Police: Man, who brandished the gun and opened fire in Jamia area, has been taken into custody. He is being questioned. The injured, said to be a student, has been admitted to a hospital. Investigation is continuing. https://t.co/6Mh2021fyw
— ANI (@ANI) January 30, 2020
Advertisement
ಈ ಘಟನೆಯಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿ ಶಾದಾಬ್ ಅಲಂಗೆ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಶಾದಾಬ್ ಅಲಂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕಾಲೇಜಿನ ಸಮುಹ ಸಂವಹನ ವಿಭಾಗದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಪ್ರತಿಭಟನೆಯ ಸಮಯದಲ್ಲಿ ಗುಂಡಿನ ದಾಳಿ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ‘ನಿಮಗೆ ಅಜಾದಿ ಬೇಕೇ’ ನಾನು ಕೊಡುತ್ತೇನೆ ಎಂದು ಹೇಳಿ ಗುಂಡಿನ ದಾಳಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
Advertisement
Delhi: The student injured after a man brandished a gun and opened fire in Jamia area today. He has been admitted to a hospital. The man who had opened fire has been taken into police custody and is being questioned. pic.twitter.com/w3jrfvcDFr
— ANI (@ANI) January 30, 2020
Advertisement
ಗುಂಡಿನ ದಾಳಿ ಮಾಡುವಾಗ ಆ ಅಪರಿಚಿತ ವ್ಯಕ್ತಿ “ದೆಹಲಿ ಪೊಲೀಸ್ ಜಿಂದಾಬಾದ್ ಜಾಮಿಯಾ ವಿವಿ ಮುರ್ದಾಬಾದ್” ಎಂದು ಘೋಷಣೆ ಕೂಗುತ್ತಿದ್ದ. ಈಗ ಪೊಲೀಸರು ಆತನನ್ನು ಬಂಧಿಸಿದ್ದು ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.