ನವದೆಹಲಿ: ಬೈಕ್‍ನಲ್ಲಿ ಮ್ಯೂಸಿಕ್ ಹಾಕಿದ್ದಕ್ಕೆ ಸವಾರನಿಗೆ ದೆಹಲಿಯ ತಿಲಕ್ ನಗರ ಸಂಚಾರಿ ಪೊಲೀಸರು ದಂಡ ಹಾಕಿದ್ದಾರೆ.
ರಾಘವ್ ಸ್ವಾತಿ ಪ್ರುತಿ ಎಂಬವರ ತಮ್ಮ ಹೊಸ ಹಾರ್ಲೆ ಡೇವಿಡ್‍ಸನ್ ಬೈಕಿನಲ್ಲಿ ಮ್ಯೂಸಿಕ್ ಹಾಕಿಕೊಂಡು ಬೈಕ್ ಚಲಾಯಿಸಿದ್ದಾರೆ ಎಂದು ಅವರನ್ನು ಬೈಕ್ ಸಮೇತ ಠಾಣೆಗೆ ಕರೆದುಕೊಂಡು ಹೋಗಿ ದಂಡ ವಿಧಿಸಿದ್ದಾರೆ.
Advertisement
ಈ ವಿಚಾರಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್‍ನಲ್ಲಿ ಪೋಸ್ಟ್ ಹಾಕಿರುವ ರಾಘವ್, ನಾನು ನನ್ನ ಹೊಸ ಬೈಕಿನಲ್ಲಿ ತಿಲಕ್ ನಗರದಲ್ಲಿ ಬರುತ್ತಿದ್ದೆ. ಆಗ ಸಂಚಾರಿ ಪೊಲೀಸರು ನನ್ನನ್ನು ಆಡ್ಡ ಹಾಕಿದರು. ನಂತರ ದಾಖಲೆ ತೋರಿಸಲು ಹೇಳಿದರು ನಾನು ತೋರಿಸಿದೆ. ಆದರೆ ಅವರು ನೀನು ಬೈಕ್‍ಗೆ ಮ್ಯೂಸಿಕ್ ಪ್ಲೇಯರ್ ಹಾಕಿಸಿದ್ದೀಯ ಇದು ಕಾನೂನುಬಾಹಿರ ನೀನು ಪೊಲೀಸ್ ಠಾಣೆ ಬಾ ಎಂದು ಕರೆದುಕೊಂಡು ಹೋದರು.
Advertisement
https://www.facebook.com/raghavinder.pruthi/posts/2706060389417603
Advertisement
ನಾನು ಪೊಲೀಸರ ಮಾತಿನಂತೆ ಠಾಣೆಗೆ ಹೋದೆ ಅಲ್ಲಿ ನಾನು ಮ್ಯೂಸಿಕ್ ಪ್ಲೇಯರ್ ಅನ್ನು ಬೈಕ್ ಕಂಪನಿಯವರೆ ಹಾಕಿದ್ದಾರೆ. ನಾನು ಹಾಕಿಸಿಲ್ಲ ಎಂದು ಹೇಳಿದರು ಕೇಳದ ತಿಲಕ್ ನಗರ ಠಾಣೆಯ ಎಸಿಪಿ ಮತ್ತು ಎಸ್‍ಐ ನೀನು ಅಕ್ರಮವಾಗಿ ಬೈಕ್ ಓಡಿಸುತ್ತಿದ್ದೀಯ ಎಂದು ನನ್ನ ಮೇಲೆ ಕಿರುಚಾಡಿದರು. ನಾನು ಬೈಕ್ ಓಡಿಸುವಾಗ ಕಡಿಮೆ ಸೌಂಡ್ ಇಟ್ಟು ಓಡಿಸುತ್ತಿದ್ದೆ. ಆದರೆ ಪೊಲೀಸರು ಜಾಸ್ತಿ ಸೌಂಡ್ ಕೊಡಲು ಹೇಳಿ ಅದನ್ನು ವಿಡಿಯೋ ಮಾಡಿದರು. ನೀನು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದೀಯ ಎಂದು ದಂಡ ಹಾಕಿದರು ಎಂದು ಬರೆದುಕೊಂಡಿದ್ದಾರೆ.
Advertisement
ತಮ್ಮ ಹಾರ್ಲೆ ಡೇವಿಡ್‍ಸನ್ ಬೈಕಿನಲ್ಲಿ ಮ್ಯೂಸಿಕ್ ಪ್ಲೇ ಮಾಡಿದಕ್ಕೆ ರಾಘವ್ ಅವರಿಗೆ ಮೋಟಾರು ವಾಹನಗಳ ತಿದ್ದುಪಡಿ ಕಾಯ್ದೆಯಡಿ ದೆಹಲಿ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ.