ನವದೆಹಲಿ: ವಿದ್ಯುತ್ ಚಾಲಿತ ಆಟೋದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡ ಆಟೋ ಚಾಲಕನ ಐಡಿಯಾಗೆ ಉದ್ಯಮಿ ಆನಂದ್ ಮಹೀಂದ್ರಾ ಫಿದಾ ಆಗಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್ ಜಾಸ್ತಿಯಾದ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಟೋ ಚಾಲಕನೋರ್ವ ತನ್ನ ಆಟೋದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು ಸಾಮಾಜಿಕ ಅಂತರದಲ್ಲಿ ಕುಳಿತುಕೊಳ್ಳುವಂತೆ ತನ್ನ ಆಟೋದ ಹಿಂಬದಿಯ ಸೀಟುಗಳನ್ನು ಪ್ರತ್ಯೇಕವಾಗಿ ಡಿಸೈನ್ ಮಾಡಿದ್ದಾನೆ.
Advertisement
The capabilities of our people to rapidly innovate & adapt to new circumstances never ceases to amaze me. @rajesh664 we need to get him as an advisor to our R&D & product development teams! pic.twitter.com/ssFZUyvMr9
— anand mahindra (@anandmahindra) April 24, 2020
Advertisement
ಈ ಇ-ಆಟೋ ಚಾಲಕನ ಐಡಿಯಾ ನೋಡಿ ಮೆಚ್ಚಿಕೊಂಡಿರುವ ಆನಂದ್ ಮಹೀಂದ್ರಾ ಅವರು, ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಸಮಾಜದಲ್ಲಿ ಸೃಷ್ಟಿಯಾಗುವ ಚಿತ್ರ ವಿಚಿತ್ರ ಪರಿಸ್ಥಿತಿಗೆ ತಕ್ಕಂತೆ ಬಹುಬೇಗ ನಮ್ಮ ಜನರು ಹೊಂದಿಕೊಳ್ಳುತ್ತಾರೆ. ಜೊತೆಗೆ ಹೊಸ ಹೊಸ ಐಡಿಯಾವನ್ನು ಆವಿಷ್ಕಾರ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ.
Advertisement
Advertisement
ಇದರ ಜೊತೆಗೆ ಆನಂದ್ ಮಹೀಂದ್ರಾ ಅವರು ಈ ಟ್ವೀಟ್‍ನಲ್ಲಿ ಮಹೀಂದ್ರಾ ಆಟೋ ಮತ್ತು ಫಾರ್ಮ್ ವಲಯಗಳ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೆಜುರಿಕರ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಜೊತೆಗೆ ನಾವು ಈ ಆಟೋ ಚಾಲಕನನ್ನು ನಮ್ಮ ಆರ್.ಡಿ ಮತ್ತು ಉತ್ಪನ್ನ ಅಭಿವೃದ್ಧಿ ತಂಡಗಳಿಗೆ ಸಲಹೆಗಾರರಾಗಿ ಸೇರಿಸಿಕೊಳ್ಳಬೇಕು ಎಂದು ಬರೆದು ಆಟೋ ಚಾಲಕನ ವಿಭಿನ್ನ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ.
ಕೊರೊನಾ ಸೋಂಕಿನಿಂದ ದೂರು ಇರಲು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಎಷ್ಟೇ ಹೇಳಿದರು ಕೆಲವು ಕಡೆ ಜನರು ಕೇಳುತ್ತಿಲ್ಲ. ಈ ರೀತಿಯ ಸಮಯದಲ್ಲಿ ಸದ್ಯ ಸಾಮಾಜಿಕ ಅಂತರ ಕಾಯ್ದುಕೊಂಡಿರುವ ಈ ಆಟೋ ಚಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಸುಮಾರು ಎರಡು ಸಾವಿರ ಜನರು ರೀಟ್ವೀಟ್ ಮಾಡಿದ್ದಾರೆ. ಸುಮಾರು ಹತ್ತು ಸಾವಿರ ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ.