ನನ್ನ ಮಗನ ಜೊತೆ ಟೈಲರ್ ಮಗ ಐಐಟಿಯಲ್ಲಿ ಓದುತ್ತಿರುವುದು ಖುಷಿಯ ವಿಚಾರ: ಕೇಜ್ರಿವಾಲ್

Public TV
2 Min Read
CM arvind kejriwal

ನವದೆಹಲಿ: ನನ್ನ ಮಗನ ಜೊತೆ ಒಬ್ಬ ಟೈಲರ್ ಮಗನು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯಲ್ಲಿ ಓದುತ್ತಿರುವುದು ಖುಷಿಯ ವಿಚಾರ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಯಲ್ಲಿರುವ ನಮ್ಮ ಸರ್ಕಾರ ಜಾರಿಗೆ ತಂದಿರುವ ಉಚಿತ ವಿದ್ಯಾಭ್ಯಾಸ ಯೋಜನೆಯ ಅಡಿಯಲ್ಲಿ ಪ್ರತಿಷ್ಠಿತ ಐಐಟಿ ಕಾಲೇಜಿನಲ್ಲಿ ಒಬ್ಬ ಟೈಲರ್ ಮಗ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಇವರ ಜೊತೆ ನಮ್ಮ ಮಗನು ಕೂಡ ವಿದ್ಯಾಭ್ಯಾಸ ಮಾಡುತ್ತಿರುವುದು ನನಗೆ ಬಹಳ ಸಂತೋಷವಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, ವಿಜಯ್ ಕುಮಾರ್ ಅವರ ತಂದೆ ದರ್ಜಿ, ಅವರ ತಾಯಿ ಗೃಹಿಣಿ. ಆದರೆ ದೆಹಲಿ ಸರ್ಕಾರ ಉಚಿತ ವಿದ್ಯಾಭ್ಯಾಸ ಯೋಜನೆ ಅಡಿ ಅವರು ಐಐಟಿಯಲ್ಲಿ ಪ್ರವೇಶ ಪಡೆದಿದ್ದಾರೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಇದು ಬಾಬಾ ಸಾಹೇಬ್ ಅವರ (ಬಿ.ಆರ್ ಅಂಬೇಡ್ಕರ್) ಕನಸು ಇಂದು ನನಸಾಗಿತು ಎಂದು ಟ್ವೀಟ್ ಮಾಡಿದ್ದಾರೆ.

ಇದರ ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಕೇಜ್ರಿವಾಲ್, ನನ್ನ ಮಗ ಮತ್ತು ಟೈಲರ್ ಒಬ್ಬರ ಮಗ ಒಂದೇ ಸಮಯದಲ್ಲಿ ಐಐಟಿಯಲ್ಲಿ ಅಧ್ಯಯನ ಮಾಡುತ್ತಾರೆ ಎಂದು ನನಗೆ ತುಂಬಾ ಸಂತೋಷವಾಗಿದೆ. ಉತ್ತಮ ಶಿಕ್ಷಣದ ವಿಚಾರದಲ್ಲಿ ಬಡವನ ಮಗ ಬಡವನಾಗಿರುತ್ತಾನೆ ಎಂಬ ಸಂಪ್ರದಾಯವಿದೆ. ಆದರೆ ನಾವು ಗುಣಮಟ್ಟದ ಶಿಕ್ಷಣ ಮತ್ತು ತರಬೇತಿಯನ್ನು ನೀಡುವ ಮೂಲಕ ಬಡವರು ಮತ್ತು ಶ್ರೀಮಂತರ ನಡುವೆ ಇರುವ ಅಂತರವನ್ನು ಕಡಿಮೆ ಮಾಡಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ಮಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪುತ್ರ ಪುಲ್ಕಿತ್ ಈ ವರ್ಷದ ಆರಂಭದಲ್ಲಿ 12 ನೇ ತರಗತಿಯ ಸಿಬಿಎಸ್‍ಇ ಪರೀಕ್ಷೆಯಲ್ಲಿ ಶೇ.96.4 ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಅವರ ಪುತ್ರಿ ಹರ್ಷಿತಾ ಕೇಜ್ರಿವಾಲ್ ಅವರು 2014 ರಲ್ಲಿ ತಮ್ಮ 12 ನೇ ತರಗತಿ ಸಿಬಿಎಸ್‍ಇ ಪರೀಕ್ಷೆಯಲ್ಲಿ ಶೇಕಡಾ 96 ರಷ್ಟು ಅಂಕಗಳನ್ನು ಗಳಿಸಿದ್ದರು. ನಂತರ, ಅವರು ಐಐಟಿ ಜಂಟಿ ಪ್ರವೇಶ ಪರೀಕ್ಷೆಯನ್ನು (ಜೆಇಇ) ಪಾಸ್ ಮಾಡಿದ್ದರು.

ಅರವಿಂದ್ ಕೇಜ್ರಿವಾಲ್ ಐಐಟಿ ಖರಗ್‍ಪುರದಲ್ಲಿ ಎಂಜಿನಿಯರಿಂಗ್ ಓದಿದ್ದಾರೆ. ಶಿಕ್ಷಣ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದು ಕೇಜ್ರಿವಾಲ್ ಸರ್ಕಾರದ ಪ್ರಾಥಮಿಕ ಗುರಿಯಾಗಿತ್ತು. ಈ ನಿಟ್ಟಿನಲ್ಲಿ ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಮತ್ತು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ವಿವಿಧ ಪ್ರಯತ್ನಗಳನ್ನು ನಡೆಸುತ್ತಿದೆ.

ಮಕ್ಕಳ ಒತ್ತಡವನ್ನು ನಿರ್ವಹಿಸಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ದೆಹಲಿ ಸರ್ಕಾರವು ಪರಿಚಯಿಸಿದ ಸಂತೋಷ ತರಗತಿಗಳು ಎಂಬ ಯೋಜನೆ ಶಿಕ್ಷಣ ತಜ್ಞರು ಮತ್ತು ರಾಜಕಾರಣಿಗಳಿಂದ ಮೆಚ್ಚುಗೆ ಗಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *