ನವದೆಹಲಿ: ಭಾರತದ ವಾಯು ಸೇನೆಗೆ ದೇಶದ ಗಡಿ ಉದ್ದಕ್ಕೂ ಸಾಮರ್ಥವಾಗಿ ದಾಳಿಯನ್ನು ಎದುರಿಸುವ ಹಾಗೂ ನಿಶ್ಚಿತ ಪ್ರದೇಶಗಳ ಮೇಲೆ ದಾಳಿಯನ್ನು ಮಾಡುವ ಸಾಮಥ್ರ್ಯವನ್ನು ವಾಯು ಸೇನೆ ಹೊಂದಿದೆ ಎಂದು ಏರ್‍ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಹೇಳಿದ್ದಾರೆ.
Advertisement
ಭಾರತ ಸರ್ಕಾರವು ಕೈಗೊಳ್ಳುವ ಯಾವುದೇ ಸರ್ಜಿಕಲ್ ದಾಳಿಯ ನಿರ್ಧಾರವನ್ನು ಸಾಮರ್ಥವಾಗಿ ನಿಭಾಯಿಸಲು ಸೇನೆ ಸಿದ್ಧವಿದ್ದು, ಚೀನಾ ದೇಶವನ್ನು ಮುಖಾಮುಖಿಯಾಗಿ ಎದುರಿಸಲು ಸಹ ಸಮರ್ಥರಾಗಿರುವುದಾಗಿ ತಿಳಿಸಿದರು.
Advertisement
ಯಾವುದೇ ಕಾರ್ಯಾಚರಣೆ ನಡೆಸಲು ನಮ್ಮ ತಂಡಗಳು ಸಿದ್ಧವಾಗಿದ್ದು, ಈಗಾಗಲೇ ಅನುಮತಿ ಸಿಕ್ಕಿದ ಹಿನ್ನೆಲೆಯಲ್ಲಿ 42 ಫೈಟರ್ ಸ್ಕ್ವಾಡ್ರನ್ 2032ರ ವೇಳೆಗೆ ಪೂರ್ಣಗೊಳ್ಳುತ್ತದೆ ಎಂದು ಹೇಳಿದರು.
Advertisement
ವಾಯುಪಡೆ ದಿನಾಚರಣೆಯ ಮುನ್ನಾ ದಿನವಾದ ಗುರುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ವಿರುದ್ಧ ಚೀನಾ ಯುದ್ಧಕ್ಕೆ ಮುಂದಾದರೆ ಪಾಕಿಸ್ತಾನವು ತನ್ನ ಮಿತ್ರನಿಗೆ ಸಹಾಯ ಮಾಡಲು ಮುಂದಾಗುತ್ತದೆ. ಈ ಸಂದರ್ಭದಲ್ಲಿ ಭಾರತದ ಎರಡು ಕಡೆಯಿಂದಲೂ ದಾಳಿಯನ್ನು ಎದುರಿಸಲು ಸಿದ್ಧವಾಗಿರಬೇಕು ಎಂಬ ಭೂ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆಗೆ ಇಂದು ಉತ್ತರಿಸಿದರು.
Advertisement
ಇದೇ ಸಂದರ್ಭದಲ್ಲಿ ಡೋಕ್ಲಾಂ ಗಡೀ ವಿಚಾರವಾಗಿಯು ಪ್ರಸ್ತಾಪಿಸಿದ ಅವರು ಚೀನಾ ದೇಶವು ಪೂರ್ಣ ಪ್ರಮಾಣದಲ್ಲಿ ತನ್ನ ಸೈನ್ಯವನ್ನು ವಿವಾದಿತ ಸ್ಥಳದಿಂದ ಹಿಂಪಡೆದಿಲ್ಲ. ಬೇಸಿಗೆ ಶಿಬಿರದ ಬಳಿಕ ಸೇನೆಯನ್ನು ಹಿಂಪಡೆಯುವ ವಿಶ್ವಾಸವಿದೆ ಎಂದು ತಿಳಿಸಿದರು.