ನವದೆಹಲಿ: ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಕೆದಾರರಿಗೆ ಗುಡ್‌ನ್ಯೂಸ್. ಜುಲೈ 1 ರಿಂದ ಕಂಪನಿಗಳು ಗ್ರಾಹಕರ ಕಾರ್ಡ್ ಡೇಟಾವನ್ನು ಸ್ಟೋರ್ ಮಾಡುವಂತಿಲ್ಲ.
ಆರ್‌ಬಿಐ ಕಳೆದ ವರ್ಷ ಗ್ರಾಹಕರ ರಕ್ಷಣೆ ಸಂಬಂಧ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನಿಯಮವನ್ನು ರೂಪಿಸಿತ್ತು. ಈ ನಿಯಮದ ಪ್ರಕಾರ ಕಂಪನಿಗಳು ಗ್ರಾಹಕರ ಕಾರ್ಡ್ ಡೇಟಾವನ್ನು ಸಂರಕ್ಷಣೆ ಮಾಡುವಂತಿಲ್ಲ. ಈ ಟೋಕನೈಸೇಶನ್ ನಿಯಮ ಈ ವರ್ಷದ ಜುಲೈ 1 ರಿಂದ ಜಾರಿಗೆ ಬರಲಿದೆ.
Advertisement
Advertisement
ದೇಶದ ಒಳಗಡೆ ಆನ್‌ಲೈನ್ ಮೂಲಕ ನಡೆಯುವ ಖರೀದಿಗೆ ಟೋಕನೈಸೇಷನ್ ನಿಯಮವನ್ನು ಆರ್‌ಬಿಐ ಕಡ್ಡಾಯ ಮಾಡಿದೆ. ಈ ನಿಯಮ ಜನವರಿ 1 ರಿಂದ ಜಾರಿಯಾಗಬೇಕಿತ್ತು. ಆದರೆ ಕಂಪನಿಗಳಿಗೆ 6 ತಿಂಗಳು ಕಾಲಾವಕಾಶ ವಿಸ್ತರಿಸಿದ್ದರಿಂದ ಜುಲೈನಿಂದ ಈ ನಿಯಮ ಜಾರಿಯಾಗುತ್ತಿದೆ.
Advertisement
ಈ ನಿಯಮದ ಪ್ರಕಾರ ವ್ಯವಹಾರ ನಡೆದ ಬಳಿಕ ಗ್ರಾಹಕರ ಡೆಬಿಟ್, ಕ್ರೆಡಿಟ್ ಕಾರ್ಡ್ ಡೇಟಾಗಳನ್ನು ಡಿಲೀಟ್ ಮಾಡಬೇಕಾಗುತ್ತದೆ. ಇದನ್ನೂ ಓದಿ: ಎಲೋನ್ ಮಸ್ಕ್ ನಡವಳಿಕೆ ಮುಜುಗರ ತಂದಿದೆ ಎಂದ ಉದ್ಯೋಗಿಗಳನ್ನೇ ಕಂಪನಿಯಿಂದ ಕಿತ್ತೊಗೆದ ಸ್ಪೇಸ್‌ಎಕ್ಸ್
Advertisement
ಈ ಟೋಕನೈಸೇಷನ್ ನಿಯಮ ಕಡ್ಡಾಯವೇನಲ್ಲ. ಟೋಕನೈಸೇಷನ್ ನಿಯಮಕ್ಕೆ ಯಾರು ಅನುಮತಿ ನೀಡುವುದಿಲ್ಲವೋ ಆ ಗ್ರಾಹಕರು ವ್ಯವಹಾರ ನಡೆಯುವ ಮುನ್ನ ಕಾರ್ಡ್‌ನಲ್ಲಿರುವ ಹೆಸರು, ಕಾರ್ಡ್ ನಂಬರ್, ವ್ಯಾಲಿಡಿಟಿ, ಸಿವಿವಿ ಎಲ್ಲವನ್ನು ಎಂಟ್ರಿ ಮಾಡಿದ ಬಳಿಕ ವ್ಯವಹಾರ ಮಾಡಬೇಕಾಗುತ್ತದೆ.
ಯಾರು ಕಾರ್ಡ್ ಟೋಕನೈಸೇಷನ್ ನಿಯಮಕ್ಕೆ ಒಪ್ಪಿಗೆ ನೀಡುತ್ತಾರೋ ಅವರು ಸಿವಿವಿ ಅಥವಾ ಒಟಿಪಿಯನ್ನು ದಾಖಲಿಸಿ ವ್ಯವಹಾರ ಮಾಡಬೇಕಾಗುತ್ತದೆ.