ಬೆಂಗಳೂರು: ಪಂಚಮಸಾಲಿ ಮೀಸಲಾತಿ (Panchamasali Reservation) ಬೇಡಿಕೆ ಈಡೇರಿಕೆಗೆ ಸರ್ಕಾರ ಕಂಡುಕೊಂಡಿದ್ದ ಪರಿಹಾರ ಸೂತ್ರ ರಿಜೆಕ್ಟ್ ಆಗಿದೆ. ಸರ್ಕಾರದ ಹೊಸ ಮೀಸಲಾತಿ ಸೂತ್ರಕ್ಕೆ ಪಂಚಮಸಾಲಿ ಹೋರಾಟಗಾರರು ತೀವ್ರವಾಗಿ ವಿರೋಧ ತೋರಿದ್ದಾರೆ.
Advertisement
ಪಂಚಮಸಾಲಿ ಮತ್ತು ಇತರೆ ಸಮುದಾಯಗಳಿಗೆ ಸೃಷ್ಟಿಸಿದ್ದ ಹೊಸ ಪ್ರವರ್ಗ 2ಡಿ ಪ್ರಸ್ತಾಪವನ್ನು ನಿರಾಕರಿಸಲಾಗಿದೆ. ಅಲ್ಲದೇ ಪಂಚಮಸಾಲಿಗಳಿಗೆ 2ಎ ಪ್ರವರ್ಗಕ್ಕೆ ಸೇರಿಸಲು ಹೋರಾಟಗಾರರು ಸರ್ಕಾರಕ್ಕೆ ಹೊಸ ಗಡುವು ನೀಡಿರೋದು ಸರ್ಕಾರಕ್ಕೆ ಗಂಟಲಲ್ಲಿ ಕಡುಬು ತುರುಕಿದಂತಾಗಿದೆ. ಆ ಮೂಲಕ ರಾಜ್ಯಸರ್ಕಾರಕ್ಕೆ ಮತ್ತೆ ಬಿಗಿಯಾಯ್ತು ಮೀಸಲಾತಿ ಕುಣಿಕೆ. ಪಂಚಮಸಾಲಿಯನ್ನು 2ಎ ಪ್ರವರ್ಗಕ್ಕೇ ಸೇರಿಸುವಂತೆ ಬಿಗಿ ಪಟ್ಟು ಮುದುವರಿಸಲಾಗಿದೆ.
Advertisement
Advertisement
24 ಗಂಟೆಯೊಳಗೆ 2ಎ ಸೇರ್ಪಡೆ ಘೋಷಣೆ ಮಾಡಬೇಕು. ಇನ್ನು ಜನವರಿ 12 ರೊಳಗೆ ಈ ಸಂಬಂಧ ಸರ್ಕಾರಿ ಆದೇಶ ಬರಬೇಕು. ಇಲ್ಲದಿದ್ದಲ್ಲಿ ಸಿಎಂ ಬೊಮ್ಮಾಯಿ (Basavaraj Bommai) ನಿವಾಸದ ಮುತ್ತಿಗೆ, ಹೋರಾಟದ ಎಚ್ಚರಿಕೆ ಕೊಡಲಾಗಿದೆ. ಗುರುವಾರ ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ ಜನಪ್ರತಿನಿಧಿಗಳು, ಪದಾಧಿಕಾರಿಗಳ ಸಭೆಯಲ್ಲಿ ಕೈಗೊಂಡ ಈ ನಿರ್ಣಯಗಳು ಸರ್ಕಾರಕ್ಕೆ ತೀವ್ರ ಹಿನ್ನಡೆಯುಂಟು ಮಾಡಿವೆ. ಇದನ್ನೂ ಓದಿ: ಕೋಲಾರ ಸ್ಪರ್ಧೆ ಫಿಕ್ಸ್- ಜನವರಿ 9ಕ್ಕೆ ಸಿದ್ದರಾಮಯ್ಯ ಫೈನಲ್ ಕಾಲ್..!?
Advertisement
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಬೇಡಿಕೆ ಈಡೇರಿಕೆಗೆ ಹೊಸ ಡೆಡ್ ಲೈನ್ ಕೊಟ್ಟಿರುವ ಸಂಬಂಧ ಇವತ್ತು ಸಚಿವ ಮುರುಗೇಶ್ ನಿರಾಣಿ (Murugesh Nirani) ಸಿಎಂ ಭೇಟಿ ಮಾಡಿ ಚರ್ಚಿಸಿದ್ದಾರೆ. ಇಂದು (ಶುಕ್ರವಾರ) ಬೆಳಗ್ಗೆ ಸಿಎಂ ಅವರ ಆರ್ ಟಿನಗರ ನಿವಾಸಕ್ಕೆ ಭೇಟಿ ನೀಡಿದ ವೇಳೆ ಈ ಬಗ್ಗೆ ಚರ್ಚೆ ನಡೆಸಿದ ಸಚಿವ ನಿರಾಣಿ, ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗ್ತಿದೆ ಎಂದು ಸಿಎಂ ಎದುರು ಬೇಸರ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಯತ್ನಾಳ್ (BasanaGaudaPatil Yatnal) ನನ್ನ ವಿರುದ್ಧ ಪದೇ ಪದೇ ಮಾತನಾಡ್ತಾರೆ ಎಂದು ನಿರಾಣಿಯವರು ಸಿಎಂ ಎದುರು ಅಸಮಾಧಾನ ಹೊರ ಹಾಕಿದ್ದಾರೆನ್ನಲಾಗಿದೆ.
ಒಟ್ಟಿನಲ್ಲಿ ಪಂಚಮಸಾಲಿ ಸಮುದಾಯದ ಹೋರಾಟದ ವರಸೆಗೆ ಸಿಎಂ ಹೈರಾಣರಾಗಿದ್ದಾರೆ. ಬೀಸೋ ದೊಣ್ಣೆಯಿಂದ ಪಾರಾಗುವ ಹೊತ್ತಿಗೆ ಮತ್ತೆ ಮೀಸಲಾತಿ ಕುಣಿಕೆ ಬಿಗಿಯಾಗಿರೋದು ಸಿಎಂ ತಲೆಬೇನೆ ಹೆಚ್ಚಿಸಿದೆ. ಹೋರಾಟಗಾರರ ಹೊಸ ಗಡುವು, ಸಿಎಂಗೆ ಇಕ್ಕಟ್ಟು ತಂದಿದೆ. ಅಲ್ಲಿಗೆ ಸರ್ಕಾರದ ಮುಂದಿನ ದಾರಿ ಅಸ್ಪಷ್ಟ, ಗೊಂದಲದಿಂದ ಕೂಡಿರೋದು ಸ್ಪಷ್ಟ. ಹಾಗಾದ್ರೆ ಸಿಎಂ ಅವರ ಎದುರು ಇರುವ ಅವಕಾಶಗಳಾದರೂ ಏನು? ಪಂಚಮಸಾಲಿಗಳ ಮನವೊಲಿಕೆಗೆ ಸಿಎಂ ಮುಂದಾಗ್ತಾರಾ? ಅಥವಾ ಹೊಸ ಪ್ರವರ್ಗದ ಬಗ್ಗೆ ಮತ್ತೆ ಮನವರಿಕೆ ಮಾಡಿ ಮಾಡ್ತಾರಾ? ಅಥವಾ ಸರ್ವಪಕ್ಷ ಸಭೆ ಕರೀತಾರಾ? ಅಥವಾ ಹೈಕಮಾಂಡ್ ಮೊರೆ ಹೋಗ್ತಾರಾ? ಈ ಪೈಕಿ ಸಿಎಂ ಯಾವ ದಾಳ ಉರುಳಿಸ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k