ಲಂಡನ್: ಬ್ರಿಟನ್‍ನಲ್ಲೀಗ (Britain) ಅಮರ್ ಅಕ್ಬರ್ ಆಂಥೋಣಿ ಆಳ್ವಿಕೆ. ರಾಜನ ಹುದ್ದೆಯಲ್ಲಿ ಕ್ರಿಶ್ಚಿಯನ್ ಧರ್ಮದ ಮೂರನೇ ಚಾರ್ಲ್ಸ್ (Charles III) ಇದ್ರೆ ಪ್ರಧಾನಿ ಗಾದಿಯನ್ನು ಹಿಂದೂ ಧರ್ಮದ ರಿಷಿ ಸುನಾಕ್ (Rishi Sunak) ಅಲಂಕರಿಸಿದ್ದಾರೆ.
Advertisement
ಲಂಡನ್ ಮೇಯರ್ ಸ್ಥಾನದಲ್ಲಿ ಪಾಕ್ ಮೂಲದ ಸಾದೀಕ್ ಖಾನ್ ಇದ್ದಾರೆ. ಹೀಗಾಗಿ ಬ್ರಿಟನ್ ಕೋಮು ಸೌಹಾರ್ದತೆಯ ಪ್ರತೀಕ ಎಂಬ ಮಾತು ಕೇಳಿಬರುತ್ತಿವೆ. ಆದ್ರೆ, ಇದೇ ಹೊತ್ತಲ್ಲಿ, ಬ್ರಿಟಿಷರಲ್ಲಿ ಹಿಂದೂ ಫೋಬಿಯಾ ಕೂಡ ಕಾಣುತ್ತಿರೋದು ಗೊತ್ತಾಗುತ್ತಿದೆ. ಇಂಗ್ಲೆಂಡ್‍ನ ಕೆಲ ಪತ್ರಿಕೆಗಳು ರಿಷಿ ಸುನಾಕ್‍ರನ್ನು ಪ್ರಧಾನಿ ಎಂದು ಒಪ್ಪಲು ಸಿದ್ಧವಿದ್ದಂತೆ ಕಾಣುತ್ತಿಲ್ಲ. ಸುನಾಕ್ ಯಾರಿಂದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಎಷ್ಟು ದಿನ ಪ್ರಧಾನಿ ಹುದ್ದೆಯಲ್ಲಿರ್ತಾರೆ ಸುನಾಕ್ ಎಂದು ಕೆಲ ಪತ್ರಿಕೆಗಳು ಮುಖಪುಟದಲ್ಲಿ ಬ್ಯಾನರ್ ಹೆಡ್‍ಲೈನ್ ಮಾಡಿ ಅಸಮಾಧಾನ ಹೊರಹಾಕಿವೆ. ಇದನ್ನೂ ಓದಿ: ಬ್ರಿಟನ್ ಪ್ರಧಾನಿಯಾದ ಗಂಟೆಗಳೊಳಗೆ ಸುನಾಕ್ ಹೊಸ ಕ್ಯಾಬಿನೆಟ್‌ಗೆ ಸಿದ್ಧತೆ
Advertisement
Advertisement
ರೇಡಿಯೋ ಶೋಗಳಲ್ಲಿ ಕೂಡ ಇಂಥದ್ದೇ ಪ್ರಶ್ನೆ ಎತ್ತಲಾಗುತ್ತಿದೆ. ನಾನು ಭಾರತಕ್ಕೋ ಸೌದಿಗೋ ಪ್ರಧಾನಿ ಆಗ್ತೀನಾ. ನೀವೆ ಹೇಳಿ. ಅಂತಹ ಅವಕಾಶವೇ ಇಲ್ಲ. ಬ್ರಿಟನ್‍ನಲ್ಲಿ ಶೇಕಡಾ 85ರಷ್ಟು ಶ್ವೇತ ವರ್ಣಿಯರಿದ್ದಾರೆ. ಜನರ ತಮ್ಮಲ್ಲೊಬ್ಬರನ್ನು ಪ್ರಧಾನಿಯಾಗಿ ಕಾಣಲು ಇಚ್ಚಿಸುತ್ತಾರೆಯೇ ಹೊರತು ಬಿಳಿಯೇತರರನ್ನಲ್ಲ ಎಂದು ರೇಡಿಯೋ ಜಾಕಿಯೊಬ್ಬ ವಾಗ್ದಾಳಿ ನಡೆಸಿದ್ದಾನೆ. ಇದನ್ನೂ ಓದಿ: ಕರ್ನಾಟಕದ ಅಳಿಯ ರಿಷಿ ಸುನಾಕ್ ಬ್ರಿಟನ್ ರಾಜ 3ನೇ ಚಾರ್ಲ್ಸ್‌ಗಿಂತಲೂ ಶ್ರೀಮಂತ