ನವದೆಹಲಿ: ದೇಶದಲ್ಲಿ ಗುಪ್ತಗಾಮಿನಿ ಕೊರೊನಾ ಮತ್ತೊಮ್ಮೆ ತನ್ನ ಆಟವನ್ನು ಆರಂಭಿಸಿದಂತಿದೆ. ದಿನೇ ದಿನೇ ಕೊರೋನಾ ಸೋಂಕು ಹೆಚ್ಚಳವಾಗುತ್ತಿದೆ. 84 ದಿನಗಳ ಬಳಿಕ ದೇಶದಲ್ಲಿ 4 ಸಾವಿರಕ್ಕೂ ಹೆಚ್ಚು ಸೋಂಕು ಕಾಣಿಸಿಕೊಂಡಿದೆ
ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಯಲ್ಲಿ 4,041 ಕೊರೊನಾ ಪ್ರಕರಣ ದಾಖಲಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 21,177ಕ್ಕೆ ಏರಿಕೆ ಕಂಡಿದೆ. 2,363 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದನ್ನೂ ಓದಿ: ವಿಷಕಾರಿ ಹಾವು ಕಚ್ಚಿ ನಾಲ್ಕು ವರ್ಷದ ಮಗು ಸಾವು
➡️ 4,041 New Cases reported in last 24 hours. pic.twitter.com/siZs3pjmzv
— Ministry of Health (@MoHFW_INDIA) June 3, 2022
ಕೊರೊನಾ ಉಲ್ಬಣದಿಂದ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಮಹಾರಾಷ್ಟ್ರ ಸರ್ಕಾರಗಳಿಗೆ ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಸೂಚಿಸಿದೆ.
ರಾಜ್ಯಗಳಲ್ಲಿ ಟೆಸ್ಟಿಂಗ್ ಹೆಚ್ಚಿಸಿ, ನಿಗದಿಪಡಿಸಿದ ಸ್ಯಾಂಪಲ್‍ಗ ಜಿನೋಮ್ ಸೀಕ್ವೆನ್ಸಿಂಗ್ ನಡೆಸಬೇಕು. ಐಎಲ್‍ಇ, ಸಾರಿ ಪ್ರಕರಣಗಳ ಮೇಲೆ ನಿಗಾ ಇಡುವಂತೆ ಸೂಚಿಸಿದೆ.
ಇಲ್ಲಿಯವರೆಗೆ ಭಾರತದಲ್ಲಿ ಕೊರೊನಾಗೆ 5,24,651 ಮಂದಿ ಸಾವನ್ನಪ್ಪಿದ್ದಾರೆ.