ಚಿಕ್ಕಮಗಳೂರು: ನವಜೀವನಕ್ಕೆ ಕಾಲಿಟ್ಟ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಮೂಲದ ದಂಪತಿ ಮದುವೆಯಾಗಿ ದೇವಸ್ಥಾನದಿಂದ ಸೀದಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಬಂದಿದ್ದಾರೆ.
ಎಸ್ಪಿ ಕಚೇರಿಗೆ ಬಂದ ನವಜೋಡಿ ನಮಗೆ ಹುಡುಗಿ ಮನೆಯವರಿಂದ ಜೀವ ಬೆದರಿಕೆ ಇದೆ ಎಂದು ರಕ್ಷಣೆ ಕೋರಿದ್ದಾರೆ. ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಕಬ್ಳಿ ಗ್ರಾಮದ ಯೋಗಾನಂದ್ ಹಾಗೂ ಜಿ.ಕೊಪ್ಪಲು ಗ್ರಾಮದ ಚಂದನ ಕಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುವಾಗಲೇ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಇಬ್ಬರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದನ್ನೂ ಓದಿ: ಕರ್ನಾಟಕದಲ್ಲೂ ಬಿಜೆಪಿಗೆ ಮತ್ತೆ ಅಧಿಕಾರ: ಅರುಣ್ ಸಿಂಗ್
Advertisement
Advertisement
ಪದವಿ ಮುಗಿದು ಯೋಗನಾಂದ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಚಂದನ ಸೆಕೆಂಡ್ ಇಯರ್ ಬಿಕಾಂ ಓದುತ್ತಿದ್ದಾಳೆ. ಇಬ್ಬರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಇವರ ಪ್ರೀತಿ ವಿಚಾರ ಚಂದನ ಮನೆಯವರಿಗೆ ತಿಳಿದು ಆಕೆಯನ್ನು ಗೌಪ್ಯ ಸ್ಥಳದಲ್ಲಿ ಇಟ್ಟಿದ್ದನು. ಆಕೆಗೆ ಬೇರೆ ಹುಡುಗನನ್ನ ನೋಡಿ ಮದುವೆಗೆ ಎಲ್ಲಾ ಸಿದ್ಧತೆ ನಡೆಸಿದ್ದರು. ಆಗ ಪ್ರೇಮಿ ಯೋಗಾನಂದ್ ಚಂದನಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾನೆ. ಆದರೆ, ಆಕೆ ಎಲ್ಲೂ ಸಿಕ್ಕಿಲ್ಲ. ಕೊನೆಗೂ ಹೇಗೋ ಆಕೆ ಇರುವ ಜಾಗವನ್ನು ಪತ್ತೆ ಹಚ್ಚಿದ ಪ್ರೇಮಿ ಆಕೆಯನ್ನ ಕರೆದುಕೊಂಡು ಬಂದು ಸ್ನೇಹಿತರ ಸಮ್ಮುಖದಲ್ಲಿ ತರಾತುರಿಯಲ್ಲಿ ಮದುವೆಯಾಗಿದ್ದಾನೆ.
Advertisement
Advertisement
ಇಬ್ಬರು ಈಗ ರಕ್ಷಣೆ ಕೋರುವಂತೆ ಎಸ್ಪಿಗೆ ಮನವಿ ಮಾಡಿದ್ದಾರೆ. ಓಡಿ ಹೋಗಿ ಮದುವೆಯಾದ ಇಬ್ಬರಿಗಾಗಿ ಹುಡುಗಿ ಮನೆಯವರು ತೀವ್ರ ಹುಡುಕಾಟ ನಡೆಸಿದ್ದಾರೆ. ಆದರೆ, ಅವರು ಸಿಕ್ಕಿಲ್ಲ. ಎಸ್ಪಿ ಕಚೇರಿಗೆ ಬಂದು ಮನವಿ ಸಲ್ಲಿಸಿರುವ ನವದಂಪತಿ, ನಮಗೆ ಓಡಿ ಹೋಗಿ ಮದುವೆಯಾಗಬೇಕೆಂಬ ಬಯಕೆ ಇರಲಿಲ್ಲ. ಆದರೆ, ನಮ್ಮ ಮನೆಯರು ಒಪ್ಪಲಿಲ್ಲ. ಕೊಲೆ ಬೆದರಿಕೆ ಹಾಕಿದರು. ಅದಕ್ಕೆ ಓಡಿ ಹೋಗಿ ಮದುವೆಯಾಗಿದ್ದೇವೆ. ಈಗ ನಮಗೆ ನಮ್ಮ ಮನೆಯವರು ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಹಾಗಾಗಿ, ನಮಗೆ ರಕ್ಷಣೆ ಕೊಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗಂಡಸ್ತನ ಎಂದು ವಿವಾದ ಹುಟ್ಟಿಹಾಕುವುದು ಗಂಡಸ್ತನ ಅಲ್ಲ: ರೇಣುಕಾಚಾರ್ಯ
ನಮಗೆ ಏನಾದರೂ ಆದರೆ ನಮ್ಮ ಮಾವಂದಿರೇ ಕಾರಣ ಎಂದು ಚಂದನಾ ಹೇಳಿದ್ದಾಳೆ. ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ನವಜೋಡಿ ಎಸ್ಪಿಗೆ ಮನವಿ ಮಾಡಿದ್ದಾರೆ. ಮಗಳ ಮದುವೆ ಬಗ್ಗೆ ಹೆತ್ತವರು ನೂರಾರು ಕನಸು ಕಟ್ಟಿಕೊಂಡಿರುತ್ತಾರೆ ನಿಜ. ಆದರೆ, ನಾವು ಇಂತವರ ಜೊತೆ ಇದ್ದರೆ ಚೆನ್ನಾಗಿರುತ್ತೇವೆ ಅನ್ನುವುದಾದರೆ ಇರಲಿ ಅನ್ನೋದು ಯೋಗಾನಂದ್ ಸ್ನೇಹಿತರ ಮಾತು.