ಇಂಫಾಲ: ಜನಾಂಗೀಯ ಸಂಘರ್ಷಕ್ಕೆ ಬೆಂದು ಹೋಗಿರುವ ಮಣಿಪುರದಲ್ಲಿ (Manipur) ಮತ್ತೊಮ್ಮೆ ಗುಂಡಿನ ಸದ್ದು ಕೇಳಿ ಬಂದಿದೆ. ಮಣಿಪುರದ ಬಿಷ್ಣುಪುರ್ (Bishnupur) ಜಿಲ್ಲೆಯ ಮೊಯಿರಾಂಗ್‌ನಲ್ಲಿ ಎರಡು ಸಮುದಾಯಗಳ ನಡುವೆ ಮತ್ತೆ ಗುಂಡಿನ ಚಕಮಕಿ ನಡೆದಿದೆ. ಗ್ರಾಮಸ್ಥರ ಪ್ರಕಾರ ಬುಧವಾರ ರಾತ್ರಿಯಿಂದ ಗುಂಡಿನ ಸದ್ದು ಕೇಳಿ ಬರುತ್ತಿದೆ.
ಹಿಂಸಾಚಾರದ ಸಂದರ್ಭದಲ್ಲಿ ಹಲವಾರು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಲಾಗಿದೆ. ಗುಂಡಿನ ಚಕಮಕಿ ನಡೆದ ಸ್ಥಳದ ಸಮೀಪದಲ್ಲಿ ವಾಸಿಸುತ್ತಿದ್ದ ಅನೇಕ ಗ್ರಾಮಸ್ಥರು ಬೇರೆಡೆ ಆಶ್ರಯ ಪಡೆಯುತ್ತಿದ್ದಾರೆ. ನಿರಂತರ ಗುಂಡಿನ ಕಾಳಗದಿಂದ ಗ್ರಾಮಸ್ಥರೆಲ್ಲ ಭಯಗೊಂಡಿದ್ದಾರೆ ಎಂದು ಮತ್ತೊಬ್ಬರು ಸ್ಥಳೀಯರು ಹೇಳಿದ್ದಾರೆ.
Advertisement
Advertisement
ಇದಕ್ಕೂ ಮುನ್ನ ಬುಧವಾರ ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಸಿಬ್ಬಂದಿಯನ್ನು ಸಾಗಿಸಲು ಭದ್ರತಾ ಪಡೆಗಳು ಬಳಸುತ್ತಿದ್ದ ಎರಡು ಬಸ್‌ಗಳಿಗೆ ಗುಂಪೊಂದು ಬೆಂಕಿ ಹಚ್ಚಿದೆ. ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಂಗಳವಾರ ಸಂಜೆ ದಿಮಾಪುರದಿಂದ ಬಸ್‌ಗಳು ಬರುತ್ತಿದ್ದಾಗ ಸಪೋರ್ಮಿನಾದಲ್ಲಿ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ಸಾಲ ವಾಪಸ್ ಕೊಟ್ಟಿಲ್ಲ ಅಂತ ಪತಿಯೆದುರೇ ಮಹಿಳೆಯ ಅತ್ಯಾಚಾರ
Advertisement
Advertisement
ಸುಮಾರು 3 ತಿಂಗಳ ಹಿಂದೆ ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತು. ಅಂದಿನಿಂದ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮಣಿಪುರ ಸಂಘರ್ಷ ಎಫೆಕ್ಟ್ – ಮೈತೇಯ್ ಸಮುದಾಯದ ಪತಿಯಿಂದ ಬೇರೆಯಾದ ಕುಕಿ ಮಹಿಳೆ
Web Stories