ಚೆನ್ನೈ: ದೇಶೀಯ ನಿರ್ಮಿತ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್‌ನ (Vande Bharat Express Train) 28ನೇ ರೈಲು ಕೇಸರಿ ಬಣ್ಣದ್ದಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಹೊಸ ಬಣ್ಣದೊಂದಿಗೆ ಕಂಗೊಳಿಸುತ್ತಿರೋ ರೈಲಿನ ಫೋಟೋವನ್ನು ಕೇಂದ್ರ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಒಟ್ಟು 25 ರೈಲುಗಳು ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 2 ರೇಕ್‌ಗಳನ್ನು ಸದ್ಯ ಕಾಯ್ದಿರಿಸಲಾಗಿದೆ. ಇದೀಗ 28ನೇ ರೈಲಿನ ಬಣ್ಣವನ್ನು ಪ್ರಾಯೊಗಿಕವಾಗಿ ಬದಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಹೊಸ ಬಣ್ಣದ ವಂದೇ ಭಾರತ್ ರೈಲು ಪ್ರಸ್ತುತ ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿದೆ. ವಂದೇ ಭಾರತ್ ರೈಲುಗಳನ್ನು ತಯಾರಿಸುವ ಕೇಂದ್ರ ಇದಾಗಿದೆ. ಅಶ್ವಿನಿ ವೈಷ್ಣವ್ ಶನಿವಾರ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ ಭೇಟಿ ನೀಡಿ, ಸುರಕ್ಷತಾ ಕ್ರಮ, ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿನ ಸುಧಾರಣೆಗಳನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಹಂಪಿಯಲ್ಲಿ ಇಂದಿನಿಂದ ಜಿ-20 ಶೃಂಗಸಭೆ
Inspected Vande Bharat train production at ICF, Chennai. pic.twitter.com/9RXmL5q9zR
— Ashwini Vaishnaw (@AshwiniVaishnaw) July 8, 2023
ಪರಿಶೀಲನೆ ಬಳಿಕ ಅಶ್ವಿನಿ ವೈಷ್ಣವ್, ವಂದೇ ಭಾರತ್ 28ನೇ ರೇಕ್‌ನ ಹೊಸ ಬಣ್ಣ ಭಾರತೀಯ ತ್ರಿವರ್ಣ ಧ್ವಜದಿಂದ ಪ್ರೇರಿತವಾಗಿದೆ ಮಾತ್ರವಲ್ಲದೇ ವಂದೇ ಭಾರತ್ ರೈಲುಗಳಲ್ಲಿ 25 ಸುಧಾರಣೆಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದು ಮೇಕ್ ಇನ್ ಇಂಡಿಯಾದ ಪರಿಕಲ್ಪನೆಯಾಗಿದೆ, ಎಂದರೆ ನಮ್ಮದೇ ಎಂಜಿನಿಯರ್‌ಗಳು ಇದನ್ನು ಭಾರತದಲ್ಲಿ ವಿನ್ಯಾಸಗೊಳಿಸಿದ್ದಾರೆ. ರೈಲುಗಳ ಕಾರ್ಯಾಚರಣೆಯ ಸಮಯದಲ್ಲಿ ಎಸಿ, ಶೌಚಾಲಯ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಕ್ಷೇತ್ರ ಘಟಕಗಳಿಂದ ನಾವು ಪ್ರತಿಕ್ರಿಯೆಯನ್ನು ಸ್ವೀಕರಿಸುತ್ತಿದ್ದೇವೆ. ಆ ಎಲ್ಲಾ ಸುಧಾರಣೆಗಳನ್ನು ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಲು ಬಳಸಲಾಗುತ್ತಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಇದನ್ನೂ ಓದಿ: ಗುಡ್‌ನ್ಯೂಸ್ – 24 ಗಂಟೆಗಳಲ್ಲಿ KRSನಲ್ಲಿ 2.50 ಅಡಿ ನೀರು ಭರ್ತಿ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]