ಬೆಂಗಳೂರು: ಜಾತಿಗಣತಿ ಮಾಡಿ 10 ವರ್ಷ ಆಗಿರುವ ಕಾರಣ ಮರುಗಣತಿಗೆ ಸರ್ಕಾರ ನಿರ್ಧಾರ ಮಾಡಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ತಿಳಿಸಿದರು.ಇದನ್ನೂ ಓದಿ: ಜೀವಂತ ತಾಯಿಯ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ, ಜಮೀನು ಕಬಳಿಕೆ ಹುನ್ನಾರ – ಮಗನ ಬಂಧನ
ಹೊಸ ಜಾತಿಗಣತಿ (Caste Census) ಘೋಷಣೆ ಮಾಡಿರುವ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಹೊಸ ಜಾತಿಗಣತಿ ಬಗ್ಗೆ ಸಿಎಂ (CM Siddaramaiah) ಈಗಾಗಲೇ ಘೋಷಣೆ ಮಾಡಿದ್ದಾರೆ. ಜಾತಿಗಣತಿ ಮಾಡಿ 10 ವರ್ಷ ಆಗಿತ್ತು. ಹಿಂದುಳಿದ ವರ್ಗಗಳ ಆಯೋಗದ ನಿಯಮದಲ್ಲಿ ಪ್ರತಿ 10 ವರ್ಷಕೊಮ್ಮೆ ಗಣತಿ ಮಾಡಬೇಕು ಅಂತಿದೆ. ಹೀಗಾಗಿ ಹೊಸ ಸರ್ವೇಗೆ ನಿರ್ಧಾರ ಮಾಡಲಾಗಿದೆ ಎಂದರು.
ಕೇಂದ್ರ ಸರ್ಕಾರ (Central Govt) ಜಾತಿಗಣತಿ ಮಾಡಿದೆ, ಸರ್ಕಾರ ಯಾಕೆ ಜಾತಿಗಣತಿ ಮಾಡುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರ ಕೇವಲ ಜಾತಿಗಣತಿಯನ್ನು ಮಾತ್ರ ಮಾಡುತ್ತದೆ. ಅವರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಮಾಡುವುದಿಲ್ಲ. ನಾವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.ಇದನ್ನೂ ಓದಿ: 8 ಸೆಕೆಂಡ್ ನಂತ್ರ ವಿಮಾನ ಹಾರಾಟದಲ್ಲಿ ಅಸಹಜತೆ ಪತ್ತೆ; 7-12 ಸೆಕೆಂಡ್ ವರೆಗಿನ ಹಾರಾಟದ ಮೇಲೆ ತನಿಖೆ