ಮಂಡ್ಯ: ಆಗ ತಾನೇ ಜನಿಸಿದ ಹಸುಗೂಸನ್ನು ಕ್ರೂರಿ ತಾಯಿಯೊಬ್ಬಳು ಪಾಳು ಬಾವಿಗೆ ಎಸೆದು ಹೋಗಿರುವ ಮನಕಲಕುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಅಡಿ ಆಳ ಇರುವ ಪಾಳು ಬಾವಿಗೆ ಗಂಡು ಮಗವನ್ನು ಹೆತ್ತ ತಾಯಿಯೇ ಎಸೆದಿದ್ದಾಳೆ. ಈ ಮಧ್ಯೆ ತೋಟಕ್ಕೆ ಹೋಗುತ್ತಿದ್ದ ರೈತ ಮಹಿಳೆಯೊಬ್ಬರು ಬಾವಿಯಲ್ಲಿ ಮಗು ಅಳುತ್ತಿರುವ ಶಬ್ಧ ಕೇಳಿ ಇಣುಕಿ ನೋಡಿದಾಗ ಮಗು ಇರುವುದನ್ನು ನೋಡಿದ್ದಾರೆ. ನಂತರ ಕೂಡಲೇ ಈ ವಿಚಾರವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: 70 ವರ್ಷಗಳ ನಂತರ ಭಾರತಕ್ಕೆ ಮರಳಿದ ಚೀತಾ – ನಮೀಬಿಯಾದ 8 ಚೀತಾಗಳನ್ನು ಬಿಡುಗಡೆ ಮಾಡಿದ ಮೋದಿ
ಬಳಿಕ ಬಾವಿಯ ಹತ್ತಿರ ಬಂದ ಊರಿನ ಜನರು ಮಗು ಹಾವಿನ ಪಕ್ಕ ಮಲಗಿದ್ದರೂ ಮೃತ್ಯುವನ್ನು ಗೆದ್ದಿರುವುದನ್ನು ಕಂಡು ಬೆಚ್ಚಿಬೆರಗಾಗಿದ್ದಾರೆ. ನಂತರ ಬಾವಿಗೆ ಇಳಿದು ಮಗುವಿನ ರಕ್ಷಣೆ ಮಾಡಿದ್ದಾರೆ. ಇದೇ ವೇಳೆ ಗ್ರಾಮದ ಮಹಿಳೆಯೊಬ್ಬರು ಎದೆ ಹಾಲುಣಿಸಿ ಮಾನವೀಯತೆ ಮೆರೆದರೆ, ಇತರ ಮಹಿಳೆಯರು ಮಗುವಿಗೆ ಆರೈಕೆ ಮಾಡಿದ್ದಾರೆ. ಕೊನೆಗೆ ಈ ಬಗ್ಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಮಾಹಿತಿ ನೀಡಿದ್ದು ನಂತರ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿದೆ. ಇದನ್ನೂ ಓದಿ: ಕ್ಯಾಂಟರ್ ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ – ಗಾಯಗೊಂಡ ಗರ್ಭಿಣಿ ಸ್ಥಿತಿ ಗಂಭೀರ