ಬೆಂಗಳೂರು: ಮಂಕಿಪಾಕ್ಸ್, ಟೊಮೆಟೊ ಜ್ವರದ ಆತಂಕದ ಮಧ್ಯೆ ಬೆಂಗಳೂರಿನಲ್ಲಿ ಕೋವಿಡ್ ಕೇಸ್ ಏರಿಕೆಯಾಗಿದೆ.
3 ತಿಂಗಳ ಬಳಿಕ ಬೆಂಗಳೂರಿನಲ್ಲಿ 200 ಕ್ಕೂ ಹೆಚ್ಚು ಕೇಸ್ ದಾಖಲಾಗಿದೆ. ಭಾನುವಾರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ ರಾಜ್ಯದಲ್ಲಿ 242 ಮಂದಿಗೆ ಸೋಂಕು ಬಂದಿತ್ತು. ಈ ಪೈಕಿ ಬೆಂಗಳೂರಿನಲ್ಲಿ 232 ಮಂದಿಗೆ ಸೋಂಕು ಬಂದಿದೆ. ಇದನ್ನೂ ಓದಿ: ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಗೆ ಇಂದು ಚಾಲನೆ: ಮಕ್ಕಳಿಗೆ ಏನು ಸಿಗುತ್ತೆ?
Advertisement
Advertisement
ಮಾರ್ಚ್ 3 ರಂದು ಬೆಂಗಳೂರಿನಲ್ಲಿ 239 ಕೇಸ್ ದಾಖಲಾಗಿತ್ತು. 3 ತಿಂಗಳ ಬಳಿಕ ಮತ್ತೆ ನಗರದಲ್ಲಿ ಪ್ರಕರಣ ಹೆಚ್ಚಳವಾಗಿದೆ.
Advertisement
ಬೆಂಗಳೂರಿನಲ್ಲಿ ಇಲ್ಲಿಯವರೆಗೆ 17,87,380 ಮಂದಿಗೆ ಕೊರೊನಾ ಬಂದಿದೆ. ಈ ಪೈಕಿ 17,68,473 ಮಂದಿ ಗುಣಮುಖರಾಗಿದ್ದು, ಸದ್ಯ 1,943 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಕೊರೊನಾಗೆ 16,963 ಮಂದಿ ಮೃತಪಟ್ಟಿದ್ದಾರೆ.