ನವದೆಹಲಿ: ಭಾರತದ (India) ನೂತನ ಅಟಾರ್ನಿ ಜನರಲ್ (Attorney General) ಆಗಿ ಹಿರಿಯ ವಕೀಲ ಆರ್. ವೆಂಕಟರಮಣಿ (R Venkataramani) ನೇಮಕಗೊಂಡಿದ್ದಾರೆ.
ಕೆ.ಕೆ. ವೇಣುಗೋಪಾಲ್ ( KK Venugopal) ಸ್ಥಾನಕ್ಕೆ ವೆಂಕಟರಮಣಿ ಅವರು ನೇಮಕಗೊಂಡಿದ್ದಾರೆ. ಮೂರು ವರ್ಷಗಳ ಅವಧಿಗೆ ಇವರನ್ನು ನೇಮಿಸಲಾಗಿದೆ. ಈ ಬಗ್ಗೆ ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವ ಕಿರಣ್ ರಿಜಿಜು ಅವರ ಕಚೇರಿಯು ಟ್ವೀಟ್ ಮಾಡಿ ತಿಳಿಸಿದೆ.
Advertisement
Advertisement
ಟ್ವೀಟ್‍ನಲ್ಲಿ ಏನಿದೆ?: ಹಿರಿಯ ವಕೀಲರಾದ ಆರ್. ವೆಂಕಟರಮಣಿ ಅವರನ್ನು ಭಾರತದ ಅಟರ್ನಿ ಜನರಲ್ ಆಗಿ ರಾಷ್ಟ್ರಪತಿಗಳು ನೇಮಿಸಿದ್ದಾರೆ. ಈ ಆದೇಶವು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ರಾಂಚಿಯಲ್ಲಿ ಹನುಮಾನ್ ವಿಗ್ರಹ ಧ್ವಂಸ- ಪರಿಸ್ಥಿತಿ ಉದ್ವಿಗ್ನ
Advertisement
माननीय राष्ट्रपति, श्री आर. वेंकटरमणी, वरिष्ठ अधिवक्ता को दिनांक 1 अक्टूबर, 2022 से भारत के महान्यायवादी के पद पर नियुक्त करती हैं।
Honorable President is pleased to appoint Shri R. Venkataramani, Senior Advocate as Attorney General for India w.e.f. 1st October 2022. pic.twitter.com/MnChp8TRGv
— Office of Kiren Rijiju (@RijijuOffice) September 28, 2022
Advertisement
ಹಾಲಿ ಎಜಿ ಕೆಕೆ ವೇಣುಗೋಪಾಲ್ ಅವರ ಅವಧಿಯು ಸೆ. 30ರಂದು ಕೊನೆಗೊಳ್ಳಲಿದೆ. ವೇಣುಗೋಪಾಲ್ ಅವರ ವಯಸ್ಸಿನ ಕಾರಣದಿಂದಾಗಿ ಅವರ ಅವಧಿಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಅನಿಲ್ ಚೌಹಾಣ್ ನೇಮಕ