ಮೈಸೂರು: ಚಾಮರಾಜೇಂದ್ರ ಮೃಗಾಲಯಕ್ಕೆ ನೂತನ ಅತಿಥಿಗಳ ಆಗಮನವಾಗಿದೆ. 10 ಹೊಸ ಪ್ರಾಣಿಗಳು ಇದೀಗ ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. ಹೊಸ ಪ್ರಾಣಿಗಳ ಆಗಮನದಿಂದ ಮೃಗಾಲಯದಲ್ಲಿ ಸಂತಸ ಮನೆ ಮಾಡಿದೆ.
Advertisement
ಕಡವೆ, ಕೋತಿ, ಹೆಬ್ಬಾವು ಮೈಸೂರು ಮೃಗಾಲಯಕ್ಕೆ ನೂತನವಾಗಿ ಆಗಮಿಸಿರುವ ಹೊಸ ಅತಿಥಿಗಳಾಗಿದ್ದು ಪ್ರವಾಸಿಗರ ವೀಕ್ಷಣೆ ಲಭ್ಯವಾಗಿವೆ. ಚೆನ್ನೈನ ಅರಿಗ್ನಾರ್ ಅಣ್ಣ ಮೃಗಾಲಯದಿಂದ 2 ಹೆಣ್ಣು ಕಡವೆ, 4 ಜೊತೆ ರೀಸಸ್ ಮಕ್ಕಾ ಕೋತಿಗಳು, ಒಂದು ರೇಟಿಕ್ಯೂಲೇಟೆಡ್ ಪೈತಾನ್ ಜಾತಿಯ ಹೆಬ್ಬಾವು ಆಗಮಿಸಿವೆ. ಇವುಗಳ ಬದಲಿಗೆ 3 ನೀಲ್‍ಗಾಯ್, 2 ಹೆಣ್ಣು ಸಿಲ್ವರ್ ಪೆಸೆಂಟ್, 1 ಕಾಮನ್ ರಿಂಗ್ ನೆಕ್ಡ್ ಪೆಸೆಂಟ್ ಪ್ರಾಣಿಗಳನ್ನ ಮೈಸೂರಿನಿಂದ ಚೆನ್ನೈಗೆ ರವಾನೆ ಮಾಡಲಾಗಿದೆ.
Advertisement
Advertisement
ಸದ್ಯ ಆಗಮಿಸಿರುವ ಪ್ರಾಣಿಗಳಿಂದ ಸಂತಾನ್ಪೋತ್ತಿ ಹೆಚ್ಚು ಮಾಡುವ ಉದ್ದೇಶವನ್ನು ಮೃಗಾಲಯದ ಸಿಬ್ಬಂದಿ ಹೊಂದಿದ್ದು, ಬ್ರೀಡ್ ಎಕ್ಸ್‍ಚೇಂಜ್ ಹೆಸರಿನಲ್ಲಿ, ಪ್ರಾಣಿಗಳ ರಕ್ತ ಬದಲಾವಣೆಯ ಪ್ರಕ್ರಿಯೆಗೆ ಈ ಪ್ರಾಣಿಗಳನ್ನ ಬಳಸಿಕೊಳ್ಳಲಾಗುತ್ತೆ. ಇದೀಗ ಹೊಸ ಪ್ರಾಣಿಗಳನ್ನ ನೋಡಿದ ಪ್ರವಾಸಿಗರು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
Advertisement
ಇಂದು ಗುಜರಾತ್ ನಿಂದ ಶೌರ್ಯ ಎಂಬ ಹೆಸರಿನ ಸಿಂಹ ಕೂಡ ಮೈಸೂರು ಮೃಗಾಲಯ ಸೇರಲಿದೆ.