ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನ ತಮ್ಮ 13ನೇ ಬಾರಿಯ ಬಜೆಟ್ ಮಂಡನೆಯಲ್ಲಿ ಇಂಧನ ಇಲಾಖೆಗೆ 14,136 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಾರೆ.
ಹೊಸ ಯೋಜನೆಗಳೇನು?
ಪ್ರತಿ ಸದಸ್ಯ ಹೊರೆ 10 ಹೆಚ್‍ಪಿ ಮತ್ತು ಕಡಿಮೆ ಸಾಮಥ್ರ್ಯ ಹೊಂದಿದ ಸಹಕಾರ ಸಂಘಗಳ ಖಾಸಗಿ ಹೆಚ್‍ಟಿ ಮತ್ತು ಎಲ್‍ಟಿ ಸಮೂಹ ಏತನೀರಾವರಿ ಸ್ಥಾವರಗಳಿಗೆ 2018-19ನೇ ಸಾಲಿನಿಂದ ವಿದ್ಯುತ್ ಪೂರೈಕೆಯ ಮಿತಿ ಮತ್ತು ನಿಬಂಧನೆಗಳಿಗೆ ಒಳಪಟ್ಟು ಪ್ರತಿ ದಿನ 7 ಗಂಟೆಗಳ ವಿದ್ಯುತ್ ಬಳಕೆ ವೆಚ್ಚವನ್ನು ಬಳಕೆದಾರರಿಗೆ ಹಿಂಪಾವತಿ ಮಾಡಲಾಗುವುದು.
Advertisement
Advertisement
ಪ್ರಸರಣಾ ಜಾಲವನ್ನು ಬಲವರ್ಧನೆಗೊಳಿಸಲು 2018-19ನೇ ಸಾಲಿನಲ್ಲಿ ಯಾದಗಿರಿ ತಾಲ್ಲೂಕಿನ ರಾಮಸಮುದ್ರ, ರಾಯಚೂರಿನ ಯಾಪಲದಿನ್ನಿ, ಗಂಗಾವತಿಯ ಯರಡೋನ ಹಾಗೂ ಬೆನ್ನೂರು, ಕುಷ್ಟಗಿಯ ತಾವರಗೆರ, ಹಗರಿಬೊಮ್ಮನಹಳ್ಳಿಯ ಬಾಚಿಗೊಂಡನಹಳ್ಳಿ, ಮುದ್ದೇಬಿಹಾಳದ ತಾಳಿಕೋಟಿ, ಇಂಡಿಯ ರೋಡಗಿ (ಕೇಡಗಿ ಕ್ರಾಸ್), ಬಾದಾಮಿಯ ಹೆಬ್ಬಳ್ಳಿ, ಧಾರವಾಡದ ಗರಗ (ಶೇಡಬಾಲ್), ರೋಣದ ಬೆಳವಣಕಿ, ಮಂಗಳೂರಿನ ಮುಲ್ಕಿ, ಪುತ್ತೂರಿನ ಮಾಡಾವು, ಚನ್ನಗಿರಿ (ನಲ್ಲೂರು/ಬೆಂಕಿಕೆರೆ), ಚಳ್ಳಕೆರೆಯ ವಿಶ್ವೇಶ್ವರಪುರ, ಮಧುಗಿರಿಯ ತೆರಿಯೂರು, ಕುಣಿಗಲ್‍ನ ತಿಪ್ಪೂರು, ಬಂಗಾರಪೇಟೆಯ ಟಿ.ಗೊಲ್ಲಹಳ್ಳಿ (ತಿಮ್ಮಸಂದ್ರ), ಆನೇಕಲ್‍ನ ಸಮಂದೂರು, ಬೆಂಗಳೂರು ದಕ್ಷಿಣ ತಾಲೂಕಿನ ಕೋರಮಂಗಲ, ಬೆಂಗಳೂರು ಪೂರ್ವ ತಾಲೂಕಿನ ದೂರವಾಣಿನಗರ, ಹೊಸಕೋಟೆಯ ಮಂಡೂರು, ಚನ್ನಪಟ್ಟಣದ ಬಿ.ವಿ.ಹಳ್ಳಿ, ಅರಕಲಗೂಡಿನ ರುದ್ರಪಟ್ಟಣ, ಕೆ.ಆರ್.ಪೇಟೆಯ ಗಂಗೇನಹಳ್ಳಿ (ಹರಿಯಲದಮ್ಮ ಟೆಂಪಲ್), ಮಂಡ್ಯದ ತುಂಬೆಕೆರೆ, ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಮತ್ತು ಕಿತ್ತೂರು, ಟಿ.ನರಸೀಪುರ ತಾಲೂಕಿನ ಮಡವಾಡಿ (ಪರಿನಾಮಿಪುರ) ಹಾಗೂ ಮಲಿಯೂರು, ನಂಜನಗೂಡು ತಾಲೂಕಿನ ಹೆಮ್ಮರಗಾಲ ಹಾಗೂ ಚಂದ್ರವಾಡಿ (ನಲ್ಲಿನಾಥಪುರ), ಗುಂಡ್ಲುಪೇಟೆಯ ಬಾರಗಿ, ಕೊಳ್ಳೆಗಾಲದ ಕೊತ್ತನೂರು ಹಾಗೂ ಚಾಮರಾಜನಗರದ ಬಡನಕುಪ್ಪೆ (ಕೆಐಎಡಿಬಿ ಕೈಗಾರಿಕಾ ವಲಯ)ಗಳಲ್ಲಿ 35 ವಿದ್ಯುತ್ ಉಪಕೇಂದ್ರಗಳನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಮೂಲಕ ಸ್ಥಾಪನೆ.