ಅಯೋಧ್ಯೆ: ರಾಮಮಂದಿರ (Ayodhya Ram Mandir) ನಿರ್ಮಾಣದ ಮೂಲಕ ಕೋಟ್ಯಾನುಕೊಟಿ ರಾಮನ ಭಕ್ತರ ಸ್ವಾಗತಕ್ಕೆ ಸಜ್ಜಾಗಿರುವ ರಾಮನೂರು ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ (ಡಿ.30) ಭೇಟಿ ನೀಡುತ್ತಿದ್ದಾರೆ.
ಜನವರಿ 22ಕ್ಕೆ ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಯಾಗುತ್ತಿದೆ. ಆದ್ರೆ ಅದಕ್ಕೂ ಮುನ್ನ ನಡೆಯಲಿರುವ ಈ ಭೇಟಿ ವೇಳೆ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಹೊಸ ವಿಮಾನ ನಿಲ್ದಾಣ, ಅಭಿವೃದ್ಧಿಗೊಂಡಿರುವ ರೈಲು ನಿಲ್ದಾಣವನ್ನೂ (Revamped Railway Station) ಮೋದಿ ಉದ್ಘಾಟಿಸಲಿದ್ದಾರೆ.
Advertisement
Advertisement
ಜೊತೆಗೆ 11 ಸಾವಿರ ಕೋಟಿ ರೂ. ಮೌಲ್ಯದ ಅಯೋಧ್ಯೆ ಅಭಿವೃದ್ಧಿ ಕಾಮಗಾರಿ ಹಾಗೂ ಉತ್ತರ ಪ್ರದೇಶದ 4,600 ಕೋಟಿ ರೂ.ಗಳಷ್ಟು ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ. ಇದರಲ್ಲಿ, ರಸ್ತೆ, ಹೆದ್ದಾರಿ, ವಿಮಾನ, ರೈಲ್ವೇ ಸೇರಿದಂತೆ ಮೂಲಭೂತ ಸೌಕರ್ಯಗಳ ಯೋಜನೆಗಳು ಒಳಗೊಂಡಿವೆ. ಹೀಗಾಗಿ ಪ್ರಧಾನಿ ಮೋದಿ ಸ್ವಾಗತಕ್ಕೆ ಶ್ರೀರಾಮಜನ್ಮಭೂಮಿ ಸಜ್ಜಾಗಿದೆ. ವಿಶೇಷವೆಂದರೆ ಇದೇ ದಿನ 6 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹಾಗೂ 2 ಅಮೃತ್ ಭಾರತ್ ರೈಲುಗಳಿಗೂ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ.
Advertisement
Advertisement
ಮೋದಿ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ:
ಮೋದಿ ಅಯೋಧ್ಯೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ 3 ದಿನಗಳಿಂದ ಭದ್ರತಾ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದ್ದಾರೆ. ಅಯೋಧ್ಯೆ ಸಂಪೂರ್ಣ ಪೊಲೀಸ್ ಭದ್ರಕೋಟೆಯಾಗಿದೆ. ಡ್ರೋನ್‌ಗಳ ಮೂಲಕವೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಟ್ರಾಫಿಕ್ ನಿಯಂತ್ರಣಕ್ಕೆ ಪ್ರತ್ಯೇಕ ತಂಡ ರಚಿಸಲಾಗಿದೆ. ಈಗಾಗಲೇ ರಾಮನಗರಿಯಲ್ಲಿ ಮೋದಿ ಸ್ವಾಗತಕ್ಕಾಗಿ ತಳಿರು ತೋರಣ, ಹೂವಿನ ಅಲಂಕಾರ, ವರ್ಣರಂಜಿತ ವಿದ್ಯುತ್ ದೀಪಾಲಂಕಾರದಿಂದ ಮಿರಮಿರ ಮಿಂಚುತ್ತಿದೆ.
ಅಯೋಧ್ಯೆಯಲ್ಲಿಂದು ಮೋದಿ ಕಾರ್ಯಕ್ರಮಗಳು ಹೇಗಿವೆ?
* ಬೆಳಗ್ಗೆ 10:45ಕ್ಕೆ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮನ
* ಬೆಳಗ್ಗೆ 11:15ಕ್ಕೆ ರೈಲ್ವೆ ನಿಲ್ದಾಣ ಉದ್ಘಾಟನೆ
* 2 ಹೊಸ ಅಮೃತ್ ಭಾರತ್ & 6 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ
* 2183 ಕೋಟಿ ರೂ. ಗ್ರೀನ್‌ಫೀಲ್ಡ್ ಟೌನ್‌ಶಿಪ್‌ಗೆ ಅಡಿಗಲ್ಲು
* 300 ಕೋಟಿ ರೂ. ವಷಿಷ್ಠ ಕುಂಜ್ ವಸತಿ ಯೋಜನೆ
* ನವೀಕರಣಗೊಂಡಿರುವ ನಯಾಘಾಟ್‌ನಿಂದ ಲಕ್ಷ್ಮಣ ಘಾಟ್ ಉದ್ಘಾಟನೆ
( ದೀಪೋತ್ಸವ ಸ್ಥಳ, ಪ್ರವಾಸಿಗರಪಥವಾದ ರಾಮ್ ಕಿ ಪೌಡಿನಿಂದ ರಾಜ್‌ಘಾಟ್, ರಾಜ್‌ಘಾಟ್‌ನಿಂದ ರಾಮ ಮಂದಿರ ರಸ್ತೆ)
* ಅಯೋಧ್ಯೆ ನಗರದಲ್ಲಿ 4 ಹೊಸ ರಸ್ತೆಗಳ ಉದ್ಘಾಟನೆ
* ರಾಮಪಥ, ಭಕ್ತಿಪಥ, ಧರ್ಮಪಥ, ಶ್ರೀರಾಮ ಜನ್ಮಭೂಮಿ ಪಥ (ಜೊತೆಗೆ ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ ಲಖನೌ-ಅಯೋಧ್ಯ ಹೈವೇ, ಅಯೋಧ್ಯ ಬೈಪಾಸ್, ವಾರಣಾಸಿ ಬೈಪಾಸ್, ಖುತಾರ್-ಲಖೀಂಪುರ ಹೈವೇ ಸೇರಿವೆ )
* ಮಧ್ಯಾಹ್ನ 12:15ಕ್ಕೆ ಅಯೋಧ್ಯೆ ವಿಮಾನ ನಿಲ್ದಾಣ ಉದ್ಘಾಟನೆ
* ಮಧ್ಯಾಹ್ನ 1 ಗಂಟೆ ಬಳಿಕ ಮೋದಿ ಮೆಗಾ ರೋಡ್ ಶೋ
* ಏರ್‌ಪೋರ್ಟ್‌ನಿಂದ ಅಯೋಧ್ಯೆ ನಗರದಲ್ಲಿ 15 ಕಿ.ಮೀ. ರೋಡ್ ಶೋ