ಧೋನಿ ಸ್ಟಂಪ್ಸ್ ಹಿಂದಿದ್ರೆ ಕ್ರೀಸ್ ಬಿಡ್ಬೇಡಿ – ಐಸಿಸಿ ಸಲಹೆ

Public TV
1 Min Read
dhoni 1

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಕಿವೀಸ್ ಬ್ಯಾಟ್ಸ್ ಮನ್ ನೀಶಮ್ ರನ್ನು ಧೋನಿ ರನೌಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಇದೇ ವೇಳೆ ಧೋನಿ ಸ್ಟಂಪ್ಸ್ ಹಿಂದಿದ್ರೆ ಕ್ರೀಸ್ ಬಿಟ್ಟು ಹೋಗದಂತೆ ಐಸಿಸಿ ಸಲಹೆ ನೀಡಿದೆ.

ಧೋನಿ ಸ್ಟಂಪ್ಸ್ ಹಿಂದಿದ್ದರೆ ಸಾಮಾನ್ಯವಾಗಿ ಯಾವುದೇ ಬ್ಯಾಟ್ಸ್ ಮನ್ ಕೂಡ ಎರಡನೇ ಅವಕಾಶ ಪಡೆಯಲು ಸಾಧ್ಯವಿಲ್ಲ. ಈ ಕುರಿತಂತೆ ಐಸಿಸಿ ಕೂಡ ಜೀವನಕ್ಕೇ ಬೇಕಾದ ಅಮೂಲ್ಯ ಸಲಹೆ ನೀಡಿ ಎಂಬ ಟ್ವಿಟ್ಟರ್ ಬಳಕೆದಾರರೊಬ್ಬರಿಗೆ, ಧೋನಿ ಸ್ಟಂಪ್ಸ್ ಹಿಂದಿದ್ದರೆ ಯಾವುದೇ ಕಾರಣಕ್ಕೂ ಕ್ರೀಸ್ ಬಿಟ್ಟು ತೆರಳದಂತೆ ಸಲಹೆ ನೀಡಿದೆ. ಇದನ್ನು ಓದಿ: ಧೋನಿ ಸ್ಮಾರ್ಟ್ ವಿಕೆಟ್ ಕೀಪಿಂಗ್‍ಗೆ ದಂಗಾದ ನೀಶಮ್

ಅಂತಿಮ ಟೆಸ್ಟ್ ಪಂದ್ಯದ ಬಳಿಕ ಮಾತನಾಡಿದ ಜಾಧವ್ ಕೂಡ ಧೋನಿ ಸಲಹೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧೋನಿ ವಿಕೆಟ್ ಹಿಂದಿದ್ದರೆ ವಿದೇಶದಲ್ಲಿ ಇದ್ದರೂ ತವರಿನಲ್ಲಿ ಇರುವಂತೆ ಭಾಸವಾಗುತ್ತದೆ. ಏಕೆಂದರೆ ಧೋನಿ ನನಗೆ ಮಾತೃಭಾಷೆಯಲ್ಲೇ (ಮರಾಠಿ) ಸಲಹೆ ನೀಡುತ್ತಾರೆ ಎಂದು ಹೇಳಿದ್ದಾರೆ.

ಜಾಧವ್ ಸದ್ಯಕ್ಕೆ ಟೀಂ ಇಂಡಿಯಾಗೆ ಉಪಯುಕ್ತ 6ನೇ ಬೌಲರ್ ಆಗಿ ಲಭಿಸಿದ್ದು, ವಿಶೇಷ ಆ್ಯಕ್ಷನ್ ಮೂಲಕ ಬೌಲ್ ಮಾಡುವ ಜಾಧವ್ ವಿಕೆಟ್ ಉರುಳಿಸುವಲ್ಲೂ ಯಶಸ್ವಿಯಾಗುತ್ತಿದ್ದಾರೆ.

https://twitter.com/Vinothvj94/status/1092067971780890624

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *