ಜೀವನದಲ್ಲಿ ಎಂದೂ ನಾನು ಜಾತಿ ಆಧಾರದ ಮೇಲೆ ರಾಜಕಾರಣ ಮಾಡಿಲ್ಲ: ಹೆಚ್‌ಡಿಕೆ

Public TV
2 Min Read
h d kumaraswamy haveri 1

ಹಾವೇರಿ: ಜೀವನದಲ್ಲಿ ಎಂದೂ ನಾನು ಜಾತಿ ಆಧಾರದ ಮೇಲೆ ಎಂದೂ ರಾಜಕಾರಣ ಮಾಡಿಲ್ಲ. ಯಾವುದೇ ಒಬ್ಬ ವ್ಯಕ್ತಿಗೆ ಮನುಷ್ಯತ್ವ, ತಾಯಿ ಹೃದಯವಿಲ್ಲದಿದ್ರೆ ಹುಟ್ಟಿಯೂ ಉಪಯೋಗವಿಲ್ಲ. ರಾಜ್ಯದಲ್ಲಿ ಕೇವಲ ಮತಕ್ಕೋಸ್ಕರ ಹಲವು ಸಮಸ್ಯೆ ಹುಟ್ಟು ಹಾಕ್ತಿದ್ದಾರೆ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

h d kumaraswamy haveri 4

ಹಾವೇರಿ ಜಿಲ್ಲೆ ರಟ್ಟಿಹಳ್ಳಿಯ ಜೆಡಿಎಸ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ಸಾಲಮನ್ನಾ ಬಗ್ಗೆ ರಾಷ್ಟ್ರೀಯ ಪಕ್ಷಗಳು ಲಘುವಾಗಿ ಮಾತನಾಡಿದ್ದರು. ಅದಕ್ಕೆ ರೈತರ ಸಾಲಮನ್ನಾ ಮಾಡೋದು ಹೇಗೆ ಅನ್ನೋದನ್ನ ತೋರಿಸೋ ಒಂದೇ ಕಾರಣಕ್ಕೆ ನಾನು ಕಾಂಗ್ರೆಸ್ ಜೊತೆ ಕೈಜೋಡಿಸಿದೆ. ಈ ವರ್ಷದ ಕೊನೆಯಲ್ಲಿ ಚುನಾವಣೆ ಬರಬಹುದು ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: 89 ಜನರಿಗೆ ಕೊರೊನಾ, 85 ಜನ ಡಿಸ್ಚಾರ್ಜ್ – 4 ಸಾವು 

h d kumaraswamy haveri 3

ಯಾವುದೇ ಪಕ್ಷದ ಹಂಗಿಲ್ಲದೆ ನಮಗೆ ಒಂದು ಬಾರಿ ಅಧಿಕಾರ ಕೊಟ್ಟು ನೋಡಿ. ಪ್ರತಿ ಕುಟುಂಬಕ್ಕೆ ಒಂದು ಮನೆಯಾಗಬೇಕು, ಉದ್ಯೋಗ ಸಿಗುವಂತೆ ಮಾಡುತ್ತೇನೆ. ನಾನು ಹದಿನಾಲ್ಕು ತಿಂಗಳು ಸಿಎಂ ಆಗಿದ್ದಾಗ ಕೊಡಗಿನಲ್ಲಿ ಪ್ರಕೃತಿ ವಿಕೋಪವಾಗಿ ಕುಟುಂಬಗಳು ಬೀದಿಗೆ ಬಂದವು. ಅವರಿಗೆ ಮನೆ ಕಟ್ಟಿ ಕೊಟ್ಟೆವು. ಬಿಜೆಪಿ ಅವರು ನಮ್ಮ ಸರ್ಕಾರ ತೆಗೆದರು. ನನಗೆ ಅದರ ಬಗ್ಗೆ ಬೇಜಾರಿಲ್ಲ ಎಂದು ತಿಳಿಸಿದರು.

h d kumaraswamy haveri 5

ನಿಮ್ಮ ಮಕ್ಕಳಿಗೆ ಬೇಕಾಗಿರೋದು ಉತ್ತಮ ಶಿಕ್ಷಣವೋ.? ಮಕ್ಕಳ ಹೃದಯದಲ್ಲಿ ಧರ್ಮ ಧರ್ಮದ ನಡುವೆ ಕಿಚ್ಚು ಹಚ್ಚುತ್ತಿದ್ದಾರೆ. ಕಾಂಗ್ರೆಸ್ ಅವರು ಜೆಡಿಎಸ್‍ನ ಬಿಜೆಪಿಯ ಬಿಟೀಂ ಅಂತಿದ್ದಾರೆ. ಬಿಜೆಪಿ ಅವರು ನಮ್ಮ ಕುತ್ತಿಗೆ ಕೊಯ್ಯೋದಲ್ಲ, ನಿಮ್ಮನ್ನೆಲ್ಲ ಬೀದಿಗೆ ತಂದು ನಿಲ್ಲಿಸಿದ್ದಾರೆ. ಸಮಾಜ ಒಡೆದು ನೆಮ್ಮದಿಯ ವಾತಾವರಣ ಹಾಳು ಮಾಡಿ ಅದರ ಮೇಲೆ ಅಧಿಕಾರ ಹಿಡಿಯುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

h d kumaraswamy haveri 2

ಯುವಕರು ಅದಕ್ಕೆ ಅವಕಾಶ ಕೊಡಬೇಡಿ. ಜಾತ್ರೆಗಳಲ್ಲೂ ಧರ್ಮ ಬೆರೆಸಿದ್ದಾರೆ. ಇವರನ್ನೆಲ್ಲ ಎಲ್ಲಿಗೆ ಕಳಿಸ್ತೀರಿ.? ನಾನು ಯಾರ ಬಗ್ಗೆಯೂ ಚರ್ಚೆ ಮಾಡೋದಿಲ್ಲ. ಇಂತಹ ವಾತಾವರಣದಿಂದ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಕಳೆದೆರಡು ವರ್ಷಗಳಿಂದ ನಿಮ್ಮನ್ನೆಲ್ಲ ಎಲ್ಲಿ ತಂದು ನಿಲ್ಲಿಸಿದ್ದಾರೆ. ವಿಚಾರ ಮಾಡ್ರಿ ಎಂದು ಜನರಿಗೆ ಸಂದೇಶ ಕೊಟ್ಟರು.

h d kumaraswamy haveri

ಶಾಲೆಯಲ್ಲಿ ಒಬ್ಬರನ್ನೊಬ್ಬರ ಎತ್ತಿ ಕಟ್ಟೋರು ಬೇಕೋ.? ನಿಮಗೆ ನೆಮ್ಮದಿಯ ಬದುಕು ಕೊಡಬೇಕು ಎಂದುಕೊಂಡಿದ್ದೇನೆ. ಇಂಥವರು ಬೇಕೋ.? ನಮ್ಮ ಪಕ್ಷದವರು ಬೇಕು ನೀವೇ ಆಯ್ಕೆಮಾಡಿಕೊಳ್ಳಿ. ನಮಗೆ ಒಂದು ಬಾರಿ ಸ್ವತಂತ್ರ ಅವಕಾಶ ಕೊಡಿ. ನಿಮ್ಮ ಬದುಕನ್ನ ಉತ್ತಮಗೊಳಿಸುತ್ತೇನೆ. ಹೇಳಿದಂತೆ ಮಾಡದಿದ್ದರೆ ಮುಂದೆಂದೂ ನಿಮ್ಮ ಮುಂದೆ ಬಂದು ನಿಲ್ಲುವುದಿಲ್ಲ ಎಂದು ಶಾಪತ ಮಾಡಿದರು. ಇದನ್ನೂ ಓದಿ: ವಿಚ್ಛೇದನದ ವಿಚಾರಣೆ ಮುಗಿಸಿ ತವರಿಗೆ ಹೋಗುತ್ತಿದ್ದ ಪತ್ನಿ – ರಸ್ತೆಯಲ್ಲೇ ಕೊಚ್ಚಿ ಕೊಂದ ಪತಿ

Share This Article
Leave a Comment

Leave a Reply

Your email address will not be published. Required fields are marked *