ತಿರುವನಂತಪುರಂ: ಇಷ್ಟು ಬೇಗ ನಾನು ಬಿಡುಗಡೆಯಾಗುತ್ತೇನೆ ಅಂದುಕೊಂಡಿರಲಿಲ್ಲ. ನನ್ನ ಬಿಡುಗಡೆಗ ಸಹಕರಿಸಿದ ಭಾರತ ಸರ್ಕಾರಕ್ಕೆ (Indian Government) ಧನ್ಯವಾದಗಳು ಎಂದು ಇರಾನ್ (Iran) ವಶಪಡಿಸಿಕೊಂಡಿದ್ದ ಹಡಗಿನಿಂದ ಬಿಡುಗಡೆಯಾಗಿ ಸ್ವದೇಶಕ್ಕೆ ಮರಳಿದ ಟೆಸ್ಸಾ ಜೋಸೆಫ್ (Ann Tessa Joseph) ಹೇಳಿದ್ದಾರೆ.
ಕೊಟ್ಟಾಯಂನಲ್ಲಿರುವ ಮನಗೆ ಆಗಮಿಸಿದ ಟೆಸ್ಸಾ ಜೋಸೆಫ್ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಹಡಗಿನಲ್ಲಿದ್ದ 25 ಸಿಬ್ಬಂದಿಗಳ ಜೊತೆ ಇರಾನಿನ ಯಾರೂ ಕೆಟ್ಟದಾಗಿ ನಡೆಸಿಕೊಳ್ಳಲಿಲ್ಲ. ತಮ್ಮ ಕುಟುಂಬದ ಜೊತೆ ಸಂವಹನ ನಡೆಸಲು ವ್ಯವಸ್ಥೆ ಮಾಡಿಕೊಟ್ಟಿದ್ದರು ಎಂದು ತಿಳಿಸಿದರು.
Advertisement
ಹಡಗಿನಲ್ಲಿ ನಾನೊಬ್ಬಳೇ ಮಹಿಳೆ ಸಿಬ್ಬಂದಿಯಾಗಿದ್ದರಿಂದ ನನ್ನನ್ನು ಬೇಗ ಬಿಡುಗಡೆ ಮಾಡಿರಬಹುದು. ಉಳಿದ ಭಾರತದ 17 ಸಿಬ್ಬಂದಿ ಶೀಘ್ರವೇ ಬಿಡುಗಡೆಯಾಗಬಹುದು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ನೇರ ಮಧ್ಯಸ್ಥಿಕೆಯಿಂದಾಗಿ ನಾನು ಬೇಗ ಬಿಡುಗಡೆಯಾಗಿದ್ದೇನೆ. ಅವರಷ್ಟೇ ಅಲ್ಲದೇ ನನ್ನ ಬಿಡುಗಡೆಗೆ ಸಹಕರಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಉದ್ದೇಶಪೂರ್ವಕವಾಗಿಯೇ ಗುದ್ದಿ ಹತ್ಯೆ ಮಾಡಿದ್ದಾರೆ – ಕೊಡಗಿನಲ್ಲಿ ಕಾರ್ಯಕರ್ತನ ಹತ್ಯೆಗೆ ಬಿಜೆಪಿ ಆಕ್ರೋಶ
Advertisement
Advertisement
ನಾವು ಜೈಲುಪಾಲಾಗಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ. ನಮ್ಮನ್ನು ಕ್ರೂರವಾಗಿ ನಡೆಸಿಕೊಳ್ಳಲಿಲ್ಲ ಮತ್ತು ನಮಗೆ ಯಾವುದೇ ಆಹಾರದ ಸಮಸ್ಯೆ ಆಗಲಿಲ್ಲ ಎಂದು ಅವರು ವಿವರಿಸಿದರು.
Advertisement
ಕೇರಳದ ಮೂವರು ಸೇರಿದಂತೆ ಉಳಿದ 16 ಭಾರತೀಯರು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ. ಒಂಬತ್ತು ತಿಂಗಳ ಹಿಂದೆಯಷ್ಟೇ ಹಡಗಿನಲ್ಲಿ ಸಿಬ್ಬಂದಿಯಾಗಿ ನಾನು ಸೇರಿದ್ದೆ. ನಾನು ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸೆಯಿಂದ ಈ ಉದ್ಯೋಗಕ್ಕೆ ಸೇರಿದೆ. ಇದು ನನ್ನ ಮೊದಲ ಹಡಗು. ಈ ಘಟನೆಯಿಂದ ವಿಚಲಿತಳಾಗಿ ನಾನು ಉದ್ಯೋಗ ತೊರೆಯುವುದಿಲ್ಲ ಎಂದು ಅವರು ತಿಳಿಸಿದರು.
ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಗಳನ್ನು ಬರಮಾಡಿಕೊಂಡ ತಂದೆ ಬಿಜು ಅಬ್ರಹಾಂ ಮಾತನಾಡಿ, ಭಾರತ ಸರ್ಕಾರ ಮತ್ತು ಇತರ ಏಜೆನ್ಸಿಗಳ ಕಠಿಣ ಪರಿಶ್ರಮದಿಂದಾಗಿ ತಾನು ಇಷ್ಟು ಬೇಗ ಮನೆಗೆ ಮರಳಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಜೋಸೆಫ್ ಭಾರತಕ್ಕೆ ಬಂದಿಳಿದ ನಂತರ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಅವರು, ಇರಾನ್‌ನಲ್ಲಿರುವ ಭಾರತೀಯ ಮಿಷನ್‌ನ ಅದ್ಭುತ ಕೆಲಸ. ಟೆಸ್ಸಾ ಜೋಸೆಫ್ ಮನೆಗೆ ತಲುಪಿದ್ದಕ್ಕೆ ಸಂತೋಷವಾಗಿದೆ. ದೇಶ ಅಥವಾ ವಿದೇಶದಲ್ಲಿ ಇರಲಿ ಮೋದಿ ಕೀ ಗ್ಯಾರಂಟಿ ಯಾವಾಗಲೂ ಕೆಲಸ ಮಾಡುತ್ತದೆ ಎಂದು ಪೋಸ್ಟ್ ಮಾಡಿದ್ದರು.
Great work, @India_in_Iran . Glad that Ms. Ann Tessa Joseph has reached home. #ModiKiGuarantee always delivers, at home or abroad. https://t.co/VxYMppcPZr
— Dr. S. Jaishankar (Modi Ka Parivar) (@DrSJaishankar) April 18, 2024
ಏಪ್ರಿಲ್ 14 ರಂದು ಜೈಶಂಕರ್ ಇರಾನ್ ವಿದೇಶಾಂಗ ಸಚಿವ ಅಮೀರ್-ಅಬ್ದುಲ್ಲಾಹಿಯಾನ್ ಜೊತೆ ಮಾತುಕತೆ ನಡೆಸಿದ್ದರು. ಈ ಮಾತುಕತೆಯ ನಂತರ ಇರಾನ್ ಭಾರತೀಯ ಅಧಿಕಾರಿಗಳಿಗೆ ತನ್ನ ಪ್ರಜೆಗಳನ್ನು ಭೇಟಿಯಾಗಲು ಅನುಮತಿ ನೀಡಿತ್ತು.
ಇರಾನ್ ವಶಪಡಿಸಿಕೊಂಡ ಹಡಗಿನಲ್ಲಿ 17 ಮಂದಿ ಭಾರತೀಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರ ಸುರಕ್ಷಿತ ಬಿಡುಗಡೆ ಸಂಬಂಧ ಭಾರತ ಸರ್ಕಾರ ಇರಾನ್ ಜೊತೆ ನಿರಂತರ ಮಾತುಕತೆ ನಡೆಸುತ್ತಿದೆ.
ಇದನ್ನೂ ಓದಿ: ಹರ್ಷಿಕಾ-ಭುವನ್ ಮೇಲೆ ಹಲ್ಲೆ: ಪಾಕಿಸ್ತಾನದಲ್ಲಿ ಇದ್ದೀವಾ ಎಂದು ಪ್ರಶ್ನೆ ಮಾಡಿದ ನಟಿ
ಯುಎಇಯಿಂದ (UAE) ಸರಕು ತುಂಬಿಸಿಕೊಂಡು ಮುಂಬೈ (Mumbai) ಬಂದರಿಗೆ ಬರುತ್ತಿದ್ದ MCS Aries ಹೆಸರಿನ ಕಂಟೈನರ್ ಶಿಪ್ ಅನ್ನು Strait of Hormuz ಬಳಿ ಇರಾನ್ ಏ.14 ರಂದು ವಶಪಡಿಸಿಕೊಂಡಿತ್ತು. ಪೋರ್ಚುಗೀಸ್ ಧ್ವಜ ಹೊಂದಿದ್ದ ಈ ಹಡಗಿನ ಮೇಲೆ ಇರಾನ್ ನೌಕಾ ದಳದ ಸೈನಿಕರು ಹೆಲಿಕಾಪ್ಟರ್‌ನಿಂದ ನೇರವಾಗಿ ಇಳಿದು ದಾಳಿ ಮಾಡಿ ವಶ ಪಡಿಸಿಕೊಂಡಿದ್ದಾರೆ. ಈ ಹಡಗು ಇಸ್ರೇಲಿ (Israel) ಬಿಲಿಯನೇರ್ ಇಯಾಲ್ ಆಫರ್ ಒಡೆತನದ ಲಂಡನ್ ಮೂಲದ ಜೊಡಿಯಾಕ್ ಮಾರಿಟೈಮ್‌ನೊಂದಿಗೆ ಕಂಪನಿಯೊಂದಿಗೆ ಸಂಯೋಜಿತವಾಗಿದೆ. ಈ ಹಡಗು ಏ.15ರ ರಾತ್ರಿ ಮುಂಬೈ ಬಂದರಿಗೆ ಆಗಮಿಸಬೇಕಿತ್ತು.