ಕೀವ್: ರಷ್ಯಾ-ಉಕ್ರೇನ್ ಯುದ್ಧದ ಕುರಿತು ಭಾರತದ ನಿಲುವಿನ ಬಗ್ಗೆ ಮಾತನಾಡಿದ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ತಟಸ್ಥತೆ ಯುದ್ಧವನ್ನು ನಿಲ್ಲಿಸಲು ಸಹಾಯ ಮಾಡುವುದಿಲ್ಲ ಎಂದು ಹೇಳಿದರು.
ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿ 2 ತಿಂಗಳು ಕಳೆದಿವೆ. ಭಾರತ ಈ ಎರಡು ದೇಶಗಳಲ್ಲಿ ಯವುದಕ್ಕೂ ಬೆಂಬಲ ನೀಡದೇ ತಟಸ್ಥ ನಿಲುವನ್ನು ಪ್ರದರ್ಶಿಸಿದೆ. ಇದರ ನಡುವೆಯೂ ಹಲವು ಬಾರಿ ಉಕ್ರೇನ್ ಹಾಗೂ ರಷ್ಯಾ ದೇಶಗಳಿಗೆ ಯುದ್ಧ ನಿಲ್ಲಿಸುವಂತೆ ಮನವಿಯನ್ನೂ ಮಾಡಿದೆ. ಇದನ್ನೂ ಓದಿ: ಕರಾಚಿ ಸೂಸೈಡ್ ಬಾಂಬರ್ ಎಂಫಿಲ್ ಪದವೀಧರೆ, 2 ಮಕ್ಕಳ ತಾಯಿ – ಕೃತ್ಯ ಎಸಗಿದ್ದು ಯಾಕೆ?
Advertisement
Advertisement
ಯುದ್ಧದ ಬಗ್ಗೆ ತಟಸ್ಥ ನಿಲುವನ್ನು ಹೊಂದಿರುವ ಭಾರತದ ಬಗ್ಗೆ ಮಾತನಾಡಿದ ಉಕ್ರೇನ್ ವಿದೇಶಾಂಗ ಸಚಿವ, ಭಾರತದ ಸಹಾನುಭೂತಿ ಹಾಗೂ ಯುದ್ಧವನ್ನು ನಿಲ್ಲಿಸಬೇಕು ಎಂಬ ನಿಲುವನ್ನು ಪ್ರಶಂಸಿಸುತ್ತೇವೆ. ಆದರೆ ತಟಸ್ಥ ಧೋರಣೆ ಯುದ್ಧವನ್ನು ನಿಲ್ಲಿಸಲು ಸಹಾಯ ಮಾಡುವುದಿಲ್ಲ ಎಂಬುದನ್ನು ನಾನು ತಿಳಿಸಬಯಸುತ್ತೇನೆ ಎಂದರು. ಇದನ್ನೂ ಓದಿ: ಚೀನಿಯರ ನೆತ್ತರು ವ್ಯರ್ಥವಾಗಲು ಬಿಡಲ್ಲ: ಪಾಕ್‌ನಲ್ಲಿ ತನ್ನ ಪ್ರಜೆಗಳ ಹತ್ಯೆಗೆ ಚೀನಾ ಕಿಡಿ
Advertisement
Advertisement
ಯುದ್ಧವನ್ನು ನಿಲ್ಲಿಸಲು ಉತ್ತಮ ಮಾರ್ಗವೆಂದರೆ ಉಕ್ರೇನ್ ಅನ್ನು ಬೆಂಬಲಿಸುವುದು ಹಾಗೂ ಯುದ್ಧವನ್ನು ಗೆಲ್ಲಬಹುದು ಎಂಬ ಭ್ರಮೆಯಲ್ಲಿರುವ ರಷ್ಯಾದ ಕೈ ಬಿಡುವುದು. ಅಪರಾಧಿ ಹಾಗೂ ಬಲಿಪಶುಗಳು ಯಾರೆಂಬುದು ಸ್ಪಷ್ಟವಾಗಿ ಕಾಣಿಸುತ್ತಿರುವಾಗ ಬಲಿಪಶುವಿನ ಪರವಾಗಿರುವುದು ನೈತಿಕ ಹಾಗೂ ರಾಜಕೀಯವಾಗಿ ಬುದ್ಧಿವಂತರ ಕರ್ತವ್ಯ ಎಂದು ಕುಲೆಬಾ ಭಾರತಕ್ಕೆ ಸಲಹೆ ನೀಡಿದ್ದಾರೆ.