ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾದ ‘ಬೇಷರಂ ರಂಗ್’ ಹಾಡು ಎರಡು ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿದೆ. ಈ ಹಾಡನ್ನು ಹದಿನೈದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಆದರೆ, ಈ ಹಾಡಿನಲ್ಲಿ ದೀಪಿಕಾ ಹಾಕಿರುವ ಡ್ರೆಸ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಕೇಸರಿಯ ಬಿಕಿನಿಯಲ್ಲಿ ದೀಪಿಕಾ ಕಾಣಿಸಿಕೊಂಡಿದ್ದು, ಈ ಹಾಡಿನ ಸಾಲಿಗೆ ಹಾಕಿರುವ ಡ್ರೆಸ್ ಗೂ ಹೊಂದಾಣಿಕೆ ಮಾಡಿಕೊಂಡು ನೆಟ್ಟಿಗರು ಗರಂ ಆಗಿದ್ದಾರೆ. ಈ ಕಾರಣದಿಂದಾಗಿ ಚಿತ್ರಕ್ಕೆ ಬಹಿಷ್ಕಾರ ಹಾಕುವಂತೆ ಸೋಷಿಯಲ್ ಮೀಡಿಯಾದಲ್ಲಿ ಕರೆ ನೀಡುತ್ತಿದ್ದಾರೆ.
Advertisement
ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ತುಂಡುಡುಗೆ ತೊಟ್ಟಿದ್ದಾರೆ. ‘ಬೇಷರಂ ರಂಗ್’ ಅಂದರೆ ಕನ್ನಡದಲ್ಲಿ ನಾಚಿಕೆ ಇಲ್ಲದ ಬಣ್ಣ ಎಂದಾಗುತ್ತದೆ. ಕೇಸರಿ ಬಣ್ಣಕ್ಕೆ ನಾಚಿಕೆ ಇಲ್ಲದ ಬಣ್ಣ ಎಂದು ಜರಿದಿದ್ದಾರೆ ಎಂದು ಹೋಲಿಕೆ ಮಾಡಿಕೊಂಡು ಹಲವರು ಗರಂ ಆಗಿದ್ದಾರೆ. ಬೇಕು ಅಂತಾನೇ ಈ ರೀತಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಹೀಗಾಗಿ ಬೈಕಾಟ್ ಪಠಾಣ್ ಟ್ರೆಂಡ್ ಹೆಚ್ಚಿದೆ.
Advertisement
Advertisement
ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಮೂಲಕ ಸಾಕಷ್ಟು ಭರವಸೆ ಮೂಡಿಸಿರುವ ಈ ಸಿನಿಮಾ, ಮೊದಲ ಹಾಡಿನ ಮೂಲಕ ಪ್ರಚಾರ ಆರಂಭಿಸಲಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಕಾಂಬಿಷೇನ್ ನ ಸಿನಿಮಾ ಇದಾಗಿದ್ದು, ಶುರುವಿನಿಂದ ಈವರೆಗೂ ಕುತೂಹಲವನ್ನು ಕಾಪಾಡಿಕೊಂಡೇ ಬರುತ್ತಿದೆ. ಶಾರುಖ್ ಈ ಸಿನಿಮಾದಲ್ಲಿ ಮತ್ತೆ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳು ಸಂಭ್ರಮಿಸುವಂತೆ ಮಾಡಿದ್ದಾರೆ. ಇದನ್ನೂ ಓದಿ: `ಕಾಂತಾರ’ ನೋಡಿ ತುಂಬಾ ಕಲಿತೆ: ರಿಷಬ್ ಚಿತ್ರಕ್ಕೆ ಹೃತಿಕ್ ರೋಷನ್ ಮೆಚ್ಚುಗೆ
Advertisement
ಹಾಡು ರಿಲೀಸ್ ಆಗುತ್ತಿರುವ ವಿಷಯವನ್ನು ಸ್ವತಃ ಶಾರುಖ್ ಖಾನ್ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಈ ಹಾಡನ್ನು ನೋಡಲು ತಾವೂ ಕೂಡ ಕಾತರದಿಂದ ಕಾಯುತ್ತಿರುವುದಾಗಿಯೂ ಅವರು ಹೇಳಿಕೊಂಡಿದ್ದರು. ಅಲ್ಲದೇ ಅಭಿಮಾನಿಗಳು ಕೂಡ ಅಷ್ಟೇ ಕುತೂಹಲದಿಂದಲೇ ಹಾಡಿಗಾಗಿ ಕಾದಿದ್ದರು. ಬಿಡುಗಡೆಯಾದ ಹಾಡಿಗೆ ಅಭಿಮಾನಿಗಳು ಕೂಡ ಜೈಕಾರ ಹಾಕಿದ್ದಾರೆ.
ಇದು ಶಾರುಖ್ ಖಾನ್ ವೃತ್ತಿ ಜೀವನದ ಮಹತ್ವದ ಸಿನಿಮಾ ಎನ್ನಲಾಗುತ್ತಿದ್ದು, ಸತತ ಸೋಲಿನ ಬಳಿಕೆ ಬಾಲಿವುಡ್ ಗೆ ಈ ಸಿನಿಮಾ ಶಕ್ತಿ ತುಂಬಲಿದೆ ಎಂದು ಹೇಳಲಾಗುತ್ತಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಕಾಂಬಿನೇಷನ್ ಇರುವುದರಿಂದ ಬಾಕ್ಸ್ ಆಫೀಸಿನಲ್ಲೂ ಈ ಸಿನಿಮಾ ಹಿಟ್ ಆಗಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಇಂದು ಬಿಡುಗಡೆ ಆಗಿರುವ ಹಾಡು ಅಂಥದ್ದೊಂದು ಭರವಸೆಯನ್ನೂ ಮೂಡಿಸಿದೆ.