ಕಾರವಾರ: 13ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆಯುತ್ತಿದ್ದು, ಟೀಂ ಇಂಡಿಯಾ (Team India) ಗೆಲುವಿಗೆ ಕೋಟ್ಯಂತರ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಆದ್ರೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮುರುಡೇಶ್ವರ ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯ ಸಾಹಸಿಗರು ಸಮುದ್ರದಾಳದಲ್ಲಿ ವಿಶೇಷ ಪೋಸ್ಟರ್ ಹಿಡಿದು ವಿಭಿನ್ನವಾಗಿ ಶುಭ ಹಾರೈಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮುರುಡೇಶ್ವರ ನೇತ್ರಾಣಿ ಅಡ್ವೆಂಚರ್ಸ್ (Netrani Adventures) ಸಂಸ್ಥೆ ನೇತ್ರಾಣಿ ಸಮುದ್ರದಾಳದ ನಡುಗಡ್ಡೆಯಲ್ಲಿ ಸ್ಕೂಬಾ ಡೈವ್ (Scuba Diving) ಮಾಡುವ ಮೂಲಕ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿ ಎಂದು ಶುಭ ಹಾರೈಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ 32 ಓವರ್‌ಗಳಲ್ಲಿ4 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿದೆ. ಇದನ್ನೂ ಓದಿ: World Cup 2023- ಬ್ಯಾಟಿಂಗ್ ಮಾಡ್ತಿರೋ ಪತಿಗಳನ್ನು ಹುರಿದುಂಬಿಸ್ತಿರೋ ಅನುಷ್ಕಾ, ಅಥಿಯಾ
ರೋಹಿತ್ ಶರ್ಮಾ 47 ರನ್ (31 ಎಸೆತ, 3 ಸಿಕ್ಸರ್, 4 ಬೌಂಡರಿ), ಶುಭಮನ್ ಗಿಲ್ 4 ರನ್, ವಿರಾಟ್ ಕೊಹ್ಲಿ 54 ರನ್ (63 ಎಸೆತ, 4 ಬೌಂಡರಿ) ಮತ್ತು ಶ್ರೇಯಸ್ ಅಯ್ಯರ್ 4 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾ ಪರ ಮಾರಕ ಬೌಲಿಂಗ್ ದಾಳಿ ನಡೆಸುತ್ತಿರುವ ನಾಯಕ ಪ್ಯಾಟ್ ಕಮ್ಮಿನ್ಸ್ 2 ವಿಕೆಟ್ ಕಿತ್ತರೆ, ಮಿಚೆಲ್ ಸ್ಟಾರ್ಕ್ ಮತ್ತು ಗ್ಲೇನ್ ಮ್ಯಾಕ್ಸ್‌ವೆಲ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ: ದಾಖಲೆಗಾಗಿ ಆಡದೇ ಇದ್ದರೂ ವಿಶ್ವದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ