ಬೆಂಗಳೂರು: ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿ ಸದ್ಯ ಜೈಲು ಸೇರಿರೋ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್, ಹಲ್ಲೆ ನಡೆದ 11 ದಿನಗಳ ಹಿಂದೆ ಮಾದಕವಸ್ತುಗಳ ನಿಗ್ರಹದ ಬಗ್ಗೆ ಭಾಷಣ ಮಾಡಿದ್ದ ವಿಡಿಯೋ ಈಗ ವೈರಲ್ ಆಗಿದೆ. ಇದನ್ನು ನೋಡಿದ ಜನ ಈಗ ನಲಪಾಡ್ ಬಗ್ಗೆ ಉಗಿದು ಉಪ್ಪಾಕ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕ ರಣಜಿ ಆಟಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ರೌಡಿ ನಲಪಾಡ್!
Advertisement
ಟೆಡೆಕ್ಸ್ ಸಂಘಟನೆಯು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಶಕ್ತಿ ವಿಷಯದ ಬಗ್ಗೆ ನಲಪಾಡ್ ಮಾತನಾಡಿದ್ದ. ಮಾದಕ ವಸ್ತುಗಳ ನಿಗ್ರಹಕ್ಕೆಂದು ಟೀಮ್ ನಲಪಾಡ್ ಕಟ್ಟಿಕೊಂಡಿದ್ದೇನೆ ಎಂದು ಹೇಳಿದ್ದ. ನಲಪಾಡ್ ಮಾದಕವ್ಯಸನದ ಅಮಲಿನಲ್ಲೇ ಹಲ್ಲೆ ನಡೆಸಿರಬಹುದು ಎಂಬ ಅನುಮಾನ ಪೊಲೀಸರಿಗೆ ಇದೆ. ಆರೋಪಿಯ ವೈದ್ಯಕೀಯ ಪರೀಕ್ಷೆ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
Advertisement
ಭಾಷಣದಲ್ಲಿ ನಲಪಾಡ್, ತನ್ನ ರಾಜಕೀಯ ಎಂಟ್ರಿ ಬಗ್ಗೆ ಮಾತಾಡಿದ್ದಾನೆ. ನನಗೀಗ 27 ವರ್ಷ, ಯುವಜನರ ಶಕ್ತಿ ಏನೆಂಬುದನ್ನು ತೋರಿಸಲು ರಾಜಕೀಯಕ್ಕೆ ಬಂದೆ. ಎರಡು ಪ್ರಮುಖ ಸವಾಲುಗಳ ವಿರುದ್ಧ ನಾನು ಹೋರಾಡಬೇಕಿದೆ. ಒಂದು ಮತಗಳ ಮಾರಾಟ. ಇನ್ನೊಂದು ಡ್ರಗ್ಸ್ ದಂಧೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ಜೈಲಿನಲ್ಲೂ ಮುಂದುವರಿದ ನಲಪಾಡ್ ಪುಂಡಾಟ- ನಿನ್ನಿಂದ ನಾವು ಜೈಲು ಸೇರುವಂತಾಯ್ತು ಎಂದ ಸ್ನೇಹಿತ ಅಬ್ರಾಸ್ ಮೇಲೆ ಹಲ್ಲೆ
Advertisement
Advertisement
ಹಣಕ್ಕಾಗಿ ಮತಗಳನ್ನು ಮಾರಾಟ ಮಾಡುವುದು ತಪ್ಪು ಅನ್ನೋದು ಎಲ್ಲರಿಗೂ ಗೊತ್ತು. ಆದರೂ ಅದನ್ನೇ ಎಲ್ಲರೂ ಮಾಡುತ್ತಿದ್ದಾರೆ. ಯುವಜನತೆ ಡ್ರಗ್ಸ್ ವ್ಯಸನಿಗಳಾಗುತ್ತಿದ್ದಾರೆ. ಈ ಮಾತುಗಳನ್ನು ನಾನು ಬರೆದುಕೊಂಡು ಹೇಳುತ್ತಿಲ್ಲ. ನೇರವಾಗಿ ಹೃದಯದಿಂದ ಹೇಳುತ್ತಿದ್ದೇನೆ ಎಂದಿದ್ದ.
ನನ್ನ ತಾತ ಹಾಗೂ ತಂದೆ ಇಬ್ಬರೂ ರಾಜಕಾರಣಿಗಳು. ಮನೆಯಲ್ಲೇ ಆಡಳಿತ ನೋಡುತ್ತ ಬೆಳೆದವನು ನಾನು. ಯುವ ಜನರು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಬೇಕು ಎಂಬುದು ನನ್ನ ಉದ್ದೇಶ. ನನಗೂ ಬಹಳ ಸ್ನೇಹಿತರು ಇದ್ದಾರೆ. ಅವರಲ್ಲಿ ಹಲವರು ವ್ಯಸನಿಗಳಾಗುತ್ತಿರುವುದನ್ನು ನೋಡುತ್ತಿದ್ದೇನೆ. ಆಗ ನಾನು ಏನು ಮಾಡುತ್ತಿದ್ದೇನೆ, ಬೇರೆಯವರು ಏನು ಮಾಡುತ್ತಿದ್ದಾರೆ. ಸಮಾಜದಲ್ಲಿ ಏನಾಗುತ್ತಿದೆ ಎಂಬ ಚಿಂತೆ ನನ್ನನ್ನು ಕಾಡುತ್ತದೆ ಎಂದು ಹೇಳಿದ್ದ. ಇದನ್ನೂ ಓದಿ: ರೌಡಿ ನಲಪಾಡ್ ಪ್ರಕರಣಕ್ಕೆ ಆರಂಭದಲ್ಲೇ ಸಮಾಧಿ ಕಟ್ಟಲು ಮುಂದಾದ ಪೊಲೀಸರು!
14 ವರ್ಷಕ್ಕೇ ಸಾಕಷ್ಟು ಮಕ್ಕಳು ವ್ಯಸನಿಗಳಾಗುತ್ತಿದ್ದಾರೆ. ಹೀಗಾಗಿ ಶಾಲೆ, ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದೇನೆ. ಯಾವುದು ಕೆಟ್ಟದ್ದು, ಯಾವುದು ಒಳ್ಳೆಯದು ಎಂದು ತಿಳಿಸುತ್ತಿದ್ದೇನೆ. `ಆ್ಯಂಟಿ ಡ್ರಗ್ಸ್ ಡ್ರೈವ್’ ಆರಂಭಿಸಿದಾಗ ಬೆದರಿಕೆಗಳು ಬಂದವು. ಅದು ಸೂಕ್ಷ್ಮ ವಿಷಯ. ನಿನಗೆ ಏಕೆ ಬೇಕು ಎಂದು ಹಲವರು ಎಚ್ಚರಿಸಿದರು. ನಾನು ಹುಟ್ಟಿದ್ದು ಒಮ್ಮೆ. ಸಾಯುವುದು ಸಹ ಒಮ್ಮೆಯೇ. ನಿತ್ಯವೂ ಸಾಯುವುದಿಲ್ಲ. ಹೃದಯ ಹೇಳಿದಂತೆ ಕೆಲಸ ಮಾಡುತ್ತೇನೆಂದು ಅವರಿಗೆಲ್ಲ ಹೇಳಿದ್ದೆ’ ಎಂದೆಲ್ಲಾ ಉದ್ದುದ್ದ ಭಾಷಣ ಬಿಗಿದಿದ್ದ. ಇದನ್ನೂ ಓದಿ: ಖಾಸಗಿ ವಿಮಾನ ಖರೀದಿಸಲು ಮುಂದಾಗಿದ್ದ ರೌಡಿ ನಲಪಾಡ್!
ಭಾರತ 2020ರ ಹೊತ್ತಿಗೆ ಬಲಶಾಲಿ ದೇಶವಾಗಬೇಕು. ಅದನ್ನು ಸಾಧಿಸುವ ಕೆಲಸದಲ್ಲಿ ನಾನು ಪಾಲ್ಗೊಂಡಿದ್ದೇನೆ. ನೀವೆಲ್ಲರೂ ಪಾಲ್ಗೊಳ್ಳಬೇಕು. ನಮ್ಮ ತಂಡದ ಪ್ರತಿನಿಧಿಗಳಾಗಿ ಡ್ರಗ್ಸ್ ವಿರುದ್ಧ ಹೋರಾಡಬೇಕು ಎಂದು ನಲಪಾಡ್ ಹೇಳಿದ್ದ. ಬೇರೆಯವರಿಗೆ ಕೆಟ್ಟದ್ದನ್ನು ಮಾಡದೆ ವೈಯಕ್ತಿಕ ಜೀವನಕ್ಕೆ ಸೀಮಿತವಾಗಿರುತ್ತಾನೋ ಆತ ಉತ್ತಮ ವ್ಯಕ್ತಿ ಆಗುತ್ತಾನೆ. ಯಾವ ವ್ಯಕ್ತಿ ವೈಯಕ್ತಿಕ ಜೀವನದೊಂದಿಗೆ ಸಮಾಜ ಹಾಗೂ ದೇಶದ ಬಗ್ಗೆ ಯೋಚಿಸುತ್ತಾನೋ ಆತ ಮಹಾನ್ ವ್ಯಕ್ತಿ ಆಗುತ್ತಾನೆ. ನಾನು ಮಹಾನ್ ವ್ಯಕ್ತಿ ಆಗಬೇಕು. ನೀವೆಲ್ಲರೂ ಮಹಾನ್ ವ್ಯಕ್ತಿಯಾಗಲು ಬಯಸುತ್ತೇನೆ ಎಂದಿದ್ದ. ಇದನ್ನೂ ಓದಿ: ಮೈಮೇಲೆ ಕುರ್ಚಿಗಳನ್ನು ಎಸೆದ್ರು, sorry ಎಂದರೂ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದ್ರು- ನಲಪಾಡ್ ದಾಳಿ ಬಗ್ಗೆ ವಿದ್ವತ್ Exclusive ಮಾತು
ಪಾರ್ಟಿ ಮಾಡೋದು ತಪ್ಪಲ್ಲ, ಮಿತಿ ಇರಬೇಕು ಅಂದಿದ್ದ: ನಾನೂ ಪಾರ್ಟಿಗೆ ಹೋಗುತ್ತೇನೆ. ನನ್ನದೇ ಸ್ನೇಹಿತ ವರ್ಗವಿದೆ. ಆದ್ರೆ ಯಾವುದು ಸರಿ? ಏನು ಮಾಡ್ಬೇಕು, ಏನು ಮಾಡಬಾರದು ಅನ್ನೋದು ನನಗೆ ಗೊತ್ತು. ನಾನು ಕಾಲೇಜುಗಳಿಗೆ ಹೋದಾಗ ಹೇಳ್ತಿದ್ದೆ, ಪಾರ್ಟಿ ಮಾಡೋದು ತಪ್ಪಲ್ಲ. ನಮ್ಮ ಒತ್ತಡಗಳನ್ನ ಹೊರಹಾಕಬೇಕು. ಬರೀ ಓದುವುದು, ಕಾಲೇಜಿಗೆ ಓದಿ ಬರಲು ಆಗಲ್ಲ. ಫನ್ ಮಾಡಬೇಕು. ಆದ್ರೆ ಅದು ಸಿನಿಮಾಗೆ ಹೋಗೋದು, ಹೊರಗಡೆ ಹೋಗೋದಕ್ಕೆ, ನೈಟ್ ಕ್ಲಬ್‍ಗೆ ಸೀಮಿತವಾಗಿರಬೇಕು. ಆದ್ರೆ ಕೆಲವರು ನಿಮ್ಮನ್ನ ತಪ್ಪು ದಾರಿಗೆ ಕೊಂಡೊಯ್ಯಬಹುದು. ಅದು ಸಿಗರೇಟ್‍ನಿಂದ ಶುರುವಾಗಬಹುದು. ಅದರಿಂದ ವೀಡ್‍ಗೆ ದಾರಿ ಮಾಡಿಕೊಡುತ್ತದೆ. ಅದು ಮತ್ತೊಂದಕ್ಕೆ ಪ್ರಚೋದಿಸುತ್ತದೆ. ಕೊನೆಗೆ ಅದರಿಂದ ಹೊರಬರಲು ಸಾಧ್ಯವಿಲ್ಲ. ಆದ್ದರಿಂದ ಈ ಬಗ್ಗೆ ನಿಮಗೆ ಎಚ್ಚರ ಇದ್ರೆ ಸಾಕು. ಈ ಬಗ್ಗೆ ಗೂಗಲ್‍ನಲ್ಲಿ ಹುಡುಕಿ ನೋಡಿ ಏನು ಲಾಭ ಇದೆ ಅಂತ. ಗೂಗಲ್ ಕೂಡ ಏನೂ ಲಾಭ ಇಲ್ಲ ಎಂದು ಹೇಳುತ್ತೆ ಎಂದೆಲ್ಲಾ ಹೇಳಿದ್ದ. ಇದನ್ನೂ ಓದಿ:ಶಾಂತಿನಗರದಲ್ಲಿ ರೌಡಿ ನಲಪಾಡ್ ಹೇಳಿದ್ದೇ ಶಾಸನವಂತೆ..!
ಭಾಷಣದ ವಿಡಿಯೋವನ್ನು ಟೆಡೆಕ್ಸ್ ಟಾಕ್ಸ್ ಯುಟ್ಯೂಬ್ ಚಾನಲ್‍ನಲ್ಲಿ ಅಪ್‍ಲೋಡ್ ಮಾಡಲಾಗಿದ್ದು, ಅದನ್ನು ವೀಕ್ಷಿಸಿದವರು, ನಲಪಾಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋ ಅಳಿಸಿಹಾಕುವಂತೆ ಒತ್ತಾಯಿಸಿದ್ದಾರೆ. ಬೆಂಗಳೂರಿನ ಗೂಂಡಾ ರೌಡಿ, ಟೆಡೆಕ್ಸ್ ಟಾಕ್ಸ್ ನಲ್ಲಿ ಕ್ರಿಮಿನಲ್, ಟೀಂ ನಲಪಾಡ್ ಪಾರ್ಟಿ ಮಾಡಲು ಹೋದಾಗ ಏನಾಯ್ತು ಅಂತ ನಮಗೆಲ್ಲಾ ಗೊತ್ತು ಅಂತ ಜನ ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ನಲಪಾಡ್ ಬಳಿ ಇವೆ ಪೊಲೀಸರು, ಮಿಲಿಟರಿಯವರು ಬಳಸೋ ಬೋರ್ ಗನ್!
ಮೊನಿಷ್ ಗೌಡ ಎಂಬವರು ಕಮೆಂಟ್ ಮಾಡಿ, `ಕೇರಳದಿಂದ ಬಂದು ಬೆಂಗಳೂರು ಹಾಳು ಮಾಡುತ್ತಿದ್ದಾನೆ. ಇದಕ್ಕೆ ಕಬ್ಬನ್ ಪಾರ್ಕ್ ಪೊಲೀಸರು ಸಹಕರಿಸುತ್ತಿದ್ದಾರೆ’ ಎಂದಿದ್ದಾರೆ. ಇದನ್ನೂ ಓದಿ:ವಿದ್ವತ್ ಮೇಲೆ ನಲಪಾಡ್ ಹಲ್ಲೆ ಪ್ರಕರಣ- ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಮುಂದಾಗಿದ್ದ ಯುಬಿ ಸಿಟಿ ಸಿಬ್ಬಂದಿ
ಮಧು ಗೌಡ್, `ಈತ ಕ್ರಿಮಿನಲ್. ಈ ವಿಡಿಯೊ ಅಳಿಸಿಹಾಕಿ’ ಎಂದಿದ್ದಾರೆ. ಅಜಯ್ ಆಂಥೋನಿ, `ಈತ ರೌಡಿ. ಮುಂಬರುವ ರಾಜಕಾರಣಿ’ ಎಂದು ಪ್ರತಿಕ್ರಿಯೆ ಹಾಕಿದ್ದಾರೆ. ಇದನ್ನೂ ಓದಿ: ರೌಡಿ ನಲಪಾಡ್ ಹೊಗಳಿ ಈಗ ಅಭಿಮಾನಿಗಳ ಜೊತೆ ಕ್ಷಮೆ ಕೇಳಿದ ಪ್ರಕಾಶ್ ರೈ
https://www.youtube.com/watch?v=Td7mLFnMccM